ಕಲಬುರಗಿ | ಶಹಾಬಾದ್‌ನ ಚಂದ್ರಲಾಂಬ ದೇವಸ್ಥಾನದಲ್ಲಿ ಕಳ್ಳತನ : ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಕಲಬುರಗಿ : ಶಹಬಾದ್ ತಾಲ್ಲೂಕಿನ ಹೊನಗುಂಟಾ ಗ್ರಾಮದ ಚಂದ್ರಲಾಂಬ ದೇವಸ್ಥಾನದಲ್ಲಿ ನಾಲ್ಕೈದು ಜನರ ತಂಡ ದೇವಸ್ಥಾನದ ಬೀಗ ಮುರಿದು ದೇವಸ್ಥಾನ ಚಿನ್ನ ಮತ್ತು ನಗದು ದೋಚಿ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದೇವಸ್ಥಾನ ದೇವಿಯ ಮೂರ್ತಿಯ ಮೇಲಿನ 20 ಗ್ರಾಂ. ಚಿನ್ನದ ತಾಳಿ, 20 ಸಾವಿರ ಹುಂಡಿಯ ಹಣ ದೋಚಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.
ಕಳ್ಳರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಶಹಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Next Story





