ಅಂಡರ್ 17 ಟೆನ್ನಿಸ್ ಬಾಲ್ ಕ್ರಿಕೆಟ್ | ರಾಜ್ಯ ತಂಡದ ನಾಯಕನಾಗಿ ಕೊಪ್ಪಳದ ಪ್ರಹ್ಲಾದ್ ನಿಲೋಗಲ್ ಆಯ್ಕೆ

ಕೊಪ್ಪಳ : ಅಂಡರ್ 17 ಟೆನ್ನಿಸ್ ಬಾಲ್ ಕ್ರಿಕೆಟ್‌ನ ರಾಜ್ಯ ತಂಡಕ್ಕೆ ನಾಯಕನಾಗಿ ಜಿಲ್ಲೆಯ ಮೈನಳ್ಳಿ ಗ್ರಾಮದ ಪ್ರಹ್ಲಾದ್ ನಿಲೋಗಲ್ ಎಂಬ ಯುವಕ ಆಯ್ಕೆಯಾಗಿದ್ದಾನೆ.
ತಂದೆ-ತಾಯಿ ಇಲ್ಲದೆ ಅಜ್ಜಿ ಮತ್ತು ಮಾವನ ಆಶ್ರಯದಲ್ಲಿ ಬೆಳೆದಿರುವ ಯುವಕ ಬಡತನವನ್ನು ಮೆಟ್ಟಿನಿಂತು ರಾಜ್ಯ ಮಟ್ಟದ 17 ವರ್ಷದವರ ಒಳಗಿನ ಟೆನ್ನಿಸ್ ಬಾಲ್ ಕ್ರಿಕೆಟ್ ತಂಡಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾನೆ.
10ನೇ ತರಗತಿ ವ್ಯಾಸಂಗವನ್ನು ಮುಗಿಸಿರುವ ಪ್ರಹ್ಲಾದ್ ಹಿಮಾಚಲ ಪ್ರದೇಶದಲ್ಲಿ ನಡೆದ ರಾಜ್ಯಮಟ್ಟದ ಪಂದ್ಯದಲ್ಲಿ ಮಧ್ಯಪ್ರದೇಶದ ವಿರುದ್ಧ ಆಡಿ ಸೆಮಿ ಪೈನಲ್‌ನಲ್ಲಿ ಸೋತು ಮೂರನೇ ಸ್ಥಾನ ಪಡೆದಿದ್ದ ರಾಜ್ಯ ತಂಡದಲ್ಲಿ ಭಾಗವಹಿಸಿದ್ದರು. ಮಧ್ಯಪ್ರದೇಶದ ವಿರುದ್ಧ 38 ಎಸತಗಳಲ್ಲಿ 83 ರನ್ ಬಾರಿಸಿ, 3 ಓವರ್‌ನಲ್ಲಿ 13 ರನ್ ನೀಡಿ 4 ವಿಕೆಟ್ ಪಡೆದು ತನ್ನ ಕೌಶಲ್ಯವನ್ನು ಪ್ರದರ್ಶಿಸಿದ್ದರು.
ʼನಾನು ಈ ಮಟ್ಟಕ್ಕೆ ಬೆಳೆಯಲು ಕಾರಣರಾದವರು ನನ್ನ ಆಜ್ಜಿ ಹಾಗೂ ಸೋದರ ಮಾವ, ಆದ್ದರಿಂದ ನಾನು ಅವರಿಗೆ ಚಿರಋಣಿಯಾಗಿರುತ್ತೇನೆʼ
-ಪ್ರಹ್ಲಾದ್ ನಿಲೋಗಲ್
Next Story





