ಕಲಬುರಗಿ | ಬಸವಣ್ಣನವರ ಜಯಂತಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಗೈರು : ರಾಜಶೇಖರ್ ನಿಲಂಗಿ ಆರೋಪ

ಕಲಬುರಗಿ : ಬಸವಣ್ಣನವರ 892ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಸೇಡಂ ತಾಲೂಕು ಅಧ್ಯಕ್ಷ ರಾಜಶೇಖರ್ ನಿಲಂಗಿ ಆರೋಪಿಸಿದರು.
ಸೇಡಂ ಪಟ್ಟಣದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಸವಣ್ಣನವರ 892 ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಸಹಾಯಕ ಆಯುಕ್ತ ಪ್ರಭು ರೆಡ್ಡಿ, ತಹಶೀಲ್ದಾರ್ ಶ್ರೀಯಂಕ್ ಧನಶ್ರೀ, ಪುರಸಭೆ ಮುಖ್ಯಾಧಿಕಾರಿ ಶರಣಯ್ಯ ಸ್ವಾಮಿ ಹಿರೇಮಠ ಅವರು ವೇದಿಕೆ ಮೇಲೆ ಉಪಸ್ಥಿತಿ ಇರದೇ ಗೈರಾಗಿದ್ದಾರೆಂದು ಅವರು ಆರೋಪಿಸಿದರು.
ಬಸವಣ್ಣನವರ ಜಯಂತಿ ಆಚರಣೆ ಮಾಡದೇ ಸಮಾನತೆ ಸಾರಿದ ಮಹಾನ್ ನಾಯಕನಿಗೆ ಅಪಮಾನ ಮಾಡಿದ ಅಧಿಕಾರಿಗಳಿಗೆ ಕೂಡಲೇ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಸಮಾಜದ ಮುಖಂಡರಿಗೆ 24 ಗಂಟೆಯಲ್ಲಿ ಕ್ಷಮೆ ಕೇಳಬೇಕು ಎಂದು ಆಕ್ರೋಶ ತಿಳಿಸಿದರು,
ನಿರ್ಲಕ್ಷ್ಯತೆ ವಹಿಸಿದ್ದರೆ ಮುಂದಿನ ದಿನಗಳಲ್ಲಿ ಸಹಾಯಕ ಆಯುಕ್ತರು ಕಚೇರಿ ಮುಂದೆ ಹೋರಾಟ ಮಾಡಲಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಬಸವ ಸಮಿತಿ ಚಾರಿಟೇಬಲ್ ಟ್ರಸ್ಟ್ ತಾಲೂಕು ಅಧ್ಯಕ್ಷ ಶಿವಕುಮಾರ್ (ಜಿಕೆ) ಪಾಟೀಲ್ ತೆಲ್ಕೂರ, ಅಖಿಲ ಭಾರತ ವೀರಶೈವ ಮಹಾಸಭಾ ಗೌರವ ಅಧ್ಯಕ್ಷ ಶಿವಯ್ಯ ಸ್ವಾಮಿ ಬಿಬ್ಬಳಿ, ಬಸವ ಜಯಂತಿ ಉತ್ಸವದ ಅಧ್ಯಕ್ಷ ಶರಣಬಸಪ್ಪ ಹಾಗರಗಿ, ಶಂಕ್ರು ಸಜ್ಜನ್, ಶಿವಕುಮಾರ್ ಬೋಳಶೇಟ್ಟಿ, ಅನೀಲ ಊಡಗಿ, ಬಸವರಾಜ ತಡಕಲ್, ಸಿದ್ದಪ್ಪ ತಳ್ಳಳಿ, ಸುರೇಶ್ ಹೂಗಾರ, ಸಂಗಮೇಶ ಇಂಜಳಿ, ಸಂಗಮೇಶ ಹತ್ತಿ, ಸಿದ್ದಪ್ಪ ನೀಲಂಗಿ, ರಾಚಣ್ಣ ಬಳಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







