ಕಲಬುರಗಿ | ಎಸೆಸೆಲ್ಸಿ ಪರೀಕ್ಷೆ : ಎಸ್‌ಆರ್‌ಜಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ

ಕಲಬುರಗಿ : ಆಳಂದ ಪಟ್ಟಣದ ಪ್ರತಿಷ್ಠಿತ ಎಸ್‌ಆರ್‌ಜಿ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ಎಸ್‌ಆರ್‌ಜಿ ಆಂಗ್ಲ ಮಾಧ್ಯಮ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿ ಪೃಥ್ವಿರಾಜ ಲಾವಣಿ ಶೇ. 95 ರಷ್ಟು ಅಂಕಗಳನ್ನು ಪಡೆಯುವುದರ ಮೂಲಕ ತಾಲೂಕಿಗೆ ದ್ವೀತಿಯ ಸ್ಥಾನ ಪಡೆದಿದ್ದಾರೆ.
ಪರೀಕ್ಷೆಗೆ ಬರೆದ ಶಾಲೆಯ 12 ವಿದ್ಯಾರ್ಥಿಗಳು ಡಿಸ್ಟಿಕ್ಷನ್‌ನಲ್ಲಿ ಪಾಸಾಗಿದ್ದು, 38 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 4 ವಿದ್ಯಾರ್ಥಿಗಳು ದ್ವೀತಿಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಶಾಲೆಗೆ ಅತ್ಯತ್ತಮ ಫಲಿತಾಂಶ ಲಭ್ಯವಾಗಿದೆ. ಶಾಲೆಯ ಗಾಯತ್ರಿ ಬಂಡೆ ಶೇ.94, ರಾಜೇಶ್ವರಿ ಶಿವರಾಜ ಸೋನಾರ ಶೇ.92 ಅಂಕಗಳನ್ನು ಪಡೆದು ಉತ್ತಮ ಸಾಧನೆ ತೋರಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರೂ ಹಾಗೂ ಮಾಜಿ ಶಾಸಕರಾದ ಸುಭಾಷ್ ಆರ್.ಗುತ್ತೆದಾರ, ಸಂಸ್ಥೆಯ ಕಾರ್ಯದರ್ಶಿಗಳೂ ಹಾಗೂ ಜಿ.ಪಂ ಮಾಜಿ ಸದಸ್ಯರಾದ ಹರ್ಷಾನಂದ ಗುತ್ತೇದಾರ, ಪ್ರಾಚಾರ್ಯೆ ಜ್ಯೋತಿ ವಿಶಾಖ ಸೇರಿದಂತೆ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಉತ್ತಮ ಫಲಿತಾಂಶ ತೋರಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಸತತವಾಗಿ ಶಾಲೆಗೆ ಉತ್ತಮ ಫಲಿತಾಂಶ ಲಭ್ಯವಾಗುತ್ತಿದೆ. ಇದಕ್ಕಾಗಿ ಶ್ರಮಿಸಿದ ಬೋಧಕ ವರ್ಗಕ್ಕೂ ಅಭಿನಂದನೆಗಳು.
- ಸುಭಾಷ್ ಆರ್.ಗುತ್ತೇದಾರ, ಅಧ್ಯಕ್ಷರು ಎಸ್‌ಆರ್‌ಜಿ ಫೌಂಡೇಶನ್ ಹಾಗೂ ಮಾಜಿ ಶಾಸಕರು ಆಳಂದ.







