ಕೊಪ್ಪಳ: ರಾಘವೇಂದ್ರ ಹಿಟ್ನಾಳ ಪರ ರ‍್ಯಾಲಿ; ಹಣ ಹಂಚಿಕೆ ಆರೋಪದ ವಿಡಿಯೋ ವೈರಲ್

ಕೊಪ್ಪಳ: ಮೂರು ಬಾರಿ ಶಾಸಕರಾಗಿರುವ ರಾಘವೇಂದ್ರ ಹಿಟ್ನಾಳ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ನಗರದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದರು.
ಕೊಪ್ಪಳದ ಬನ್ನಿಕಟ್ಟಿಯಿಂದ ಅಶೋಕ ವೃತ್ತದವರೆಗೆ ರ‍್ಯಾಲಿ ನಡೆಯಿತು. ಈ ವೇಳೆ ಪ್ರತಿಭಟನೆಗೆ ಜನರನ್ನು ಕರೆತರಲು ಕಾಂಗ್ರೆಸ್ ಮುಖಂಡರು ಹಣ ಹಂಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಣ ಹಂಚುತ್ತಿರುವ ದೃಶ್ಯದ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದುಡ್ಡು ಕೊಟ್ಟು ಪ್ರತಿಭಟನೆಗೆ ಜನರನ್ನು ಕರೆದುಕೊಂಡು ಬಂದಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಈ ಹೋರಾಟ ನಡೆಸಲಾಗಿದೆ. ವೈರಲ್ ವಿಡಿಯೋ ಬಗ್ಗೆ ಮುಖಂಡರಿಂದ ಇನ್ನೂ ಸ್ಪಷ್ಟನೆ ಬಂದಿಲ್ಲ.
ಆದರೆ ಸಚಿವ ಸ್ಥಾನಕ್ಕೆ ಹಣ ಕೊಟ್ಟು ಪ್ರತಿಭಟನೆಗೆ ಜನರನ್ನು ಕರೆತರುವ ಕೆಳಮಟ್ಟಕ್ಕೆ ಯಾರು ಇಳಿಯಬಾರದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Next Story




