ಕಲಬುರಗಿ | ವಿದ್ಯುತ್ ವೈರ್ ತಗುಲಿ ಮಹಿಳೆ ಮೃತ್ಯು

ಈರಮ್ಮ ಶಾಂತಪ್ಪ ತುರಾಯಿ
ಕಲಬುರಗಿ: ಮನೆ ಚಾವಣಿಯ ಮೇಲೆ ಒಣ ಹಾಕಿದ್ದ ಬಟ್ಟೆ ತೆಗೆಯಲು ತೆರಳಿದ ಸಂದರ್ಭದಲ್ಲಿ ವಿದ್ಯುತ್ ವೈರ್ ತಗುಲಿ ಮಹಿಳೆಯೊರ್ವರು ಮೃತಪಟ್ಟಿರುವ ಘಟನೆ ಜೇವರ್ಗಿ ತಾಲ್ಲೂಕಿನ ಕೋಟನೂರ್ ಗ್ರಾಮದಲ್ಲಿ ನಡೆದಿದೆ.
ಜೇವರ್ಗಿ ತಾಲ್ಲೂಕಿನ ಕೂಟನೂರ ಗ್ರಾಮದ ನಿವಾಸಿ ಈರಮ್ಮ ಶಾಂತಪ್ಪ ತುರಾಯಿ (40) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ.
ಮನೆಯ ಮೇಲೆ ಇದ್ದ ವಿದ್ಯುತ್ ವೈರ ತಗುಲಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ನೆಲೋಗಿ ಪೊಲೀಸ್ ಠಾಣೆಯ ಪಿ.ಎಸ್.ಐ ಚಿದಾನಂದ ಸೌದಿ ಸೇರಿದಂತೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Next Story





