ಕಲಬುರಗಿ | ಹೋಟೆಲ್‌ನಲ್ಲಿ ಕಳ್ಳತನ : ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಕಲಬುರಗಿ : ಆಳಂದ ಪಟ್ಟಣದ ಹನುಮಾನ್ ಮಂದಿರದ ಬಳಿ ಇರುವ ಅಶೋಕ ಹೋಟೆಲ್ ನಲ್ಲಿ ಕಳ್ಳತನ ನಡೆದಿದ್ದು, ಸುಮಾರು 8 ರಿಂದ 10 ಸಾವಿರ ರೂ. ಮೌಲ್ಯದ ಸಾಮಗ್ರಿಗಳನ್ನು ಕಳ್ಳತನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಂಜುನಾಥ ಅಶೋಕ ಮಾಳಿ ಅವರಿಗೆ ಸೇರಿದ ಈ ಹೋಟೆಲ್‌ನಲ್ಲಿ ಕೌಂಟರ್ ಹತ್ತಿರ ಇಡಲಾಗಿದ್ದ ಥಮ್ಸ್ ಅಪ್, ಸ್ಪ್ರೈಟ್, ಸ್ಟಿಂಗ್ ಪಾನೀಯಗಳು, ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ಹಲವು ವಸ್ತುಗಳನ್ನು ಕಳ್ಳತನ ಮಾಡಲಾಗಿದೆ ಎಂದು ಮಾಲಕರಾದ ಮಂಜುನಾಥ ಮಾಳಿ ತಿಳಿಸಿದ್ದಾರೆ.
ಈ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 8 ದಿನಗಳ ಒಳಗಾಗಿ ಆರೋಪಿಯನ್ನು ಬಂಧಿಸಿ ಕಳುವಾದ ಸಾಮಗ್ರಿಗಳನ್ನು ವಾಪಸ್ ಕೊಡಿಸುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Next Story





