Koppal | ಬಿರುಗಾಳಿಗೆ ಹಾರಿದ ಬಸ್ ನಿಲ್ದಾಣದ ಮೇಲ್ಛಾವಣಿ : ಮನೆಯ ಕಿಟಕಿ ಜಖಂ

ಕೊಪ್ಪಳ : ನಿನ್ನೆ ಸಂಜೆ ಬೀಸಿದ ಬಿರುಗಾಳಿಗೆ ಗಂಗಾವತಿ ತಾಲ್ಲೂಕಿನ ಇರಕಲ್ಲಗಡ ಗ್ರಾಮದ ಕೆಕೆಆರ್‌ಟಿಸಿ ಬಸ್ ನಿಲ್ದಾಣದ ತಗಡಿನ ಮೇಲ್ಛಾವಣಿ ಹಾರಿ ಹೋಗಿರುವ ಘಟನೆ ನಡೆದಿದೆ.
ಭಾರಿ ಗಾಳಿಯ ಹೊಡೆತಕ್ಕೆ ಮೇಲ್ಛಾವಣಿಯ ತಗಡುಗಳು ಸುಮಾರು 200 ಮೀಟರ್ ದೂರಕ್ಕೆ ಹಾರಿ ಬಿದ್ದಿವೆ. ಬಸ್ ನಿಲ್ದಾಣದ ಕಬ್ಬಿಣದ ಅಂಕಲರ್ ಹನುಮೇಶ ಕುಷ್ಟಗಿ ಅವರ ಮನೆಯ ಮಹಡಿಯ ಕಿಟಕಿ ಮೂಲಕ ತಗಡು ನುಗ್ಗಿ ಗಾಜುಗಳು ಜಖಂಗೊಂಡಿವೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಬಿರುಗಾಳಿಯ ತೀವ್ರತೆಗೆ ಸಾರ್ವಜನಿಕರು ಆತಂಕಗೊಂಡಿದ್ದರು.
ಬಸ್ ನಿಲ್ದಾಣಕ್ಕೆ ಉಂಟಾದ ಹಾನಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ತಕ್ಷಣ ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Next Story




