ಕಲಬುರಗಿ | ಸೌತೆಕಾಯಿ ಭೂಜು ತುಪ್ಪಟ ರೋಗದ ಹತೋಟಿಗೆ ಸಲಹೆ

ಕಲಬುರಗಿ: ಆಳಂದ ತಾಲೂಕಿನ ಆಲೂರು, ಸುಂಟಾನೂರ್, ಕಡಗಂಚಿ ಭಾಗದಲ್ಲಿ ಕೆಲ ರೈತರು ಸೌತೆಕಾಯಿ ಕೃಷಿ ಲಾಭದಾಯಕವಾಗಿ ಮಾಡುತ್ತಿದ್ದು, ರೈತರು ಮಣ್ಣು ಪರೀಕ್ಷೆ ಆಧಾರಿತ ಗೊಬ್ಬರ, ತಳಿ ಆಯ್ಕೆ ಹಾಗೂ ಸಮಗ್ರ ಬೆಳೆ ರಸವಾರಿ ಮಾಹಿತಿ ವೈಜ್ಞಾನಿಕವಾಗಿ ಪಡೆದುಕೊಂಡು ಮಾರುಕಟ್ಟೆಗೆ ತಕ್ಕಂತೆ ಬೆಳೆ ಬೆಳೆದಲ್ಲಿ ಆರ್ಥಿಕವಾಗಿ ಸಬಲರಾಗಬಹುದು ಎಂದು ಕೆ.ವಿ.ಕೆ ಮಣ್ಣು ವಿಜ್ಜಾನಿ ಡಾ.ಶ್ರೀನಿವಾಸ ಬಿ.ವಿ ತಿಳಿಸಿದರು.
ಹವಾಮಾನಕ್ಕೆ ತಕ್ಕಂತೆ ಸಸ್ಯಗಳಿಗೆ ಕಾಡುವ ಕೀಟ, ರೋಗ ಹತೋಟಿ ಕ್ರಮ ರೈತರಿಗೆ ವಾಟ್ಸಪ್ ಮೂಲಕ ಕೃಷಿ ವಿಜ್ಜಾನಿ ವರ್ಗ ಸಲಹೆ ಕಳುಹಿಸಲಾಗುತ್ತಿದೆ. ವೈರಸ್ ನಂಜಣು ರೋಗ ಹಾಗೂ ಬುಜು ತುಪ್ಪಟ ರೋಗ ಹತೋಟಿ ಕ್ರಮವನ್ನು ಸಸ್ಯ ರೋಗ ತಜ್ಜರಾದ ಡಾ.ಜಹೀರ್ ಅಹ್ಮದ್ ಕ್ಷೇತ್ರ ಭೇಟಿ ವೇಳೆ ರೈತರಿಗೆ ವಿವರಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಬಾಬುರಾವ್ ಪಟ್ಟಣ, ಉತ್ಸಾಹಿ ಯುವ ರೈತರಾದ ವಿನೋದ್ ಕಲಬುರಗಿ, ಮಹೇಶ್, ವೀರೇಶ್ ಉಪಸ್ಥಿತರಿದ್ದರು.
Next Story





