ಕಲಬುರಗಿ| ಆ.17 ರಂದು ಬೆಂಗಳೂರಿನಲ್ಲಿ 'ವಿದೇಶದಲ್ಲಿ ಅಧ್ಯಯನ- 2025' ಕಾರ್ಯಕ್ರಮ

ಕಲಬುರಗಿ: ವಿದೇಶದಲ್ಲಿ ಅಧ್ಯಯನ-2025 ವಿಶೇಷ ಕಾರ್ಯಕ್ರಮವು ಇದೇ ಆ.17 ರಂದು ಬೆಳಗ್ಗೆ 10ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಬೆಂಗಳೂರಿನ ಲಲಿತ್ ಅಶೋಕ ಹೋಟೆಲ್ ನಲ್ಲಿ ಜರಗುಲಿದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ನಾಗುಬಾಯಿ ದೊಡ್ಡಮನಿ ಅವರು ತಿಳಿಸಿದ್ದಾರೆ.
ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮದ ಮೂಲಕ ಪ್ರಾರಂಭಿಸುತ್ತಿರುವ ಪ್ರಪ್ರಥಮ ಅಂತರರಾಷ್ಟ್ರೀಯ ಶೈಕ್ಷಣಿಕ ಉಪ ಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ 10ಕ್ಕೂ ಹೆಚ್ಚು ದೇಶಗಳಿಂದ 50ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳನ್ನು ಸಂಪರ್ಕಿಸುವ ಸುವರ್ಣ ಅವಕಾಶವನ್ನು ಕಲ್ಪಿಸಿದ್ದು, ವಿದೇಶದಲ್ಲಿ ಅಧ್ಯಯನಕ್ಕಾಗಿ ಅರ್ಜಿಗಳನ್ನು ಉಚಿತವಾಗಿ https://studyabroad.ksdckarnataka.com ನೋಂದಾಯಿಸಬಹುದು ಎಂದು ಹೇಳಿದರು.
ವೈಯಕ್ತಿಕ ಸಮಾಲೋಚನೆ, ವೀಸಾ ಬಗ್ಗೆ ಮಾಹಿತಿ, ಅರ್ಜಿ ಸಲ್ಲಿಕೆ ಮತ್ತು ಟ್ರ್ಯಾಕಿಂಗ್, ಅರ್ಜಿ ಸಲ್ಲಿಕೆ ಮತ್ತು ದಾಖಲಾತಿ ಬಗ್ಗೆ ವಿವರಣೆ, ಹಣಕಾಸು ವ್ಯವಸ್ಥೆ ಮತ್ತು ಆರೋಗ್ಯ ವಿಮೆ ಕುರಿತು ಮಾಹಿತಿ, ವಿದೇಶಿ ಭಾಷೆ ಪ್ರಾವೀಣ್ಯತೆಯ ಮೌಲ್ಯ ಮಾಪನ ಇರುವುದು ಮತ್ತಿತರ ಸೌಲಭ್ಯಗಳು ಇರಲಿವೆ. ಹಾಗಾಗಿ ಆಸಕ್ತ ಅರ್ಜಿದಾರರಿಗೆ, ನಿಮ್ಮ ಜಾಗತಿಕ ಭವಿಷ್ಯದತ್ತ ಮೊದಲ ಹೆಜ್ಜೆ ಇರಿಸಿ, ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೆಚ್ಚಿನ ಸದುಪಯೋಗಪಡಿಸಿಕೊಳ್ಳಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 7338674791, 7338674794, 7338674798, 7338674792 ಗೆ ಸಂರ್ಪಿಕಿಸಬಹುದು ಎಂದು ಕೌಶಲ್ಯ ಅಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿ.ಸಿ ಫೌಝಿಯಾ ತರನ್ನುಮ್ ಅವರು ಕಾರ್ಯಕ್ರಮದ ಕುರಿತಾಗಿ ಪೋಸ್ಟರ್ ವೊಂದನ್ನು ಬಿಡುಗಡೆಗೊಳಿಸಿದರು.







