ದೆಹಲಿಯಲ್ಲಿ ದಟ್ಟ ಮಂಜು, ಸಂಚಾರ ಅಸ್ತವ್ಯಸ್ತ
Photo: twitter.com/thinktankabhi
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಮುಂಜಾನೆ ದಟ್ಟ ಮಂಜು ಕವಿದಿದ್ದು, ವಾಹನ ಸಂಚಾರ ದುಸ್ತರವಾಗಿದೆ. 50 ಮೀಟರ್ ದೂರಕ್ಕೆ ಮಾತ್ರ ರಸ್ತೆ ಕಾಣಿಸುತ್ತಿರುವುದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ರಾಜಧಾನಿಯಲ್ಲಿ ಅತ್ಯಂತ ದಟ್ಟ ಮಂಜು ಮುಸುಕಿದ ಸ್ಥಿತಿ ಇದ್ದು, ಪಂಜಾಬ್, ಹರ್ಯಾಣ, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಸೇರಿದಂತೆ ವಾಯವ್ಯ ಮತ್ತು ಕೇಂದ್ರ ಭಾರತದಲ್ಲಿಯೂ ಇದೇ ಸ್ಥಿತಿ ಎಂದು ಇಲಾಖೆ ಸ್ಪಷ್ಟಪಡಿಸಿದೆಎಂದು ಭಾರತದ ಹವಾಮಾನ ಇಲಾಖೆ ಹೇಳಿದೆ.
ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಪಾಲಂ ವೀಕ್ಷಣಾಲಯದ ಬಳಿ 125 ಮೀಟರ್ ದೂರಕ್ಕೆ ಕಾಣಿಸುತ್ತಿದೆ. ಆದರೆ ಸಫ್ದರ್ಜಂಗ್ ಪ್ರದೇಶದಲ್ಲಿ ಈ ಅಂತರ ಕೇವಲ 50 ಮೀಟರ್ ಮಾತ್ರ ಇದೆ. ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ದಟ್ಟ ಮಂಜು ಕವಿದ ಕಾರಣದಿಂದ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 30 ವಿಮಾನಗಳ ಹಾರಾಟ ವಿಳಂಬವಾಗಿದೆ.
ದೆಹಲಿಯ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಷಿಯಸ್ ಇಳಿದಿದ್ದು, ಗರಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಷಿಯಸ್ ಆಗಿದೆ. ದೆಹಲಿ ಹೊರತುಪಡಿಸಿ ಉತ್ತರ ಭಾರತದ ಹಲವು ನಗರಗಳಲ್ಲಿ ಮಂಜು ಮುಸುಕಿದ ವಾತಾವರಣದಿಂದಾಗಿ ಪಾಟಿಯಾಲಾ, ಲಕ್ನೋ ಮತ್ತು ಪ್ರಯಾಗ್ರಾಜ್ ನಲ್ಲಿ ಕಾಣುವ ಅಂತರ 25 ಮೀಟರ್ ಆಗಿದೆ.