ಕಲಬುರಗಿ | ಆಳಂದ ಬಡಾವಣೆಗಳಲ್ಲಿ 2.80 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ

ಕಲಬುರಗಿ: ಆಳಂದ ಪಟ್ಟಣದ ಪುರಸಭೆ ವ್ಯಾಪ್ತಿಯ ಹಲವು ಬಡಾವಣೆಗಳಲ್ಲಿ ವಿವಿಧ ಯೋಜನೆಯ ಅನುದಾನದ 2.80 ಕೋಟಿ ರೂ. ವೆಚ್ಚದಲ್ಲಿ ಒಟ್ಟು 41 ಕಾಮಗಾರಿಗಳಿಗೆ ಪುರಸಭೆ ಅಧ್ಯಕ್ಷ ಫಿರದೋಸ್ ಅನ್ಸಾರಿ ಗೌಡ ಅವರು ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ ಜೊತೆಗೊಡಿ ಆಯಾ ಬಡಾವಣೆ ಪುರಸಭೆ ಸದಸ್ಯರ ಸಮ್ಮುಖದಲ್ಲಿ ಗುದ್ದಲಿಪೂಜೆ ನೆರವೇರಿಸಿದರು.
ಆಳಂದ ಪಟ್ಟಣದ ಶರಣನಗದರ ಸರ್ಕಾರಿ ಪ್ರಾಥಮಿಕ ಶಾಲಾ ಆವರಣಗೋಡೆ, ಭೀಮನಗರದ ಸಿಸಿ ಚರಂಡಿ ನಿರ್ಮಾಣ ಕಾಮಗಾರಿ, ಕೊಳವೆ ಬಾವಿ ಉದ್ಘಾಟನೆ ಡೋಹರಗಲ್ಲಿ ಸೇರಿದಂತೆ ದಾದಾಪೀರ ದರ್ಗಾ ಬಳಿ, ಅಜಿಮೋದ್ದೀನ್ ನಗರ ಮನೆಯ ಬಳಿ ಆಪೇಕ್ಸ್ ಶಾಲೆಯ ಹತ್ತಿರ, ಏಕಮೀನಾರ ಮಸೀದಿ ಹತ್ತಿರದ, ಕಾಲಿ ಮಸೀದಿ ಬಡಾವಣೆಗಳಲ್ಲಿ ಸಿಸಿ ರಸ್ತೆ, ಆವರಣಗೋಡೆ, ಆರ್‌ಸಿಸಿ ಚರಂಡಿ, ಕೊಳವೆ ಬಾವಿ, ಪೈಪಲೈನ್ ಘನತ್ಯಾಜ್ ಸಂಗ್ರಹ ಘಟಕದಲ್ಲಿ ವೈಕಲ್ ಪಾರ್ಕಿಂಗ್ ಕಾಮಗಾರಿಗೆ ಗುದ್ದಲಿ ಪೂಜೆ ಕೈಗೊಂಡರು.
ಈ ವೇಳೆ ಕೆಎಂಎಫ್ ಅಧ್ಯಕ್ಷ ಆರ್.ಕೆ.ಪಾಟೀಲ್, ಪುರಸಭೆ ಅಧ್ಯಕ್ಷ ಫಿರದೋಸ್ ಅನ್ಸಾರಿ ಮಾತನಾಡಿದರು.
ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ, ಎಇಇ ಜಗದೀಶ ಹಿರೇಮಠ, ಶರಣನಗರ ಮತ್ತು ಭೀಮನಗರ ಕಾಮಗಾರಿ ಪೂಜೆಯಲ್ಲಿ ಪುರಸಭೆ ಸದಸ್ಯ ಲಕ್ಷ್ಮಣ ಕಟ್ಟಿಮನಿ, ಮೃತ್ಯುಂಜ ಆಲೂರೆ, ಆಸೀಫ್ ಚೌಸ್, ರಾಜು ಕಟ್ಟಿಮನಿ, ಮುಖಂಡ ಸೂರ್ಯಕಾಂತ ತಟ್ಟಿ, ರೇವಣಸಿದ್ಧಪ್ಪ ನಾಗೂರೆ, ಚಂದ್ರಕಾoತ ಜಂಗಲೇ, ರಾಜು ಸನ್ಮೂಖ ಮತ್ತು ಶಾಲಾ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಉಪಸ್ಥತರಿದ್ದರು.





