Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಹೊಸಪೇಟೆ: ಹೊಯ್ಸಳರ ಕಾಲದ ಅಪ್ರಕಟಿತ ಶಾಸನ...

ಹೊಸಪೇಟೆ: ಹೊಯ್ಸಳರ ಕಾಲದ ಅಪ್ರಕಟಿತ ಶಾಸನ ಪತ್ತೆ

ಮಹಮ್ಮದ್ ಗೌಸ್, ವಿಜಯನಗರಮಹಮ್ಮದ್ ಗೌಸ್, ವಿಜಯನಗರ9 Jun 2026 3:26 PM IST
share
ಹೊಸಪೇಟೆ: ಹೊಯ್ಸಳರ ಕಾಲದ ಅಪ್ರಕಟಿತ ಶಾಸನ ಪತ್ತೆ
ಬಡಗೇರರ ವೃತ್ತಿ ಉಲ್ಲೇಖದ ಅಪರೂಪದ ಶಾಸನ ಶೋಧಿಸಿದ ವಿಜಯನಗರ ತಿರುಗಾಟ ಸಂಶೋಧನಾ ತಂಡ

ಹೊಸಪೇಟೆ: ತಾಲೂಕಿನ ಗುಂಡ್ಲವದ್ದಿಗೇರಿ ಗ್ರಾಮದಲ್ಲಿ ಹೊಯ್ಸಳರ ಕಾಲಕ್ಕೆ ಸೇರಿದ ಅಪರೂಪದ ಅಪ್ರಕಟಿತ ದಾನ ಶಾಸನವೊಂದು ಪತ್ತೆಯಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಶಾಸನದಲ್ಲಿ ಬಡಗೇರರ (ಬಡಗಿ ಸಮುದಾಯ) ವೃತ್ತಿಯ ಉಲ್ಲೇಖ ಕಂಡುಬಂದಿರುವುದು ವಿಶೇಷವಾಗಿದ್ದು, ಇತಿಹಾಸ ಅಧ್ಯಯನಕ್ಕೆ ಮಹತ್ವದ ಮಾಹಿತಿ ಒದಗಿರುವುದು ಇತಿಹಾಸ ಸಂಶೋಧಕರ ಗಮನ ಸೆಳೆದಿದೆ.

ಗುಂಡ್ಲವದ್ದಿಗೇರಿ ಗ್ರಾಮದ ಚಂದ್ರಯ್ಯ ಸ್ವಾಮಿ ಅವರ ಹೊಲದಲ್ಲಿ ಈ ಶಾಸನ ಪತ್ತೆಯಾಗಿದ್ದು, ವಿಜಯನಗರ ತಿರುಗಾಟ ಸಂಶೋಧನ ತಂಡದ ಡಾ. ಗೋವಿಂದ, ಪ್ರೊ. ಎಚ್. ತಿಪ್ಪೇಸ್ವಾಮಿ, ಡಾ. ಕೃಷ್ಣೆಗೌಡ, ಇಸ್ಮಾಯೀಲ್ ಸಿದ್ದೀಕ್ ಹಾಗೂ ಅಶೋಕ ತಲೇಖಾನ್ ಅವರು ತುಮಕೂರಿನ ಇತಿಹಾಸ ಸಂಶೋಧಕ ಶಶಿಕುಮಾರ ನಾಯಕ ಅವರ ಮಾರ್ಗದರ್ಶನದಲ್ಲಿ ಶೋಧಿಸಿದ್ದಾರೆ. ಗ್ರಾಮಸ್ಥರಾದ ಮಂಕಾಳಪ್ಪ, ಮಲ್ಲನಗೌಡ ಹಾಗೂ ಗಂಗಾಧರ ಅವರು ಸಹಕಾರ ನೀಡಿದ್ದಾರೆ.

