ಕಲಬುರಗಿ | ಹಡಪದ ಅಭಿವೃದ್ಧಿ ನಿಗಮ ಮಂಡಳಿಯನ್ನು ಸಮರ್ಪಕವಾಗಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ : ತಾಲೂಕು ಹಡಪದ (ಕ್ಷೌರಿಕ) ಸಮಾಜವು ಹಡಪದ ಅಭಿವೃದ್ಧಿ ನಿಗಮ ಮಂಡಳಿಯನ್ನು ಸಮರ್ಪಕವಾಗಿ ಜಾರಿಗೆ ತರಲು ಆಗ್ರಹಿಸಿ ತಾಲೂಕು ಹಡಪದ (ಕ್ಷೌರಿಕ) ಸಮಾಜ ಕಲಬುರಗಿ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಗಮನಕ್ಕೆ ಮನವಿ ಸಲ್ಲಿಸಿತು.
ಮನವಿಯಲ್ಲಿ, ಸಮಾಜವು ಕಳೆದ ಅವಧಿಯ ಸರ್ಕಾರದಿಂದ ನಿಗಮ ಸ್ಥಾಪನೆಯ ಆದೇಶ ಬಂದಿದ್ದರೂ, ಇದುವರೆಗೆ ಜಾರಿಗೆ ತರುವ ಕೆಲಸ ನಡೆಯಿಲ್ಲದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿದೆ. ರಾಜ್ಯದ ಹಡಪದ ಸಮಾಜ ಸುಮಾರು 15 ಲಕ್ಷ ಜನರಷ್ಟು ಮತ್ತು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದ ಸ್ಥಿತಿಯಲ್ಲಿರುವುದನ್ನು ಒತ್ತಿ ಹೇಳಲಾಗಿದೆ.
ಸಮಾಜವು ಮನವಿಯಲ್ಲಿ 100 ಕೋಟಿ ರೂ. ಅನುದಾನ ನೀಡುವುದು, ಕ್ಷೌರಿಕರಿಗಾಗಿ ಕೌಶಲ್ಯಾಭಿವೃದ್ಧಿ ತರಬೇತಿ, ಹಡಪದ ಅಪ್ಪಣ್ಣರ ಗವಿಯನ್ನು ಬಸವಕಲ್ಯಾಣ ಪ್ರಾಧಿಕಾರಕ್ಕೆ ಪಡೆದು ಅಭಿವೃದ್ಧಿ ಸಾಧಿಸುವುದು ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸಮಾಜದ ಸದಸ್ಯರಿಗೆ ನಿಗಮ ಮಂಡಳಿ ಅಥವಾ ವಿವಿಧ ಇಲಾಖೆಯಲ್ಲಿ ನಾಮ ನಿರ್ದೇಶನ ನೀಡುವಂತೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಚಂದ್ರಶೇಖರ ಹಡಪದ ತೊನಸಹಳ್ಳಿ (ಟಿ), ಹಡಪದ ಸಮಾಜ ಜಿಲ್ಲಾಧ್ಯಕ್ಷ ಈರಣ್ಣ ಸಿ ಹಡಪದ ಸಣ್ಣೂರ, ತಾಲೂಕ ಕಾರ್ಯಾಧ್ಯಕ್ಷ ರಮೇಶ ಕವಲಗಾ, ತಾಲೂಕ ಪ್ರಧಾನ ಕಾರ್ಯಾದರ್ಶಿ ವಿನೋದ ಅಂಬಲಗಾ, ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಸುಗೂರ ಎನ್, ನಗರಾಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ ಸೇರಿದಂತೆ ಎಲ್ಲಾ ಕ್ಷೌರಿಕ ಅಂಗಡಿಯ ಮಾಲಿಕರು ಹಿರಿಯರು ಯುವಕರು ಹೆಚ್ಚಿನ ಜನ ಸಂಖ್ಯೆಯಲ್ಲಿ ಭಾಗವಹಿಸಿದರು.







