ಕಲಬುರಗಿ | ವಿದ್ಯಾರ್ಥಿಗಳಿಗೆ ವಾರಾಂತ್ಯ ಸಮಲೋಚನಾ ತರಗತಿ ಕಾರ್ಯಕ್ರಮ

ಕಲಬುರಗಿ: ನಗರದ ಎಂ.ಎನ್ ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ಜುಲೈ ಮತ್ತು ಜನವರಿ ಆವೃತ್ತಿಯ ಬಿ.ಎ, ಬಿ.ಕಾಂ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ವಾರಾಂತ್ಯ ಸಮಲೋಚನಾ ತರಗತಿಗಳನ್ನು ನಡೆಸಲಾಯಿತು.
ನಗರದ ಎಮ್ ಎನ್ ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದ ತರಗತಿ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮೈಸೂರು ಪ್ರಾದೇಶಿಕ ಆಯುಕ್ತರಾದ ಡಾ.ಸಂಗಮೇಶ್ವರ ಹಿರೇಮಠ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಂದೀಪ್ ದೇಸಾಯಿ, ಕಾರ್ಯದರ್ಶಿಗಳಾದ ಜಗನ್ನಾಥ್ ನಾಗೂರ ಸಿಬ್ಬಂದಿಗಳಾದ ಮಂಜುನಾಥ್ ಬನ್ನೂರ್, ನಾಗರಾಜ ಪಾಟ್ನಾಕರ್, ಶ್ರೀದೇವಿ ಹಿರೇಮಠ ಗುರುಬಾಯಿ ಸಾಹುವಾಡಿ, ರಶ್ಮಿ ಪಾಟೀಲ, ಶರಣು ಪೂಜಾರಿ, ಅಮರ್ ಹಗರಾಗಿ, ರಾಧಿಕಾ ಗುತ್ತೇದಾರ್, ಸಂತೋಷ್ ಲಸ್ಕರ್, ಶಿಲ್ಪ ಚೆಟ್ಟಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Next Story





