West Bengal | ಫಾಲ್ಟಾ ಮರು ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಜಯ; ದೇಬಾಂಗ್ಶು ಪಾಂಡಾಗೆ 1.09 ಲಕ್ಷ ಮತಗಳ ಅಂತರದ ಗೆಲುವು

Photo Credit: PTI
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಮರು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ದೇಬಾಂಗ್ಶು ಪಾಂಡಾ 1,09,021 ಮತಗಳ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ರವಿವಾರ ನಡೆದ ಮತ ಎಣಿಕೆಯಲ್ಲಿ ದೇಬಾಂಗ್ಶು ಪಂಡಾ 1,49,666 ಮತಗಳನ್ನು ಪಡೆದರೆ, ಸಿಪಿಎಂ ಅಭ್ಯರ್ಥಿ ಶಂಭು ನಾಥ್ ಕುರ್ಮಿ 40,645 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಕಾಂಗ್ರೆಸ್ ಅಭ್ಯರ್ಥಿ ಅಬ್ದುರ್ ರಝಾಕ್ ಮುಲ್ಲಾ 10,084 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು. ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ಕೇವಲ 7,783 ಮತಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನಕ್ಕೆ ಕುಸಿದರು.
ಫಾಲ್ಟಾ ಕ್ಷೇತ್ರವು 2011ರಿಂದ ಟಿಎಂಸಿಯ ಭದ್ರಕೋಟೆಯಾಗಿತ್ತು. ಆದರೆ, ಈ ಬಾರಿ ನಡೆದ ಮರು ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.
ಮರು ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಇದನ್ನು ಟಿಎಂಸಿ ‘ವೈಯಕ್ತಿಕ ನಿರ್ಧಾರ’ ಎಂದು ಹೇಳಿತ್ತು.
ಈ ಗೆಲುವಿನೊಂದಿಗೆ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿಯ ಸಂಖ್ಯಾಬಲ 208ಕ್ಕೆ ಏರಿಕೆಯಾಗಿದೆ.




