ಕಲಬುರಗಿ | ಸಂಶೋಧನಾ ಲೇಖನವು ಹೊಸ ಜ್ಞಾನ ನೀಡುವ ವೈಜ್ಞಾನಿಕ ವರದಿ : ಡಾ. ಎಂ. ಪ್ರೇಮಕುಮಾರ

ಕಲಬುರಗಿ: ಸಂಶೋಧನಾ ಲೇಖನ ಎಂದರೆ ನಿರ್ದಿಷ್ಟ ಅಧ್ಯಯನದ ಹೊಸ ಆವಿಷ್ಕಾರಗಳು, ಫಲಿತಾಂಶಗಳು ಮತ್ತು ಅವುಗಳ ಮಹತ್ವವನ್ನು ವಿವರಿಸುವ ವೈಜ್ಞಾನಿಕ ವರದಿ ಎಂದು ಬೆಂಗಳೂರಿನ ದಯಾನಂದ ಸಾಗರ ತಾಂತ್ರಿಕ ಮಹಾವಿದ್ಯಾಲಯದ ಡಾ.ಎಂ.ಪ್ರೇಮಕುಮಾರ ಹೇಳಿದರು.
ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ‘ಸಂಶೋಧನ ಪ್ರಬಂಧ ಬರೆಯುವ ಒಂದು ವ್ಯವಸ್ಥಿತ ವಿಧಾನ’ ಕುರಿತ ರಾಷ್ಟ್ರೀಯ ಮಟ್ಟದ ವರ್ಚುವಲ್ ಎಫ್‌ಡಿಪಿ (ಅಧ್ಯಾಪಕರ ಪುನಶ್ಚೇತನ ಕಾರ್ಯಕ್ರಮ)ದಲ್ಲಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸಂಶೋಧನಾ ಲೇಖನವು ಸಂಶೋಧನಾ ವಿಧಾನಗಳು, ಫಲಿತಾಂಶಗಳು, ಚರ್ಚೆ ಮತ್ತು ತೀರ್ಮಾನಗಳಂತಹ ಪ್ರಮಾಣಿತ ವಿಭಾಗಗಳನ್ನು ಒಳಗೊಂಡಿರುತ್ತದೆ. ಇದು ಓದುಗರಿಗೆ ಅಧ್ಯಯನದ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತದೆ. ಇಂತಹ ಲೇಖನಗಳು ಸಾಮಾನ್ಯವಾಗಿ ಜರ್ನಲ್‌ಗಳಲ್ಲಿ ಪ್ರಕಟವಾಗುತ್ತವೆ ಮತ್ತು ಹೊಸ ಜ್ಞಾನವನ್ನು ಪೂರೈಸುವ ಪ್ರಾಥಮಿಕ ಸಾಹಿತ್ಯದ ರೂಪವಾಗಿವೆ ಎಂದರು.
ಸಂಶೋಧನಾ ಅರಿವು, ಸಂಶೋಧನೆಗಾಗಿ ಎಐ ಪರಿಕರಗಳು, ಮಾರ್ಗಸೂಚಿಗಳು ಹಾಗೂ ಅದರ ಪ್ರಾಮುಖ್ಯತೆಯ ಕುರಿತು ವಿವರಿಸಿದರು.
ಈ ಕಾರ್ಯಕ್ರಮವನ್ನು ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ಐಓಟಿ ಅಕಾಡೆಮಿ, ಕೊಯಮತ್ತೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ, ಡಾ.ಸೀಮಾ ಪಾಟೀಲ ಹಾಗೂ ಬೋಧಕ ವೃಂದ ಹಾಜರಿದ್ದರು. ಐಕ್ಯೂಎಸಿ ಸಂಯೋಜಕ ಡಾ. ಸಿದ್ಧಲಿಂಗರೆಡ್ಡಿ ವಂದಿಸಿದರು.







