Kalaburagi | ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಕಲಬುರಗಿ : ನಗರದ ಬಿದ್ದಾಪುರ ಕಾಲೋನಿ ಸಮೀಪದ ರೈಲ್ವೆ ಗೇಟ್ ಬಳಿ ರೈಲಿಗೆ ಸಿಲುಕಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಸುಲಗುಡ್ಡ ತಾಂಡಾ ನಿವಾಸಿ ದೇವಣ್ಣ ಜಾವಲಪ್ಪ (26) ಮೃತ ಯುವಕ ಎಂದು ತಿಳಿದುಬಂದಿದೆ.
ಕೆಲವು ತಿಂಗಳ ಹಿಂದೆ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಕಲಬುರಗಿಗೆ ಬಂದಿದ್ದ ದೇವಣ್ಣ, ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಕುಡಿತದ ಚಟವಿದ್ದ ಆತ ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ ಎಂದು ತಿಳಿದು ಬಂದಿದೆ.
ಪತ್ನಿಯೊಂದಿಗೆ ಜಗಳವಾದ ಬಳಿಕ ಬಿದ್ದಾಪುರ ಕಾಲೋನಿ ರೈಲ್ವೆ ಗೇಟ್ ಬಳಿ ಗೂಡ್ಸ್ ರೈಲು ಬರುತ್ತಿದ್ದ ವೇಳೆ ರೈಲಿಗೆ ಅಡ್ಡ ನಿಂತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಪರಿಣಾಮ ದೇಹ ಛಿದ್ರಗೊಂಡಿದೆ.
ಈ ಕುರಿತು ವಾಡಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Next Story