ಸುಮಾರು ಎಂಟು ಅಡಿ ಎತ್ತರ ಮತ್ತು ಒಂದೂವರೆ ಅಡಿಅಗಲ ಹೊಂದಿರುವ ಈ ಗ್ರಾನೈಟ್ ಶಾಸನದಲ್ಲಿ ಒಟ್ಟು ಹದಿನೈದು ಸಾಲುಗಳ ಲಿಪಿ ಕೆತ್ತಲಾಗಿದೆ. ಮೊದಲ ಸಾಲಿನಲ್ಲಿ ಹೊಯ್ಸಳರ ನರಸಿಂಹ ಚಕ್ರವರ್ತಿಯ ಹೆಸರನ್ನು ಉಲ್ಲೇಖಿಸಲಾಗಿದೆ. ಶಾಸನದ ಪ್ರಕಾರ, ಆ ಕಾಲದಲ್ಲಿ ಕಾಸಿಗೌಡ ಎಂಬ ಸ್ಥಳೀಯ ಆಡಳಿತಗಾರ ಗುಂಡ್ಲವದ್ದಿಗೇರಿ ಪ್ರದೇಶವನ್ನು ಆಡಳಿತ ನಡೆಸುತ್ತಿದ್ದನು. ಆತನು ಗ್ರಾಮದ ಅಭಿವೃದ್ಧಿಗಾಗಿ ಕೆರೆಯನ್ನು ನಿರ್ಮಿಸಿದ್ದು, ದೇವಾಲಯಕ್ಕೆ ಜಾಗಟೆ ಮತ್ತು ಕೊಳಗಗಳನ್ನು ದಾನವಾಗಿ ನೀಡಿರುವುದಾಗಿ ಉಲ್ಲೇಖಿಸಲಾಗಿದೆ.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಎಚ್. ತಿಪ್ಪೇಸ್ವಾಮಿ ಅವರ ಪ್ರಕಾರ, ಈ ಶಾಸನವು ವಿಜಯನಗರ ಜಿಲ್ಲೆಯ ಈ ಭಾಗದಲ್ಲಿ ಹೊಯ್ಸಳರ ಆಳ್ವಿಕೆಗೆ ಸ್ಪಷ್ಟ ಸಾಕ್ಷಿಯಾಗಿದೆ. ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ನೀರಾವರಿ ವ್ಯವಸ್ಥೆ ಹಾಗೂ ಧಾರ್ಮಿಕ ಚಟುವಟಿಕೆಗಳಿಗೆ ಆಡಳಿತಗಾರರು ನೀಡುತ್ತಿದ್ದ ಪ್ರೋತ್ಸಾಹದ ಕುರಿತ ಮಾಹಿತಿಯನ್ನು ಒದಗಿಸುತ್ತದೆ ಎಂದು ಇತಿಹಾಸ ತಜ್ಞರು ತಿಳಿಸಿದ್ದಾರೆ.

ಶಾಸನದ ಪ್ರಮುಖ ವೈಶಿಷ್ಟ್ಯವೆಂದರೆ ಬಡಗೇರರ ವೃತ್ತಿಯ ಉಲ್ಲೇಖವಾಗಿದೆ. ಕಾಸಿಗೌಡನು ಸಂಣಯನ ಮಗನಾದ ಬಡಗಿ ನಾಗಭೋಜನಿಗೆ ಒಂದು ಹೊಲವನ್ನು ಸರ್ವಮಾನ್ಯವಾಗಿ ದಾನ ನೀಡಿರುವುದು ಶಾಸನದಲ್ಲಿ ದಾಖಲಿಸಲಾಗಿದೆ. ಇದರಿಂದ ಆ ಭೂಮಿಗೆ ಯಾವುದೇ ತೆರಿಗೆ ವಿಧಿಸಲಾಗುತ್ತಿರಲಿಲ್ಲ ಎಂಬುದು ತಿಳಿದುಬರುತ್ತದೆ. ಜೊತೆಗೆ ಸೂರ್ಯ, ಚಂದ್ರ ಹಾಗೂ ನಕ್ಷತ್ರಗಳು ಇರುವವರೆಗೂ ದಾನ ಶಾಶ್ವತವಾಗಿರಬೇಕು ಎಂಬ ಆಶಯ ಹಾಗೂ ದಾನವನ್ನು ಹಿಂಪಡೆಯಬಾರದು ಎಂಬ ಶಾಪಾಶಯ ವಾಕ್ಯಗಳೂ ಶಾಸನದಲ್ಲಿ ಕಾಣಿಸುತ್ತವೆ. ಇದು ಮಧ್ಯಯುಗೀನ ದಾನ ಸಂಪ್ರದಾಯಗಳ ಕುರಿತು ಅಮೂಲ್ಯ ಮಾಹಿತಿಯನ್ನು ಒದಗಿಸುತ್ತದೆ.

