ಕಲಬುರಗಿ | ಸೋನ್ನ ಗ್ರಾಮ ಪಂಚಾಯತ್‌ನಲ್ಲಿ ನರೇಗಾ ಟೆಂಡರ್ ನಿಯಮ ಉಲ್ಲಂಘನೆ : ಪ್ರಕಾಶ್ ಕಾಂಬಳೆ ಆರೋಪ

ಕಲಬುರಗಿ : ಜೇವರ್ಗಿ ತಾಲೂಕಿನ ಸೋನ್ನ ಗ್ರಾಮ ಪಂಚಾಯಿತಿಯಲ್ಲಿ 2024-25 ರ ಸಾಲಿನ ನರೇಗಾ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯ ನಿಯಮಗಳು ಉಲ್ಲಂಘನೆಯಾಗಿವೆ ಎಂದು ದಲಿತ ಸೇನೆಯ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಕಾಶ ಕಾಂಬಳೆ ಆರೋಪಿಸಿದ್ದಾರೆ.
ಜೇವರ್ಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನ ಸೋನ್ನ ಗ್ರಾಮ ಪಂಚಾಯಿತಿಯಲ್ಲಿ 2024-25 ರ ಸಾಲಿನ ನರೇಗಾ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯ ತಾಂತ್ರಿಕ ಸಹಾಯಕರು (ಟಿಎಇ) ಸರಕಾರಿ ನಿಯಮ ಉಲ್ಲಂಘನೆಯಾಗಿರುವುದು ಕಂಡು ಬಂದಿರುತ್ತದೆ. ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಕಾಮಗಾರಿ ಟೆಂಡರ್ ಕರೆಯಲಾಗಿತ್ತು. ಅದರಲ್ಲಿ ಬಾಗೇಶ ಸರನಾಳ ರವರಿಗೆ 8 ಕಾಮಗಾರಿಗಳು ಆಗಿರುತ್ತವೆ, ಆದರೆ ಸರಕಾರಿ ನಿಯಮ ಉಲ್ಲಂಘನೆ ಮಾಡಿ ಡಿಇಒ, ಪಿಡಿಒ, ಟಿಎಇ ರವರು ಸೇರಿಕೊಂಡು ಸದರಿ ಕಾಮಗಾರಿಗಳನ್ನು ಪರೀಶೀಲಸದೆ ತಮಗೆ ಬೇಕಾದ ವ್ಯಕ್ತಿಯಾದ ವಿನೋದ ಬಾಸಗಿ ಎಂಬ ವ್ಯಕ್ತಿಗೆ ಮೆಟೀರಿಯಲ್ (ಎಂ ಐ ಎಸ್) ಮಾಡಿ ಪೇಮೆಂಟ್ ಮಾಡಿಕೊಂಡಿದ್ದಾರೆ. ಇದರಿಂದ ಭಾಗೇಶ ಸರನಾಳ ಎಂಬುವವರಿಗೆ ಅನ್ಯಾಯವಾಗಿದೆ. ಆದಕಾರಣ ಸದರಿ ಮೇಲಧಿಕಾರಿಗಳು ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರು ಸೇರಿಕೊಂಡು ಕಳಪೆ ಕಾಮಗಾರಿಗಳನ್ನು ಮಾಡಿ ತಮಗೆ ಬೇಕಾದವರ ಹೆಸರಿನಲ್ಲಿ ಭೋಗಸ್ ಬಿಲ್ಲು ಮಾಡುತ್ತಿದ್ದಾರೆ, ಇದರ ವಿರುದ್ಧ ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಲಿತ ಸೇನೆ ಉಪಾಧ್ಯಕ್ಷ ಶಾಹುಹುಶೇನಿ, ಜಿಲ್ಲಾ ಉಪಾಧ್ಯಕ್ಷ ಭಾಗೇಶ ಸರನಾಳ, ಭೀಮು ಬಡಿಗೇರ ಖಾದ್ಯಪೂರ, ಮುತ್ತಪ್ಪ ಸೋನ್ನ, ಸಿದ್ದು ನೆಲೋಗಿ ಇನ್ನಿತರರು ಉಪಸ್ಥಿತಿಯಲ್ಲಿದ್ದರು.







