ಬಿಹಾರದ ಸೇತುವೆಯಲ್ಲಿ ಸಿಕ್ಕಿಕೊಂಡ ವಿಮಾನ, ಟ್ರಾಫಿಕ್ ಜಾಂ!
Photo: @NeerajRanjan84 \ X
ಪಾಟ್ನಾ : ಬಿಹಾರದ ಮೋತಿಹಾರಿಯಲ್ಲಿ ಹಳೆಯ ವಿಮಾನವನ್ನು ಲಾರಿಯ ಮೂಲಕ ಸಾಗಿಸುವಾಗ ಸೇತುವೆಯ ಕೆಳಗೆ ಸಿಲುಕಿಕೊಂಡು ಟ್ರಾಫಿಕ್ ಜಾಮ್ ಉಂಟಾದ ಘಟನೆ ವರದಿಯಾಗಿದೆ ಎಂದು indiatoday.in ವರದಿ ಮಾಡಿದೆ.
ಮುಂಬೈನಿಂದ ಅಸ್ಸಾಂಗೆ ಸಾಗಿಸುತ್ತಿದ್ದಾಗ ವಿಮಾನವು ಮೋತಿಹಾರಿಯ ಪಿಪ್ರಕೋತಿ ಸೇತುವೆಯನ್ನು ದಾಟುತ್ತಿದ್ದಾಗ ಸಿಲುಕಿಕೊಂಡಿತು ಎನ್ನಲಾಗಿದೆ. ಬಳಿಕ ಚಾಲಕರು ಮತ್ತು ಸ್ಥಳೀಯರ ಸಹಾಯದಿಂದ ವಿಮಾನದ ಅವಶೇಷವನ್ನು ಹೊರತೆಗೆಯಲಾಯಿತು ಎಂದು ತಿಳಿದುಬಂದಿದೆ.
ಕಳೆದ ವರ್ಷ ನವೆಂಬರ್ನಲ್ಲಿ ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ರಸ್ತೆಯ ಅಂಡರ್ಪಾಸ್ನಲ್ಲಿ ವಿಮಾನವೊಂದು ಸಿಲುಕಿಕೊಂಡಾಗ ಇದೇ ರೀತಿಯ ಘಟನೆ ಸಂಭವಿಸಿತ್ತು. ಕಳೆದ ಸಪ್ಟೆಂಬರ್ ನಲ್ಲಿ ಬೆಂಗಳೂರಿನ ಹೆಚ್ ಎ ಎಲ್ ಬಳಿ ಹೆಲಿಕಾಪ್ಟರ್ ಕೊಂಡೊಯ್ಯುತ್ತಿದ್ದಾಗ ರಸ್ತೆ ಮಧ್ಯೆ ಸಿಲುಕಿಕೊಂಡು ಟ್ರಾಫಿಕ್ ಜಾಂ ಉಂಟಾಗಿತ್ತು.
Next Story