Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಒಳ ಮೀಸಲಾತಿಯಲ್ಲಿ ಸಾಮಾನ್ಯ ವರ್ಗ ಮತ್ತು...

ಒಳ ಮೀಸಲಾತಿಯಲ್ಲಿ ಸಾಮಾನ್ಯ ವರ್ಗ ಮತ್ತು ಬಿಂದು ವರ್ತುಲಗಳ ಹೊಸ ಬಿಕ್ಕಟ್ಟುಗಳು?

ದಾಸನೂರು ಕೂಸಣ್ಣದಾಸನೂರು ಕೂಸಣ್ಣ24 May 2026 9:40 AM IST
share
ಒಳ ಮೀಸಲಾತಿಯಲ್ಲಿ ಸಾಮಾನ್ಯ ವರ್ಗ ಮತ್ತು ಬಿಂದು ವರ್ತುಲಗಳ ಹೊಸ ಬಿಕ್ಕಟ್ಟುಗಳು?

ಒಳ ಮೀಸಲಾತಿಯಲ್ಲಿ ಸಾಮಾನ್ಯ ವರ್ಗವೆಂಬ ಬಿಂಕದ ವರ್ಗೀಕರಣವು ಸುಪ್ರೀಂ ಕೋರ್ಟ್ ವಿಧಿಸಿರುವ ಮಾನದಂಡವಾಗಿಲ್ಲ. ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ನಿಯಮಗಳಿಲ್ಲ. ಆದರೆ, ಕರ್ನಾಟಕ ರಾಜ್ಯ ಮಾತ್ರ ‘ರಾಜಕೀಯ’ ತೀರ್ಮಾನದಡಿ ಸಲ್ಲದ ಅವಾಸ್ತವಿಕ ವಿಚಾರಗಳನ್ನು ತೀರ್ಮಾನಿಸಿದೆ. ಇದು ನೇರವಾಗಿ ಒಳ ಮೀಸಲಾತಿ ಕೋರುವವರನ್ನು ಮೂಲೆಗುಂಪು ಮಾಡುವ ಹುನ್ನಾರಗಳು ಎಂಬ ಆರೋಪಗಳಿವೆ.

