ನ್ಯೂಯಾರ್ಕ್| ಅಗ್ನಿ ಅವಘಡದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಮೃತ್ಯು

Photo | NDTV
ಹೈದರಾಬಾದ್: ನ್ಯೂಯಾರ್ಕ್ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ತೆಲಂಗಾಣದ ಜಲಗಾಂವ್ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದಾರೆ.
ಮೃತ ವಿದ್ಯಾರ್ಥಿನಿಯನ್ನು ಸಹಜ ರೆಡ್ಡಿ ಉದುಮಲ ಎಂದು ಗುರುತಿಸಲಾಗಿದೆ. ಉನ್ನತ ವ್ಯಾಸಂಗಕ್ಕಾಗಿ 2021ರಲ್ಲಿ ಅಮೆರಿಕಕ್ಕೆ ತೆರಳಿದ್ದ ಸಹಜ ರೆಡ್ಡಿ ಉದುಮಲ, ನ್ಯೂಯಾರ್ಕ್ನ ಅಲ್ಬನಿಯಲ್ಲಿ ವಾಸಿಸುತ್ತಿದ್ದರು. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಪಕ್ಕದ ಕಟ್ಟಡದಲ್ಲಿ ಉದ್ಭವಿಸಿದ ಬೆಂಕಿಯ ಜ್ವಾಲೆ ಕ್ಷಿಪ್ರವಾಗಿ ಸಹಜ ರೆಡ್ಡಿ ಉದುಮಲ ಅವರ ಮನೆಗೂ ಹಬ್ಬಿದೆ. ಮನೆಗೆ ಬೆಂಕಿ ಆವರಿಸಿದಾಗ ಆಕೆ ನಿದ್ರಿಸುತ್ತಿದ್ದರು ಎನ್ನಲಾಗಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ನ್ಯೂಯಾರ್ಕ್ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿ, ಅಗ್ನಿ ಅವಘಡದಲ್ಲಿ ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಈ ಕುರಿತು ಮಾಹಿತಿ ನೀಡಲಾಗಿದ್ದು, ಅವರಿಗೆ ಅಗತ್ಯವಿರುವ ಎಲ್ಲಾ ನೆರವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದೆ.
Next Story





