ಕಲಬುರಗಿ | ಯೋಗ ದಿನಾಚರಣೆ ನಿಮಿತ್ತ ಸಸಿ ನೆಡುವ ಕಾರ್ಯಕ್ರಮ

ಕಲಬುರಗಿ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಕನಸು ಸೇವಾ ಸಂಸ್ಥೆ, ಕಾಯಕ ಸೇವಾ ಸಂಸ್ಥೆ ಮತ್ತು ಸದ್ಗುರು ಶ್ರೀ ಶಿವಶರಣಾನಂದ ಸಂಸ್ಥೆಯ ಸಹಯೋಗದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ಒಟ್ಟು 50 ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಕೇದಾರನಾಥ ಕುಲಕರ್ಣಿ, ಶರಣಬಸಪ್ಪ ಕುಂದಗೋಳ, ಸತೀಶ್, ಸಂತೋಷ ಕುಮಾರ್ ಎಸ್.ಪಿ, ಹುಸೇನಿ ಪಾಳಾ, ರಾಚಯ್ಯ ಸ್ವಾಮಿ ಹಿರೇಮಠ, ಯಲ್ಲಪ್ಪಾ, ಜೀವಾ, ಶಶಿ ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Next Story