ರಘೋತ್ತಮ ಹೊ.ಬ. ಅವರ (‘ವಾರ್ತಾ ಭಾರತಿ’, 6 ಮೇ, 2026) ಅಂಕಣದಲ್ಲಿ ಒಳಮೀಸಲಾತಿ ಹೊಸ ಪರಿಕಲ್ಪನೆ ಎಂದಿದ್ದಾರೆ. ಖಂಡಿತವಾಗಿಯೂ ಇದು ಹಳೆಯ ಪರಿಕಲ್ಪನೆ ಎಂದರೆ ತಪ್ಪಾಗದು. ಸಾಮಾನ್ಯವಾಗಿ ಮೀಸಲಾತಿಯಲ್ಲಿ ಮೂಲಭೂತವಾಗಿ ಎರಡು ವ್ಯಾಖ್ಯಾನಗಳಿವೆ: ಲಂಬಾಂತಾರ (Vertical) ಮತ್ತು ಸಮತಳ (Horizontal) ಮೀಸಲಾತಿ. ಒಂದು ಲಂಬಾಂತರ ಶೇಕಡಾಂಶ ಅನುಪಾತವನ್ನು ಮುಕ್ತವಾಗಿ ಎಲ್ಲರೂ ಅನುಭೋಗಿಸುವುದು. ಸಮತಳ ಮೀಸಲಾತಿಯನ್ನು ಸಾಮಾನ್ಯವಾಗಿ ಸಮುದಾಯಗಳ ಸಮಾಜೋಆರ್ಥಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ ಮೇಲಡಿಯಲ್ಲಿ ಗುಂಪುಗಳನ್ನು ರಚಿಸಿ ಹಂಚುವುದಾಗಿದೆ. ಒಳ ಮೀಸಲಾತಿ ನಿರ್ಧಾರಾಂಶ ಸಮುದಾಯಗಳ ಅಂತರ ಹಿಂದುಳಿದಿರುವಿಕೆ ಮಾನದಂಡವಾದಾಗ ಅಲ್ಲಿ ಪರಿಪೂರ್ಣ (absolute) ಮತ್ತು ಸಾಪೇಕ್ಷ (Relative) ಅಥವಾ ಸೀಮಂತ (Marginal) ಎಂಬ ತುಲನಾತ್ಮಕ ಅಂಶಗಳಡಿ ಪರಿಗಣನೆಯಾಗುತ್ತವೆ. ಇವುಗಳು ಪರಸ್ಪರ ಪೂರಕ ಮತ್ತು ಪರಿಶೀಲನಾ ದತ್ತಾಂಶಗಳ ಮೂಲಕ ನಿರ್ಧಾರವಾಗುತ್ತವೆ. ಕರ್ನಾಟಕ ರಾಜ್ಯದಲ್ಲಿ ಹೇಳುವುದಾದರೆ ನಾಗನಗೌಡರ್ ಆಯೋಗದಿಂದ ಕಾಂತರಾಜು ಆಯೋಗಗಳೆಲ್ಲವೂ ಈ ಅಂಶಗಳಡಿ ತಮ್ಮ ಒಳ ಮೀಸಲಾತಿ ನಿಲುವುಗಳನ್ನು ಸಮರ್ಥಿಸಿವೆ. ಒಳ ಮೀಸಲಾತಿ ಹಂಚಿಕೆಯ ದಟ್ಟತೆಗಳು ಅತಿಯಾಗಿ ರಾಜ್ಯಗಳ ಹಿಂದುಳಿದ ವರ್ಗಗಳಲ್ಲಿದೆ. ಸಾಮಾನ್ಯವಾಗಿ ಚಲನಾತ್ಮಕ ಸಾಮಾಜಿಕ ಒಳಗೊಳ್ಳುವಿಕೆ ಸೂತ್ರಗಳನ್ನು ವ್ಯಾಪಕವಾಗಿ ಬಳಸಿಕೊಂಡು ಸಮುದಾಯಗಳ ನಡುವೆ ಶೇಕಡಾವಾರು ಮೀಸಲಾತಿ ಅನುಪಾತಗಳನ್ನು ಹಂಚಲಾಗಿದೆ. ಇಂತಹ ಸಾಮಾಜಿಕ ನೀತಿಯನ್ನು ರಘೋತ್ತಮ ಹೊ.ಬ. ಒಳ ಮೀಸಲಾತಿ ಅಥವಾ ಸಮತೂಕದ ಮೀಸಲಾತಿಯೆನ್ನುವರೋ ತಿಳಿಯದು. ಸಂವಿಧಾನದ ಪ್ರದತ್ತ ಕಾಲಂ 15(4) ಮತ್ತು 16(4) ಅಡಿ ಮೀಸಲಾತಿ ನೀಡುತ್ತಾ ಬರಲಾಗಿದೆ.

