ಕಲಬುರಗಿ ವಿಭಾಗ ಮಟ್ಟದ ಯುವ ಕವಿಗೋಷ್ಟಿಗೆ ನಂದಕುಮಾರ್ ಆಯ್ಕೆ

ಕಲಬುರಗಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿರುವ ಕಲಬುರಗಿ ವಿಭಾಗ ಮಟ್ಟದ ಯುವ ಕವಿಗೋಷ್ಠಿಗೆ ಕಲಬುರಗಿ ಯುವ ಕವಿ ಪಿ.ನಂದಕುಮಾರ್ ಅವರು ಆಯ್ಕೆಯಾಗಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯು ರಾಜ್ಯಾದ್ಯಂತ ನಾಲ್ಕು ವಿಭಾಗಗಳಲ್ಲಿ ಯುವ ಕವಿಗೋಷ್ಠಿ ಹಮ್ಮಿಕೊಂಡಿದೆ. ಅದರಂತೆಯೇ ಜೂ.17ರಂದು ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದಲ್ಲಿ ಕಲಬುರಗಿ ವಿಭಾಗ ಮಟ್ಟದ ಯುವ ಕವಿಗೋಷ್ಠಿ ನಡೆಸುತ್ತಿದ್ದು, ಈ ಗೋಷ್ಠಿಯಲ್ಲಿ ತಮ್ಮ ಸ್ವರಚಿತ ಕವನವನ್ನು ವಾಚಿಸಲು ಪಿ.ನಂದಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್. ಅವರು ತಿಳಿಸಿದ್ದಾರೆ.
Next Story





