Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಕಲಬುರಗಿ
  4. ಯುವ ಬರಹಗಾರರು ನಿರಂತರ...

ಯುವ ಬರಹಗಾರರು ನಿರಂತರ ಅಧ್ಯಯನಶೀಲರಾಗಬೇಕು: ಡಾ. ಜಗನ್ನಾಥ ತರನಳ್ಳಿ

ವಾರ್ತಾಭಾರತಿವಾರ್ತಾಭಾರತಿ27 July 2025 7:50 PM IST
share
  • ಯುವ ಬರಹಗಾರರು ನಿರಂತರ ಅಧ್ಯಯನಶೀಲರಾಗಬೇಕು: ಡಾ. ಜಗನ್ನಾಥ ತರನಳ್ಳಿ
  • ಯುವ ಬರಹಗಾರರು ನಿರಂತರ ಅಧ್ಯಯನಶೀಲರಾಗಬೇಕು: ಡಾ. ಜಗನ್ನಾಥ ತರನಳ್ಳಿ

ಕಲಬುರಗಿ: (ಲಿಂ. ಸಂತೋಷಕುಮಾರ ಇಂಗಿನಶೆಟ್ಟಿ ವೇದಿಕೆ) ತಿದ್ದಿ ತಿಡಿ ಬರವಣಿಗೆಯಲ್ಲಿ ತೊಡಗಿಸಿಕೊಂಡ ಯುವ ಬರಹಗಾರರು ನಿರಂತರ ಅಭ್ಯಾಸ ಮಾಡಿ ಅಧ್ಯಯನಶೀಲರಾಗಬೇಕು ಎಂದು ಜಿಲ್ಲಾ ೨ನೇ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ. ಜಗನ್ನಾಥ ತರನಳ್ಳಿ ಅವರು ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ ಜಿಲ್ಲಾ 2 ನೇ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಚನ ಸಾಹಿತ್ಯ ಅರ್ಥವಾದರೆ ಕನ್ನಡದ ಸಾರಸ್ವತ ಲೋಕವೇ ಅರ್ಥವಾಗುವುದು. ಯುವಕರು ಸಾಹಿತ್ಯ ಕೃತಿಗಳನ್ನು ಕೇವಲ ಮೇಲ್ನೋಟಕ್ಕೆ ಓದದೇ ಆಳಕ್ಕಿಳಿಯುವ ಪ್ರಯತ್ನ ಮಾಡಬೇಕಾಗಿದೆ. ಹಾಗೂ ಯುವ ಸಾಹಿತ್ಯ ಕೇವಲ ಯುವಕರಿಗಾಗಿ ಬರೆಯುವ ಸಾಹಿತ್ಯವಲ್ಲ. ಹೊಸ ದೃಷ್ಟಿಕೋನ, ಅನ್ವಯಕ ಸೂಕ್ತ ಪದ ಬಳಕೆ ಮತ್ತು ಸೂಕ್ಷ್ಮ ಸಂವೇದನೆಗಳಿಗೆ ಸ್ಪಂದಿಸಬೇಕು ಎಂದರು.

ಇoದು ಪ್ರಾಥಮಿಕ ಹಂತದಿoದಲೇ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಬೇಕು. ಮತ್ತು ಇದಕ್ಕಾಗಿ ಸಾಹಿತ್ಯ ಪರಿಷತ್ ನ್ನು ಆರ್ಥಿಕ ಭದ್ರತೆ ಕಲ್ಪಿಸಲು ಶಾಸಕರು ಮತ್ತು ಪ್ರದೇಶಾಭಿವೃದ್ಧಿ ನಿಧಿಯಿಂದ ಪ್ರತಿ ವರ್ಷ ಅನುದಾನ ಕೊಡಿಸಬೇಕು. ಇದಕ್ಕೆ ಸರ್ಕಾರವೇ ಯೋಜನೆ ರೂಪಿಸಿ ಕಡ್ಡಾಯಗೊಳಿಸುವಂತೆ ಅವರು ಮನವಿ ಮಾಡಿದರು.