ಡಾ. ನಾಗನಗೌಡರಿಂದ ನ್ಯಾ. ವೆಂಕಟಸ್ವಾಮಿ ಆಯೋಗಗಳ ತನಕವೂ ಹಿಂದುಳಿದ ಸಮುದಾಯಗಳು, ಹಿಂದುಳಿದ ಜಾತಿಗಳು, ಹಿಂದುಳಿದ ಪಂಗಡಗಳು ಮತ್ತು ವಿಶೇಷ ಗುಂಪುಗಳೆಂದು ವರ್ಗೀಕರಿಸಲಾಗಿತ್ತು ಹಾಗೂ ಅವುಗಳಲ್ಲಿ ಸಾಮ್ಯತೆಯಿತ್ತು. ಆದರೆ ನ್ಯಾ. ಚಿನ್ನಪ್ಪ ರೆಡ್ಡಿ ಆಯೋಗ ಅದರ ಗುಂಪುಗಳ ರಚನೆಯ ಸ್ಥಾಯಿಸ್ವರೂಪವನ್ನು ಬದಲಾಯಿಸಿತ್ತು. ಅದರ ಆಧಾರಿತ ವರ್ಗೀಕರಣದಲ್ಲಿ ಪ್ರವರ್ಗ-1ರಲ್ಲಿ ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಜಾತಿ/ಬುಡಕಟ್ಟು/ಅಧಿಸೂಚಿತವಲ್ಲದ ಪಂಗಡಗಳು/ಅಪರಾಧೀಕರಣ ಬುಡಕಟ್ಟುಗಳೆಲ್ಲವೂ ಕ್ರೋಡೀಕರಣವಾದವು. ಪ್ರವರ್ಗ-2(ಎ)ರಲ್ಲಿ ಸಂಪ್ರದಾಯಿಕ ಕಸುಬುದಾರರ ಸಮುದಾಯಗಳು ಮತ್ತವರ ಭೂರಹಿತ ಬಡವರು, ಸಣ್ಣ ಹಿಡುವಳಿದಾರರು ಒಂದು ಗವಾಕ್ಷಿಯಡಿ ಸೇರಿದರು. ಸಾಂಪ್ರದಾಯಿಕ ಭೂಹಿಡುವಳಿದಾರರು ಮತ್ತು ಇತರ ಉಳುಮೆಗಾರರು ಪ್ರವರ್ಗ-3 (ಎ)ರಲ್ಲಿ ಸ್ಥಾನಪಡೆದರು. ಪ್ರವರ್ಗ-3 (ಬಿ)ರಲ್ಲಿ ವ್ಯಾಪಾರ ಮತ್ತು ವ್ಯವಸಾಯ ಆಧಾರಿತ ಲಿಂಗಾಯತ ಇತ್ಯಾದಿ ಸಮುದಾಯಗಳು ಕ್ರೋಡೀಕರಣವಾದವು. ಈ ನಮೂನೆಯಲ್ಲಿ ದೇಶಾದ್ಯಂತ ರಾಜ್ಯಗಳ ಹಿಂದುಳಿದ ವರ್ಗಗಳ ಪಟ್ಟಿ ಚಾಲ್ತಿಯಲ್ಲಿವೆ. ಆದುದರಿಂದ, ಒಳ ಮೀಸಲಾತಿ ಪರಿಕಲ್ಪನೆ ಹಿಂದಿನಿಂದಲೂ ಚಾಲ್ತಿಯಲ್ಲಿರುವ ಮೀಸಲಾತಿಯ ತಾರತಮ್ಯದ ಹಂಚಿಕೆಯ ತಾತ್ವಿಕತೆಯಾಗಿದೆ.

ಸಮತೂಕದ ಒಳ ಮೀಸಲಾತಿ ಜಾರಿಯೆಂದು ಲೇಖಕರು ಪ್ರಸ್ತಾಪಿಸಿದ್ದಾರೆ. ಸಮತೂಕವೆನ್ನುವ ವ್ಯಾಖ್ಯಾನಗಳು ಮೀಸಲಾತಿಗೆ ಅನ್ವಯವಾಗುವುದಿಲ್ಲ. ಸಮುದಾಯದಿಂದ ಸಮುದಾಯಗಳಿಗೆ ನೀಡುವ ಚಿಕಿತ್ಸೆ, ಅವಕಾಶಗಳ ವಿಸ್ತರಣೆ ಭಿನ್ನವಾಗಿರುತ್ತವೆ. ಸಮತೂಕ ಹಂಚಿಕೆ ಮೂಲಕ ತೀವ್ರವಾಗಿ ಬಳಲಿದವನು ಮತ್ತು ಸಂತೃಪ್ತನಾದವನನ್ನು ಒಂದೇ ಅಳತೆಗೋಲಿನಡಿ ಸಮೀಕರಿಸುವುದು ಅರ್ಥಹೀನವಾದ ಕಲ್ಪನೆ. ಆದುದರಿಂದ, ಸುಪ್ರೀಂ ಕೋರ್ಟ್‌ನ ತೀರ್ಪು ಸಮತೂಕದ ಕಲ್ಪನೆಯನ್ನು ಬೆಂಬಲಿಸಿಲ್ಲ. ಅದು ಸಮುದಾಯಗಳ ಅಂತರ ಹಿಂದುಳಿದಿರುವಿಕೆಯನ್ನು ಪ್ರಧಾನ ಅಂಶವನ್ನಾಗಿಸಿ ತೀರ್ಪು ನೀಡಿದೆ. ಬಹುಶಃ ಸುದೀರ್ಘ ಅಭಿವೃದ್ಧಿಯ ಪಥದಲ್ಲಿ ಅದರ ಫಲವನ್ನು ಅನುಭವಿಸದವರನ್ನು ಸಮತೂಕದ ಪರಿಕಲ್ಪನೆಯಿಂದ ಪರಿಗಣಿಸಲಾಗದು. ಬಡವರಲ್ಲೇ ಬಡವರಾದವರನ್ನು ಅಂತ್ಯೋದಯರೆನ್ನುವ ಹಾಗೆಯೇ ಒಳ ಮೀಸಲಾತಿ ನಿರ್ಣಯಾತ್ಮಕ ಅಂಶಗಳಿರಬೇಕು.

