ಕಲಬುರಗಿ | ನಕಲಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದಿದ್ದ ಸಂಪೂರ್ಣ ಪಾಟೀಲ್ 2ದಿನ ಪೊಲೀಸ್ ಕಸ್ಟಡಿಗೆ

ಕಲಬುರಗಿ : ದ್ವಿತೀಯ ಪಿಯುಸಿ ರಾಜ್ಯಶಾಸ್ತ್ರ ಪರೀಕ್ಷೆಯಲ್ಲಿ ಬದಲಿ ವಿದ್ಯಾರ್ಥಿನಿಯಾಗಿ ಎಕ್ಸಾಮ್ ಬರೆದ ಪ್ರಕರಣದ ಆರೋಪ ಹೊತ್ತಿರುವ ಸಂಪೂರ್ಣ ಪಾಟೀಲ್ ಅವರನ್ನು ಎರಡು ದಿನ ಪೊಲೀಸ್ ಕಸ್ಟಡಿಗೆ ನೀಡಿ ಇಲ್ಲಿನ ಜೆಎಮ್ಎಫ್ ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಸಂಪೂರ್ಣ ಪಾಟೀಲ್ ಪರೀಕ್ಷೆಯಲ್ಲಿ ಹಾಜರಾಗಿದ್ದ ಪ್ರಕರಣವನ್ನು ಹೆಚ್ಚಿನ ವಿಚಾರಣೆಗಾಗಿ ಬ್ರಹ್ಮಪೂರ ಪೊಲೀಸರ ವಶಕ್ಕೆ ನೀಡಿ ಕೋರ್ಟ್ ಆದೇಶ ಪ್ರಕಟಿಸಿದೆ.
ಕಲಬುರಗಿ ನಗರದ ಮಿಲಿಂದ್ ಶಾಲೆಯಲ್ಲಿ ಅರ್ಚನಾ ಎನ್ನುವ ವಿದ್ಯಾರ್ಥಿನಿ ಜಾಗದಲ್ಲಿ ಸಂಪೂರ್ಣ ಅಕ್ರಮವಾಗಿ ಪರೀಕ್ಷೆ ಬರೆದಿದ್ದಳು.
ಅಕ್ರಮವಾಗಿ ಎಕ್ಸಾಮ್ ಬರೆದಿದ್ದನ್ನ ದಲಿತ ಸೇನೆ ಪತ್ತೆ ಹಚ್ಚಿ ಪ್ರಶ್ನಿಸಿತ್ತು. ಇದರ ಬೆನ್ನಲ್ಲೇ ಮಿಲಿಂದ್ ಶಾಲಾ ಆಡಳಿತ ಮಂಡಳಿಯಿಂದ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
Next Story