ಇಂದಿನ ಯುವಕರು ಸಾಮಾಜಿಕ ತಲ್ಲಣಗಳಿಗೆ ಸ್ಪಂದಿಸುವ ಬರಹ ಅವಶ್ಯ. ಸಾಮಾಜಿಕ ಜವಾಬ್ದಾರಿಗಳನ್ನು ಯುವ ಬರಹಗಾರರು ಹೊಂದಬೇಕು. ಆ ಮೂಲಕ ಬದಲಾವಣೆ ತರಲು ಸಾಧ್ಯ ಎಂದು ಹೇಳಿದರು. ನಾಡಿಗೆ ಮೊಟ್ಟ ಮೊದಲ ಲಾಕ್ಷಣಿಕ ಗ್ರಂಥ ನೀಡಿದ ಶ್ರೀವಿಜಯನ ಕವಿರಾಜಮಾರ್ಗ ಕೃತಿಯ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕು. ಕೃತಿಯ ವಿಚಾರಗಳನ್ನು ಯುವಕರಿಗೆ ತಿಳಿಸಬೇಕಾಗಿದೆ ಎಂದರು.

ಕೆರಳಿಸುವುದಕ್ಕಿಂತ ಅರಳುವ ಸಾಹಿತ್ಯ ಬೇಕು:

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಜನರ ಭಾವನೆಗಳನ್ನು ಕೆರಳಿಸುವ ಬದಲು ಭಾವ್ಯಕ್ಯತೆ ಮೂಡಿಸಿ ಅರಳಿಸುವ ಸಾಹಿತ್ಯ ಬೇಕು. ಜಾತಿ-ಧರ್ಮ ಗಡಿಗಳಾಚೆ ನಿಂತು ತನು ಮನ ತಿದ್ದಿ ತಿಡುವ ಜಾತ್ಯತೀತ ಮತ್ತು ನಿಷ್ಕಲಶ ಸಾಹಿತ್ಯ ತುಂಬಾ ಅವಶ್ಯಕವಾಗಿದೆ. ಸಮಾಜದಲ್ಲಿ ಭಾವ್ಯಕ್ಯತೆ ಬೆಳೆಸಿ ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಸಾಹಿತ್ಯ ಅವಶ್ಯವಾಗಿದೆ. ಮತ್ತು ಕಲಬುರಗಿ ನೆಲ ಸೌಹಾರ್ದತೆಯಿಂದ ಕೂಡಿದೆ. ಶರಣಬಸವೇಶ್ವರರು ಮತ್ತು ಖ್ವಾಜಾ ಬಂದೇ ನವಾಜ್ ರು ನಡೆದಾಡಿ ಭಾವ್ಯಕ್ಯತೆ ಬೆಳೆಸಿದ್ದಾರೆ. ಬಿರುಕುಗೊಂಡ ಸಮಾಜವನ್ನು ಮುಖ್ಯವಾಹಿನಿಗೆ ತಂದು ಪ್ರೀತಿ ವಿಶ್ವಾಸ ಹಾಗೂ ಸೌಹಾರ್ದತೆಯ ಮೌಲ್ಯಗಳನ್ನು ಅವರು ಬಿತ್ತಿ ಹೋಗಿದ್ದಾರೆ. ಅವರ ಆದರ್ಶ ಮೌಲ್ಯಗಳನ್ನು ನಾವೆಲ್ಲ ಅಳವಡಿಸಿಕೊಂಡು ಬದುಕಬೇಕಾಗಿದೆ. ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕ್ರಿಯಾಶೀಲವಾಗಿ ಕಾರ್ಯಗಳು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸರ್ವಜನಾಂಗದ ಶಾಂತಿ ತೋಟದ ನಾಡಿನಲ್ಲಿ ಯುವ ಸಾಹಿತ್ಯ ಸಮ್ಮೇಳನ ಹಮ್ಮಿಕೊಂಡಿದ್ದು, ಕಸಾಪ ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದುಕೊಮಡು ಕಾಯ್ ಮಾಡುತ್ತಿದೆ. ನಮ್ಮ ಹೊಸ ಪೀಳಿಗೆ ದೇಶದ ಭಾವಿ ಪ್ರಜೆಗಳಾಗಿದ್ದರೂ ಅವರಿಗೆ ಹಿರಿಯರ ಆದರ್ಶಗಳು ಅವಶ್ಯವಾಗಿವೆ. ಈ ನಿಟ್ಟಿನಲ್ಲಿ ಹಿರಯರ ಮಾರ್ಗದರ್ಶದಲ್ಲಿ ಯುವಕರ ಸಮ್ಮೇಳನ ಏರ್ಪಡಿಸಿದ್ದು, ಅವರ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡುವದರ ಜತೆಗೆ ಪ್ರೋತ್ಸಾಹಿಸುವ ಕಾರ್ಯವೂ ಮಾಡುತ್ತಿದೆ ಎಂದರು. ವರ್ತಮಾನದ ತಲ್ಲಣಗಳಿಗೆ ಸಾಹಿತ್ಯದ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.

