ಕಲಬುರಗಿ | ಹಳೆಯ ವೈಷಮ್ಯದಿಂದ ಯುವಕನ ಕೊಲೆ : 6 ಆರೋಪಿಗಳ ಬಂಧನ

ಮೃತ ಯುವಕ
ಕಲಬುರಗಿ : ಆಳಂದ ತಾಲೂಕಿನ ಮಾದನಹಿಪ್ಪರಗಾ ಪೊಲೀಸ್ ಠಾಣೆ ವ್ಯಾಪ್ತಿಯ ಝಳಕಿ ಕೆ. ಗ್ರಾಮದಲ್ಲಿ ಭಾನುವಾರ ಹಳೆಯ ವೈಷಮ್ಯದಿಂದಾಗಿ ಯುವಕನೋರ್ವನ ಕೊಲೆ ನಡೆದಿದ್ದು, ಪೊಲೀಸರು 6 ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ.
ಮೃತರನ್ನು ಗ್ರಾಮದ ಶೇಖರ ಗುರುಶರಣ ಪಾಟೀಲ (28) ಎಂದು ಗುರುತಿಸಲಾಗಿದೆ.
ಮೃತನಿಗೆ ಕಳೆದ ಆರು ತಿಂಗಳ ಹಿಂದಷ್ಟೇ ಮದುವೆಯಾಗಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ. ಬೆಂಗಳೂರಿನಲ್ಲೇ ಪತ್ನಿಯೊಂದಿಗೆ ಮನೆಮಾಡಿಕೊಂಡಿದ್ದು, ಕಳೆದ ಗುರುವಾರ ಝಳಕಿ ಗ್ರಾಮದ ಶ್ರೀ ಭೀಮಾಶಂಕರ ಜಾತ್ರೆಗೆಂದು ಬಂದಿದ್ದನು. ರವಿವಾರ ಸಂಜೆ ಬೆಂಗಳೂರಿಗೆ ಹೊಗಲು ಸಿದ್ಧತೆ ಮಾಡಿಕೊಂಡಿದ್ದನಾದರು ಬೆಳಗಿನ ಜಾವ ಹತ್ಯೆಯಾಗಿದ್ದಾನೆ.
ಮೃತನ ಕಾಕ ಚಿಚಲಪ್ಪನ ಮಗನಾದ ಶಶಿಕಾಂತ ಮೇಲೆ ಕ್ಷುಲ್ಲಕ ಕಾರಣದಿಂದ ಇದೇ ಗ್ರಾಮದ ಕೆಲವರು ಹಲ್ಲೆ ನಡೆಸಿದ್ದನ್ನು ಕೇಳಲು ಹೋದ ಶೇಖರನ ಮೇಲೆ ಹಲ್ಲೆ ನಡೆಸಿದ್ದರಿಂದ ತೀರ್ವವಾಗಿ ಗಾಯಗೋಮಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಈ ಕುರಿತು ಮಾದನಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆಯ ಆರೋಪಿಗಳಾದ 6 ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.





