ʼಗ್ಯಾರೆಂಟಿ ಅನುಷ್ಠಾನ ಮಾಡಿದ ಏಕೈಕ ಸರ್ಕಾರ ನಮ್ಮದುʼ : ಸಚಿವ ಬೋಸರಾಜು

ಎನ್.ಎಸ್.ಬೋಸರಾಜು
ಕಲಬುರಗಿ: ʼಇಡೀ ದೇಶದಲ್ಲಿ ಚುನಾವಣಾ ಗ್ಯಾರೆಂಟಿಗಳನ್ನು ಅನುಷ್ಠಾನಕ್ಕೆ ತಂದ ಏಕೈಕ ಸರ್ಕಾರ ನಮ್ಮದು. ಬಿಜೆಪಿ ಹಲವು ರಾಜ್ಯಗಳಲ್ಲಿ ಗ್ಯಾರೆಂಟಿ ಘೋಷಿಸಿಕೊಂಡರೂ ಅನುಷ್ಠಾನ ಮಾಡಿಲ್ಲ ಎಂದು ಸಣ್ಣ ನೀರಾವರಿ ಸಚಿವ ಬೋಸರಾಜು ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸಧ್ಯದ ಕಾಂಗ್ರೆಸ್ ಸರ್ಕಾರದ ಸಾಧನ ಸಮಾವೇಶಗಳ ಬಗ್ಗೆ ಟೀಕೆ ಮಾಡುವ ಹಕ್ಕಿಲ್ಲ. "ಅವರು ತಮ್ಮ ಆಡಳಿತಾವಧಿಯಲ್ಲಿ ಸಮಾವೇಶ ಮಾಡಿದಾಗ 25 ಸಾವಿರ ಜನರೂ ಬರಲಿಲ್ಲ. ಆದರೆ ನಮ್ಮ ಸಮಾವೇಶಗಳಿಗೆ ಲಕ್ಷ ಲಕ್ಷ ಜನ ಸೇರುತ್ತಿದ್ದಾರೆ" ಎಂದು ಹೇಳಿದರು.
"ಸುಮ್ಮನೆ ಬಜಾರಿನಲ್ಲಿ ನಿಂತು ಹೇಳುವುದನ್ನು ಬಿಟ್ಟು, ಏಮ್ಸ್ ತರಲಿ, ಅನುದಾನ ತರಲಿ, ಅದು ಅವರ ಕರ್ತವ್ಯ ಎಂದು ತಿಳಿಸಿದರು.
ಸಂಪುಟ ವಿಸ್ತರಣೆ ಸಧ್ಯಕ್ಕೆ ಇಲ್ಲ :
ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಸಚಿವರು, "ಸಧ್ಯಕ್ಕೆ ಸಂಪುಟ ವಿಸ್ತರಣೆಯ ಅವಶ್ಯಕತೆ ಇಲ್ಲವೆಂದು ಮುಖ್ಯಮಂತ್ರಿ ಅವರು ಖುದ್ದಾಗಿ ಹೇಳಿದ್ದಾರೆ. ಯಾವುದಾದರೂ ನಿರ್ಧಾರ ಕೈಗೊಳ್ಳಬೇಕಾದರೆ, ಅದು ಸಿಎಂ ಹಾಗೂ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.





