ಕಲಬುರಗಿ | ಶಾಲಾ ಶಿಕ್ಷಕಿ ರಾಚಮ್ಮ ಎಸ್.ಮಠಪತಿಗೆ ಗ್ರಾಮಸ್ಥರಿಂದ ಅದ್ಧೂರಿ ಬೀಳ್ಕೊಡುಗೆ

ಕಲಬುರಗಿ: ಕಮಲಾಪುರ ತಾಲ್ಲೂಕಿನ ಮುದ್ದಡಗಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿಯಾದ ರಾಚಮ್ಮ ಎಸ್.ಮಠಪತಿಯವರು ವಯೋನಿವೃತ್ತಿ ಹೊಂದಿರುವ ಪ್ರಯುಕ್ತ ಮುದ್ದಡಗಾ ಗ್ರಾಮದ ವಿದ್ಯಾರ್ಥಿಗಳು ಗ್ರಾಮದ ಮುಖಂಡರು ಶಿಕ್ಷಕಿಗೆ ಗೌರವಪೂರ್ವಕ ಅಂಬಾರಿಯಲ್ಲಿ ಮೆರವಣಿಗೆ ನಡೆಸಿ ಸನ್ಮಾನಿಸುವ ಮೂಲಕ ಅದ್ದೂರಿಯಾಗಿ ಬೀಳ್ಕೊಡುಗೆ ಕಾರ್ಯಕ್ರಮ ಮಾಡಲಾಯಿತು.
ರಾಚಮ್ಮ ಅವರಿಂದ ಕಲಿತಿರುವ ಹಿರಿಯ ವಿದ್ಯಾರ್ಥಿಗಳು ತಮ್ಮಗೆ ಶಿಕ್ಷಣ ಮತ್ತು ಜೀವನದ ಉದ್ದಕ್ಕೂ ಮಾರ್ಗದರ್ಶನ ನೀಡಿ ದಾರಿದೀಪ ತೋರಿ ಬೆಳೆಯ ಪೈರು ಮೊಳಕೆಯಂತೆ ಪ್ರಾಥಮಿಕ ಶಿಕ್ಷಣ ಮತ್ತು ಶಿಕ್ಷಕರ ಪ್ರಯತ್ನ ಮರಿಯಲಾರದ ಸಿಹಿ ನೆನಪಿನೊಂದಿಗೆ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ಕಾರ್ಯಕ್ರಮದ ಸಾನಿಧ್ಯ ವಹಿಸಿದ ಲಾಡ ಮುಗಳಿ ಶ್ರೀಗಳು ನುಡಿದ್ದರು.
ಎಸ್ ಡಿ ಎಂ ಸಿ ಅಧ್ಯಕ್ಷರಾದ ಸೋಮಶೇಖರ ಸಿಂಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಪ್ರೌಢಶಾಲೆ ಮುಖ್ಯ ಗುರುಗಳಾದ ಆನಂದ್ ರಾವ್ ಕುಲಕರ್ಣಿ, ಪ್ರಾಥಮಿಕ ಶಾಲಾ ಪ್ರಭಾರಿ ಮುಖ್ಯ ಗುರುಗಳಾದ ವಾಮನರಾವ್, ಸಿಆರ್‌ಪಿ ರೌಫ್ಮಿಯಾ, ಬಾಬುರಾವ್, ಕರ್ನಾಟಕ ರಾಜ್ಯ ನೌಕರ ಸಂಘ ಕಮಲಾಪುರ ಘಟಕದ ಕಾರ್ಯದರ್ಶಿ ಯಲ್ಲಾಲಿಂಗ ಬಬಲಾದ ಕರ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.







