ಕಲಬುರಗಿ | ಸಿಯುಕೆಯಲ್ಲಿ ಯುಜಿಸಿ- ಜೆಆರ್‌ಎಫ್-ನೆಟ್ ತರಬೇತಿ ಕಾರ್ಯಗಾರ ಉದ್ಘಾಟನೆ

ಕಲಬುರಗಿ : ಯುಜಿಸಿ-ನೆಟ್ ನಲ್ಲಿ ಉತ್ತೀರ್ಣರಾಗಲು ಕೇಂದ್ರೀಕೃತ ಅಧ್ಯಯನ ಬಹಳ ಮುಖ್ಯ ಎಂದು ಸಿಯುಕೆ ಶಿಕ್ಷಣ ನಿಕಾಯದ ಡೀನ್ ಪ್ರೊ.ಜಿ.ಆರ್.ಅಂಗಡಿ ಹೇಳಿದರು.
ಆಳಂದ ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ ಯುಜಿಸಿ- ಜೆಆರ್‌ಎಫ್/ ನೆಟ್ ತರಬೇತಿ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಣ ವಿಭಾಗದ ಇಬ್ಬರು ಜೂನಿಯರ್ ರಿಸರ್ಚ್ ಫೆಲೋಗಳಾದ ದುರ್ಗಾ ಪ್ರಸಾದ್ ಮತ್ತು ಅಶ್ವಿನ್, ಜೆಆರ್‌ಎಫ್/ ನೆಟ್ ಪರೀಕ್ಷೆಯ ತಮ್ಮ ಯಶಸ್ಸಿನ ಅನುಭವಗಳನ್ನು ಹಂಚಿಕೊಂಡು ಆಕಾಂಕ್ಷಿಗಳನ್ನು ಪ್ರೇರೇಪಿಸಿದರು.
ಶಿಕ್ಷಣ ಇಲಾಖೆಯ ಅಧ್ಯಾಪಕ ಡಾ.ಆಶಾಲತಾ, ಡಾ.ನಿಶಾ ಪ್ರಜಾಪತಿ, ಡಾ.ಶ್ರೀದೇವಿ, ಡಾ.ಸಿ.ಮಂಡಲ್, ಡಾ.ಬಿ.ಪಿ.ರೆಡ್ಡಿ, ಜ್ಯೋತ್ಸ್ ನ, ಸಂತೋಷ್ ಮತ್ತು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದರು.
ಕಾರ್ಯಕ್ರಮದ ಸಂಯೋಜಕ ಡಾ.ಎನ್.ಅಮರೇಶ್ವರನ್ ನಿರೂಪಿಸಿ ಸ್ವಾಗತಿಸಿದರು. ಡಾ.ಮಯೂರ್ ಪೂಜಾರಿ ವಂದಿಸಿದರು.
Next Story





