ಕಲಬುರಗಿ | ವಿಚಾರಣಾಧೀನ ಕೈದಿ ಜೈಲಿನಲ್ಲಿ ಮೃತ್ಯು

ಮುಹಮ್ಮದ್ ರಿಯಾಝ್
ಕಲಬುರಗಿ : ವಿಚಾರಣಾಧೀನ ಕೈದಿಯೊರ್ವ ಜೈಲಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಸೇಡಂ ಜೈಲಿನಲ್ಲಿ ಶನಿವಾರ ನಡೆದಿದೆ.
ಮುಹಮ್ಮದ್ ರಿಯಾಝ್ (32) ಹೃದಯಾಘಾತದಿಂದ ಮೃತಪಟ್ಟಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.
ಒಂದೂವರೆ ವರ್ಷಗಳ ಹಿಂದೆ ರಿಯಾಝ್ ಗೆ ಕಳ್ಳತನ ಪ್ರಕರಣದಲ್ಲಿ ಜೈಲು ಆಗಿತ್ತು ಎಂದು ತಿಳಿದುಬಂದಿದೆ.
ಇಂದು ಜೈಲಿನಲ್ಲಿ ಹೃದಯಾಘಾತದ ನಂತರ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸುವಾಗಲೇ ಕೈದಿ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಇತ್ತ ಪೊಲೀಸರು, ಕೈದಿಗೆ ಪೀಟ್ಸ್ ರೋಗ ಬಂದಿದ್ದರಿಂದ ಹೃದಯ ಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಆಕಸ್ಮಿಕವಾಗಿ ಕೈದಿ ಮೃತಪಟ್ಟಿರುವುದು ಸಂಶಯಕ್ಕೆ ಕಾರಣವಾಗಿದೆ. ಮೃತನ ಮರಣೋತ್ತರ ಪರಿಕ್ಷೆಗೆ ತಂದಾಗ ಸ್ಥಳಕ್ಕೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಭೇಟಿ ನೀಡಿ, ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
Next Story





