ಕಲಬುರಗಿ | ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಪ್ರತಿಭಟನೆ

ಕಲಬುರಗಿ : ಜೇವರ್ಗಿ ಪಟ್ಟಣದ ಬಸ್ ಡಿಪೋ ಎದುರುಗಡೆಯ ದುರ್ಗಾ ಬಾರ್‌ನ ನೌಕರರು ಊಟಕ್ಕೆ ಬಂದ ಗ್ರಾಹಕರ ಮೇಲೆ ಹಾಕಿ ಸ್ಟಿಕ್ ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿರುವುದನ್ನು ಖಂಡಿಸಿ ಕ್ರಮಕ್ಕೆ ಒತ್ತಾಯಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಸಂಘಟನೆಯಿಂದ ಜೇವರ್ಗಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಯಿತು.
ವಿಶ್ವನಾಥ ರಾವೂರ, ನಿಂಗಣ್ಣ ರಾವೂರ, ರವಿ ಅವರಾದ ಎಂಬ ಯುವಕರ ಮೇಲೆ ಹಲ್ಲೆ ನಡೆದಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಸಂಘಟನೆಯು ಪ್ರವಾಸಿ ಮಂದಿರದಿಂದ ಜೇವರ್ಗಿ ಪೊಲೀಸ್ ಠಾಣೆವರೆಗೆ ಪ್ರತಿಭಟನೆ ನಡೆಸಿ, ಜೇವರ್ಗಿ ವೃತ್ತ ನೀರಿಕ್ಷಕರಾದ ರಾಜಾಸಾಬ ನದಾಫ ಹಾಗೂ ಪಿಎಸ್ಐ ಗಜಾನಂದ ಬಿರಾದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ರಾಜ್ಯ ಕಾರ್ಯದರ್ಶಿ ರಾಜಶೇಖರ ಸೀರಿ, ನಮ್ಮ ಸಮುದಾಯದ ಮುಗ್ದ ಯುವಕರು ಊಟಕ್ಕೆ ಹೋದಾಗ ಅವರ ಮೇಲೆ ವಿನಾಕಾರಣ ಹಲ್ಲೆ ನಡೆಸಿದ್ದಾರೆ. ಕೂಡಲೇ ಪೊಲೀಸರು ಬಾರ್ ಮಾಲಕ ಹಾಗೂ ನೌಕರರನ್ನು ಬಂಧಿಸಿ. ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಮಾಜಿ ಜಿಲ್ಲಾ ಪಂಚಾಯತ್ ವಿರೋಧ ಪಕ್ಷದ ನಾಯಕ ಬಸವರಾಜ ಪಾಟೀಲ ನರಿಬೋಳ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಸಿದ್ದು ಅಂಗಡಿ, ಜೇವರ್ಗಿ ಪುರಸಭೆ ಅಧ್ಯಕ್ಷ ಗುರುಗೌಡ ಪಾಟೀಲ, ಸದಸ್ಯರಾದ ಗುಂಡು ಸಾಹು ಗೋಗಿ, ಸಂಗನಗೌಡ ಪಾಟೀಲ, ಯುವ ಘಟಕದ ಅಧ್ಯಕ್ಷ ಪ್ರಭುಗೌಡ ಪಾಟೀಲ, ಸುನೀಲ ಹಳ್ಳಿ ಗುರುಲಿಂಗಯ್ಯ ಸ್ವಾಮಿ, ಭಗವಂತರಾಯ ಶಿವಣ್ಣಿ, ಮಲ್ಲಿಕಾರ್ಜುನ ಬಿರಾದಾರ, ಶಂಕರಗೌಡ ಬಿದನೂರ, ಸಿದ್ದು ಮಸ್ಕಿ, ಗುರು ರಾವುರ, ವಿಜಯಕುಮಾರ ನರಿಬೋಳ, ಬಾಪುಗೌಡ ಕಲ್ಲಹಂಗರಗಾ, ದೊಡ್ಡಪ್ಪಗೌಡ ಕಲ್ಲಹಂಗರಗಾ, ಸೇರಿದಂತೆ ಸಮಾಜದ ಮುಖಂಡರು ಹಾಗೂ ಯುವಕರು ಹಾಜರಿದ್ದರು.