ಹಿಂದೆಯೂ ಇದೇ ಸಂಶೋಧನಾ ತಂಡವು ಕುಂಬಾರರ ವೃತ್ತಿಯ ಉಲ್ಲೇಖ ಹೊಂದಿದ ಅಪ್ರಕಟಿತ ದಾನ ಶಾಸನವನ್ನು ಪತ್ತೆ ಮಾಡಿತ್ತು. ಇದೀಗ ಬಡಗೇರರ ವೃತ್ತಿಯ ಉಲ್ಲೇಖ ಕಂಡುಬಂದಿರುವುದು ಆ ಕಾಲದ ಸಾಮಾಜಿಕ ಹಾಗೂ ವೃತ್ತಿಪರ ವ್ಯವಸ್ಥೆಗಳ ಅಧ್ಯಯನಕ್ಕೆ ಹೊಸ ಆಯಾಮ ನೀಡಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಶಾಸನ ಪತ್ತೆಯಾದ ಸ್ಥಳದ ಸಮೀಪದಲ್ಲಿಯೇ ಹಳೆಯ ಕೆರೆಯ ಕುರುಹುಗಳು ಕಂಡುಬರುತ್ತಿದ್ದು, ಮಳೆನೀರಿನ ಸಂರಕ್ಷಣೆಗಾಗಿ ಅಂದಿನ ಆಡಳಿತಗಾರರು ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತದೆ. ಅಲ್ಲದೆ ಗ್ರಾಮದಲ್ಲಿರುವ ಸುಂದರ ಈಶ್ವರ ದೇವಾಲಯದ ರಚನಾಶೈಲಿಯನ್ನು ಗಮನಿಸಿದರೆ ಅದು ಹೊಯ್ಸಳರ ಕಾಲಕ್ಕೆ ಸೇರಿದಿರಬಹುದೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಶಾಸನದಲ್ಲಿ ಉಲ್ಲೇಖಿಸಲಾದ ಗಂಟೆ, ಜಾಗಟೆ ಹಾಗೂ ಇತರ ದಾನಗಳು ಇದೇ ದೇವಾಲಯಕ್ಕೆ ಸಲ್ಲಿಸಲ್ಪಟ್ಟಿರಬಹುದೆಂಬ ಸಾಧ್ಯತೆಯೂ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಪ್ರಸ್ತುತ ಈ ಶಾಸನವು ಯಾವುದೇ ರಕ್ಷಣೆಯಿಲ್ಲದೆ ಹೊಲದಲ್ಲೇ ಬಿಸಿಲು, ಗಾಳಿ ಮತ್ತು ಮಳೆಯ ಹೊಡೆತಕ್ಕೆ ಸಿಲುಕಿದ್ದು, ಅಕ್ಷರಗಳು ಹಾಳಾಗುವ ಅಪಾಯ ಎದುರಾಗಿದೆ. ಸಂಬಂಧಪಟ್ಟ ಪುರಾತತ್ವ ಮತ್ತು ಸಂಸ್ಕೃತಿ ಇಲಾಖೆ ತಕ್ಷಣ ಸಂರಕ್ಷಣೆ ಕ್ರಮ ಕೈಗೊಳ್ಳಬೇಕು ಎಂದು ಸಂಶೋಧಕರು ಆಗ್ರಹಿಸಿದ್ದಾರೆ.

ಈ ಅಪರೂಪದ ಶಾಸನ ಪತ್ತೆಯು ಹೊಯ್ಸಳರ ಕಾಲದ ಆಡಳಿತ ವ್ಯವಸ್ಥೆ, ನೀರಾವರಿ, ದಾನ ಸಂಪ್ರದಾಯ ಹಾಗೂ ವೃತ್ತಿಪರ ಸಮುದಾಯಗಳ ಸ್ಥಾನಮಾನ ಕುರಿತು ಹೊಸ ಬೆಳಕು ಚೆಲ್ಲಿದ್ದು, ಇತಿಹಾಸ ಸಂಶೋಧನೆಯಲ್ಲಿ ಮಹತ್ವದ ಆವಿಷ್ಕಾರವೆಂದು ಪರಿಗಣಿಸಲಾಗಿದೆ.

ಒಂದು ಶಾಸನ ಕೇವಲ ಕಲ್ಲಿನ ಮೇಲಿನ ಅಕ್ಷರಗಳಲ್ಲ; ಅದು ನಮ್ಮ ಪೂರ್ವಜರ ಜೀವನ, ವೃತ್ತಿ ಮತ್ತು ಸಂಸ್ಕೃತಿಯ ಜೀವಂತ ದಾಖಲೆಯಾಗಿದೆ. ಈ ದಾನ ಶಾಸನವು ವಿಜಯನಗರ ಜಿಲ್ಲೆಯ ಇತಿಹಾಸಕ್ಕೆ ಹೊಸ ಅಧ್ಯಾಯವನ್ನು ಸೇರಿಸಿದೆ.

-ಡಾ. ಗೋವಿಂದ, ಇತಿಹಾಸ ಸಂಶೋಧಕ

ಮಣ್ಣಿನೊಳಗೆ ಮರೆತು ಹೋಗಿದ್ದ ಶಾಸನ ಇಂದು ಮಾತನಾಡಲು ಆರಂಭಿಸಿದೆ. ಇದು ಅಂದಿನ ದಾನ ಸಂಸ್ಕೃತಿ ಮತ್ತು ವೃತ್ತಿಪರ ಸಮಾಜದ ಗೌರವವನ್ನು ಅನಾವರಣಗೊಳಿಸುತ್ತದೆ.

-ವಿಜಯನಗರ ತಿರುಗಾಟ ಸಂಶೋಧನಾ ತಂಡ

share
ಮಹಮ್ಮದ್ ಗೌಸ್, ವಿಜಯನಗರ
ಮಹಮ್ಮದ್ ಗೌಸ್, ವಿಜಯನಗರ
Next Story
X