ಕಲಬುರಗಿ (ಮಹಿಳಾ) ಕೈಗಾರಿಕಾ ತರಬೇತಿ ಸಂಸ್ಥೆಯ ವಿವಿಧ ಐಟಿಐ ವೃತ್ತಿಗಳಿಗೆ ಆಫ್‍ಲೈನ್ ಮೂಲಕ ಪ್ರವೇಶ ಪಡೆಯಲು ಅವಕಾಶ
ಕಲಬುರಗಿ: ಕಲಬುರಗಿ (ಮಹಿಳಾ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಗಸ್ಟ್ 2025-26ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಸೀಟುಗಳನ್ನು ಮೀಸಲಾತಿ ಆಧಾರದ ಮೇಲೆ ಹಾಗೂ ಖಾಲಿ ಉಳಿದ ಸ್ಥಾನಗಳನ್ನು ನಿಯಮಾನುಸಾರ ಮೇರಿಟ್ ಆಧಾರದ ಮೇಲೆ 10ನೇ ತರಗತಿಯಲ್ಲಿ ಪಾಸಾದ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು 2025ರ ಆಗಸ್ಟ್ 31 ರವರೆಗೆ ಆಫ್‍ಲೈನ್ ಮೂಲಕ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಕಲಬುರಗಿ (ಮಹಿಳಾ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ಎರಡು ವರ್ಷದ ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ, ಫಿಟ್ಟರ್, ಮೆಕ್ಯಾನಿಕ್ ಎಲೆಕ್ಟ್ರಿಕ್ ವಹಿಕಲ್, ಸಿಎನ್‍ಸಿ ಮಷಿನಿಂಗ್ ಟೆಕ್ನಿಷಿಯನ್, ವರ್ಚುವಲ್ ಎನಾಲಿಸಿಸ್ ಆಂಡ್‍ಡಿಸೈನರ್ (ಫಿನಿಟ್‍ಎಲೆಮೆಂಟ್ ಮೆಥೆಡ್) ಹಾಗೂ ಒಂದು ವರ್ಷದ ಕಂಪ್ಯೂಟರ್ ಹಾರ್ಡ್‍ವೇರ್ ಅಂಡ್ ನೆಟ್‍ವರ್ಕ್ ಮೆಂಟೆನನ್ಸ್, ಕೋಪಾ, ಡ್ರೇಸ್ ಮೇಕಿಂಗ್, ಇಂಡಸ್ಟ್ರಿಯಲ್ ರೋಬೋಟಿಕ್ಸ್ ಅಂಡ್ ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಿಷಿಯನ್, ಇಂಜಿನಿಯರಿಂಗ್ ಡಿಸೈನ್ ಟೆಕ್ನಿಷಿಯನ್, ಮ್ಯಾನಿಫ್ಯಾಕ್ಚರಿಂಗ್ ಪ್ರೋಸಸ್ ಕಂಟ್ರೋಲ್ ಅಂಡ್ ಅಟೋಮೇಶನ್ ವೃತ್ತಿಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಡ್ರೇಸ್ ಮೇಕಿಂಗ್ ವೃತ್ತಿಗೆ 8 ನೇ ಪಾಸಾದ /10 ನೇ ಫೇಲಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಪಿಪಿಪಿ ಯೋಜನೆ ಅಡಿಯಲ್ಲಿ ನೇರ ಪ್ರವೇಶಕ್ಕಾಗಿ ಮೊದಲು ಬಂದವರಿಗೆ ಮೊದಲ ಪ್ರವೇಶಕ್ಕೆ ಅವಕಾಶ ವಿರುತ್ತದೆ. ಪಿಪಿಪಿ ಸೀಟುಗಳ ಪ್ರವೇಶಕ್ಕಾಗಿ ಮಹಿಳಾ ಅಭ್ಯರ್ಥಿಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ (ಮಹಿಳಾ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ದೂರವಾಣಿ ಸಂಖ್ಯೆ: 08472-236753, ತರಬೇತಿ ಅಧಿಕಾರಿ ಅನೀಲ ಕುಮಾರ ರಾಠೋಡ-9901361622, ದ್ವಿ.ದ.ಸ.ರಾದ 9008439316 ಇವರ ಮೊಬೈಲ್ ಸಂಖ್ಯೆ ಕಚೇರಿ ಸಮಯದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಸಂಪರ್ಕಿಸಲು ಕೋರಲಾಗಿದೆ.