ಸ್ವಾಗತ ಸಮಿತಿಯ ಅರುಣಕುಮಾರ ಎಂ.ವೈ. ಪಾಟೀಲ, ಮಲ್ಲಿನಾಥ ನಾಗನಳ್ಳಿ, ಅನ್ನಪೂರ್ಣ ಸಂಗೋಳಗಿ, ವಿದ್ಯಾಸಾಗರ ದೇಶಮುಖ, ಜಿಲ್ಲಾ ಕಸಾಪ ದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ಶರಣರಾಜ ಛಪ್ಪರಬಂದಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಸಿದ್ಧಲಿಂಗ ಬಾಳಿ ವೇದಿಕೆ ಮೇಲಿದ್ದರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ರಚಿತ ಯುವ ಸೌರಭ ಕೃತಿಯನ್ನು ಉದ್ಯಮಿ ಅಣವೀರ ಇಂಗಿನಶೆಟ್ಟಿ ಬಿಡುಗಡೆಗೊಳಿಸಿದರು. ಪ್ರವೀಣ ಪಾಟೀಲ ಹರವಾಳ, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಮಲ್ಲಿನಾಥ ತಳವಾರ ಮಾತನಾಡಿದರು.

ಪ್ರಾಧ್ಯಾಪಕ ಡಾ. ಅರುಣಕುಮಾರ ಲಗಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ವಿಚಾರ ವಿಸ್ತಾರ ಗೋಷ್ಠಿಯಲ್ಲಿ ಡಾ. ವಿಜಯಕುಮಾರ ಗೋತಗಿ ಆಶಯ ನುಡಿಗಳನ್ನಾಡಿದರು. ವರ್ತಮಾನದ ತಲ್ಲಣಗಳಿಗೆ ಸಾಹಿತ್ಯದ ಸೂತ್ರಗಳು ಕುರಿತು ಪ್ರೊ. ಕಲ್ಯಾಣರಾವ ಜಿ ಪಾಟೀಲ, ಜನಜನಾಂಗದ ಕಣ್ಣು ತೆರೆಸುವ ಕವಿ ಕಾವ್ಯ ಕೃತಿಗಳು ಕುರಿತು ಡಾ. ಕಾವ್ಯಶ್ರೀ ಮಹಾಗಾಂವಕರ್, ಸಮ್ಮೇಳನಾಧ್ಯಕ್ಷರ ಕುರಿತು ಮಹೇಶ ಕುಲಕರ್ಣಿ ಮಾತನಾಡಿದರು. ಶಿವಾನಂದ ದ್ಯಾಮಗೊಂಡ, ಮಹೇಶ ಪಟ್ಟಣ, ಸಚೀನ್ ಫರಹತಾಬಾದ, ಪ್ರಿಯಾಂಕಾ ಪಾಟೀಲ ವೇದಿಕೆ ಮೇಲಿದ್ದರು.

