ಕಲಬುರಗಿ | ಆಯುರ್ವೇದ ಜಾಗೃತಿ ಜಾಥಾಗೆ ಜಿಲ್ಲಾ ಪಂಚಾಯತ್ ಸಿಇಓ ಚಾಲನೆ

ಕಲಬುರಗಿ: ಜಿಲ್ಲಾಡಲಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಆಯುಷ್ ಇಲಾಖೆಯಿಂದ ಸೋಮವಾರ 10ನೇ ಅಂತರರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಆಯೋಜಿಸಿದ ಜಾಗೃತಿ ಜಾಥಾಗೆ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ಚಾಲನೆ ನೀಡಿದರು.
ಕಲಬುರಗಿ ನಗರದ ಜಗತ್ ವೃತ್ತದಲ್ಲಿ ಚಾಲನೆಗೊಂಡ "ಜನರಿಗಾಗಿ ಮತ್ತು ಜಗತ್ತಿಗಾಗಿ ಆಯುರ್ವೇದ" ಎಂಬ ಘೋಷವಾಕ್ಯದ ಆಯುರ್ವೇದ ಜಾಗೃತಿ ಜಾಥಾ ಡಿಸಿ ಕಚೇರಿ ವರೆಗೆ ಸಾಗಿ ಸಂಪನ್ನಗೊಂಡಿತ್ತು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಗಿರಿಜಾ ಸೇರಿದಂತೆ ಮತ್ತಿತರು ಇದ್ದರು.
Next Story





