ಕಲಬುರಗಿ | ಕ್ರೀಡಾಕೂಟದಲ್ಲಿ ವಿಜೇತರಾದ ಪೊಲೀಸ್ ಸಿಬ್ಬಂದಿಗಳಿಗೆ ಸನ್ಮಾನ

ಕಲಬುರಗಿ : ಕೇಂದ್ರ ಕಾರಾಗೃಹ ವೀಕ್ಷಕರಾದ ಬಾಲನಗೌಡ ಮತ್ತು ಭೀಮರೆಡ್ಡಿ ಇವರುಗಳು ಶಿವಮೊಗ್ಗದಲ್ಲಿ ನಡೆದ ಮೂರು ದಿನಗಳ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ ಓಟ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನುಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಪ್ರಯುಕ್ತ ಮುಖ್ಯಸ್ಥರಾದ ಡಾ.ಅನಿತಾ ಆರ್. ಅವರು ವಿಜೇತರಾದ ವೀಕ್ಷಕರುಗಳಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಡಳಿತ ಅಧಿಕಾರಿಯಾದ ಭೀಮಾಶಂಕರ ಡಾಂಗೆ, ಶಿಕ್ಷಕ ನಾಗರಾಜ ಮೂಲಗೆ, ಜೈಲರ್ ಗಳಾದ ಸಾಗರ ಪಾಟೀಲ್, ಶ್ರೀಮಂತಗೌಡ ಪಾಟೀಲ್, ಮುಖ್ಯ ವೀಕ್ಷಕರರುಗಳಾದ ಶ್ರೀನಿವಾಸ ಭಜಂತ್ರಿ, ಮಹೇಶ್ ಪಾಟೀಲ್, ಶ್ರೀಕಾಂತ್ ರಂಜೇರಿ, ಬಂಡೆಪ್ಪ ಬಡಿಗೇರ್, ಹಾಗೂ ಬಿ.ಪಿ ಕಾಳಿಂಗ್ ಇತರರು ಭಾಗವಹಿಸಿ ಶುಭ ಕೋರಿದರು ಹಾಗೂ ಎಲ್ಲಾ ಕಛೇರಿ ಅಧಿಕಾರಿ/ ಸಿಬ್ಬಂದಿಗಳು ಶುಭ ಹಾರೈಸಿದರು.
Next Story