ಸಾಮಾಜಿಕ ತಲ್ಲಣಗಳಿಗೆ ಮಿಡಿದ ಕಾವ್ಯಗಳು:

ಶರಣು ಶರಣಾರ್ಥಿ ಬಾಬಾಸಾಹೇಬ, ಜ್ಯೋತಿ ಲಿಂಗಪಲ್ಲಿ ನಿರೂಪಿಸಿದ ಓ ಮನಸೆ ಮತ್ತೇಕೆ ಮುನಿಸು, ಕವಿತಾ ಹಳ್ಳಿ ಅವರು ಮಂಡಿಸಿದ ಯಾರನ್ನು ಯಾರು ನಿಂದಿಸಬಾರದು ಎಂಬ ಕವಿತೆಯಲ್ಲಿ ಮಹಿಳೆಯರ ಸ್ಥಿತಿ ಗತಿಯ ಬಗ್ಗೆ ಬೆಳಕು ಚೆಲ್ಲಿದರು. ದಸ್ತಗಿರ ನದಾಫ್, ಪ್ರಭಾವತಿ ಮೇತ್ರೆ, ಅಂಜುನಾಥ ನಾಯ್ಕಲ್, ಶಿವಕುಮಾರ ಯಲ್ದೆ, ಪಲ್ಲವಿ ಕುಲಕರ್ಣಿ, ಮಲ್ಲಮ್ಮ ಕಾಳಗಿ ಪರಮೇಶ್ವರ ಶಟಕಾರ, ಶಿವಯ್ಯ ಮಠಪತಿ, ರೇಣುಕಾ ಎನ್., ಮಂಜುಳಾ ಪಾಟೀಲ, ಸಂತೋಷ ಗುಡಿಮನಿ, ಈಶ್ವರ ನಾಟಿಕಾರ, ಮೌನೇಶ ಕರಕಿಹಳ್ಳಿ, ಶ್ರೀಕಾಂತ ಬಿರಾದಾರ, ಸಂತೋಷ ಕರಹರಿ ಅವರುಗಳು ಬೇರೆ ಬೇರೆ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕಾವ್ಯಗಳು ಮಂಡಿಸಿದರು.

ಡಾ. ಶರಣಬಸಪ್ಪ ವಡ್ಡನಕೇರಿ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯರಾದ ವೀರಣ್ಣ ಹೊನ್ನಳ್ಳಿ, ರಮೇಶ ಕಮಕನೂರ, ಸಿದ್ದಪ್ಪ ತಳ್ಳಳ್ಳಿ, ಮುಡುಬಿ ಗುಂಡೇರಾವ, ಜ್ಯೋತಿ ಹಿರೇಮಠ, ರೂಪಾದೇವಿ ಬಂಗಾರ ಸೇಡಮ್ ವೇದಿಕೆ ಮೇಲಿದ್ದರು. ದಸ್ತಗೀರ ನದಾಫ್, ಶಿವಕುಮಾರ್ ಯಲ್ದೆ ಸೇರಿದಂತೆ ಅನೇಕ ಕವಿಗಳು ತಮ್ಮ ಸ್ವ ರಚಿತ ಕವನ ವಾಚಿಸಿದರು.

ಸಮಾರೋಪ ನುಡಿಗಳನ್ನಾಡಿದ ಸಾಹಿತಿ ಸಿ.ಎಸ್. ಆನಂದ, ಸಾಹಿತ್ಯ ಸಮ್ಮೇಳನಗಳು ನಿತ್ಯೋತ್ಸವಗಳಾಗಿ ಜರುಗಬೇಕು. ಅನುಭವ ಹಂಚಿಕೊಳ್ಳುವ ಸೇತುವೆ ಆಗಬೇಕು. ಧರ್ಮ ಮತ್ತು ರಾಜಕೀಯ ಬೆಸುಗೆಯಾಗಿರಬೇಕು. ರೊಟ್ಟಿ ನಮ್ಮ ಧರ್ಮವಾಗಬೇಕು. ಹಾಗೂ ಧರ್ಮ ಸಂಸ್ಕೃತಿಯಾಗಬೇಕಾಗಿದೆ. ಸೀಮಾತೀತ ಬದುಕು ಬೇಕು. ಇಂದು ದಾಸರು, ಶರಣರು, ಲಂಕೇಶ ಅವರ ಸಾಹಿತ್ಯದ ಕಲ್ಪನೆಗಳು ಸಾಕಾರಗೊಳ್ಳಬೇಕು ಎಂದರು.

ಜಿಪo ನ ಮಾಜಿ ಉಪಾಧ್ಯಕ್ಷ ಶ್ರೀಧರ ರತ್ನಾಗಿರಿ, ಶರದ್ ಎನ್ ರೇಷ್ಮಿ, ರವಿ ಮದನಕರ್, ಕಲ್ಯಾಣಕುಮಾರ ಶೀಲವಂತ, ಪವನಕುಮಾರ ವಳಕೇರಿ, ಭುವನೇಶ್ವರಿ ಹಳ್ಳಿಖೇಡ, ಶ್ರೀಧರ ನಾಗನಳ್ಳಿ ಇತರರು ವೇದಿಕೆ ಮೇಲಿದ್ದರು.

ಸುಮಾರು 25ಕ್ಕೂ ಹೆಚ್ಚು ಜಿಲ್ಲೆಯ ಯುವ ಸಾಧಕರನ್ನು ವಿಜಯ ಚೇತನ ಪುರಸ್ಕಾರವನ್ನು ನೀಡಿ ಸತ್ಕರಿಸಲಾಯಿತು.

ಅದ್ಧೂರಿಯಾಗಿ ಜರುಗಿದ ಸಮ್ಮೇಳನಾಧ್ಯಕ್ಷರ ಸಾಂಸ್ಕೃತಿಕ ಮೆರವಣಿಗೆ, ಡೊಳ್ಳು, ಮಕ್ಕಳ ಕೋಲಾಟ, ಹಿರಿಯ ನೃತ್ಯ ಇವುಗಳು ನೆರೆದಿದ್ದ ಜನರ ವಿಶೆಷ ಗಮನ ಸೆಳೆಯಿತು. ಟ್ರಾಫಿಕ್ ಠಾಣೆಯ ಸಿಪಿಐ ಮಹಾಂತೇಶ ಪಾಟೀಲ ಚಾಲನೆ ನೀಡಿದರು. ಧರ್ಮರಾಜ ಜವಳಿ, ಜಗದೀಶ ಮರಪಳ್ಳಿ, ಬಾಬುರಾವ ಪಾಟೀಲ, ರವಿಕುಮಾರ ಶಹಾಪುರಕರ್, ಶಿವಲೀಲಾ ಕಲಗುರ್ಕಿ, ಎಸ್.ಕೆ. ಬಿರಾದಾರ, ಸಂತೋಷ ಕುಡಳ್ಳಿ, ಸುರೇಶ ಲೇಂಗಟಿ, ಸುರೇಶ ದೇಶಪಾಂಡೆ, ನಾಗಪ್ಪ ಸಜ್ಜನ್, ಎ ಕೆ ರಾಮೇಶ್ವರ, ಸಿ.ಎಸ್. ಮಾಲಿಪಾಟೀಲ ಸೇರಿದಂತೆ ಅನೇಕರು ಮೆರವಣಿಗೆಗೆ ಸಾಥ್ ಕೊಟ್ಟರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X