ಮುಂದುವರಿದು ರಘೋತ್ತಮ ಬಲಗೈ ಮತ್ತು ಕೊಲಂಭೋ ಸಮುದಾಯಗಳ ಹೊಂದಾಣಿಕೆ ಹೋರಾಟದಿಂದ ಹಿಂದಿನ ಒಳ ಮೀಸಲಾತಿ ಜಾರಿ ಬಗ್ಗೆ ಪ್ರತಿರೋಧವೊಡ್ಡಿರುವುದನ್ನು ಪ್ರಸ್ತಾಪಿಸಿದ್ದಾರೆ. ಈ ವಿದ್ಯಾಮಾನಗಳು 1980ರಿಂದ ವಿಭಿನ್ನ ವೇಷಾವಳಿ ಮೂಲಕ ಸಾದರವಾಗಿದೆ. ಈಗ ಅದರ ಘನೀಕೃತ ಸ್ವರೂಪ ಮಾತ್ರ ಒಳ ಮೀಸಲಾತಿ ವಿರೋಧಿ ಹೋರಾಟಗಳಲ್ಲಿ ವಿಜೃಂಭಿಸಿದೆ ಅಷ್ಟೇ. ಮೈಸೂರು ಭಾಗದಿಂದ ಆರಂಭವಾದ ಒಳ ಮೀಸಲಾತಿ ವಿರೋಧಿ ಹೋರಾಟದ ಒತ್ತಡದಿಂದ ಇಂದು ಅದರ ಸೈದ್ಧಾಂತಿಕ ಸ್ವರೂಪವನ್ನೇ ವಿರೂಪಗೊಳಿಸಿದ್ದು ವಿಸ್ಮಯವೇನಲ್ಲ. ಈ ವಿಸ್ಮಯಗಳಿಗೆಲ್ಲ ಇವರೆಲ್ಲರೂ ಉಲ್ಲೇಖಿಸುವುದು ಇಬ್ಬರು ಮಾದಿಗ ಹೋರಾಟಗಾರರ ಅತಿರೇಕದ ಭಾಷಣಗಳು ಕಾರಣವಂತೆ? ಇಂತಹ ಯಾವುದೇ ಅವಹೇಳನಕಾರಿ ಭಾಷಣಗಳನ್ನು ಮಾದಿಗ ಸಮುದಾಯ ಅಕ್ಷರಶಃ ಸಾರ್ವತ್ರಿಕವಾಗಿ ಮಾನ್ಯಮಾಡಿಲ್ಲ. ಬಲಗೈ ಮತ್ತು ಕೊಲಂಭೋ ನಡುವೆ ಜಾತ್ಯತೀತ ಸೋಗಿನಲ್ಲಿ ತುಂಬಿರುವವರು ಮಾದಿಗರಿಬ್ಬರ ಭಾಷಣಕಾರರನ್ನು ಮೀರಿಸುವವರಿದ್ದಾರೆ. ಅವಹೇಳನಕಾರಿ ಭಾಷಣವನ್ನೇ ಕುಂಟು ನೆಪವೊಡ್ಡಿ ಶೇ. 17 ಮೀಸಲಾತಿ ಜಾರಿಯನ್ನು ವಿರೋಧಿಸಿದ್ದು ಸರಿಕಾಣಲಿಲ್ಲ. ಜೊತೆಗೆ ಶೇ.15 ಮೀಸಲಾತಿ ಹಂಚಿಕೆ ಸಮತೂಕದ ರಾಜಕೀಯ ತೀರ್ಮಾನ ಸುಪ್ರೀಂ ಕೋರ್ಟ್ ವಿಧಿಸಿರುವ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂಬ ಕೂಗು ಸಹ ಸಾಮಾನ್ಯವಾಗಿದೆ.

1973ರಿಂದಲೂ ಈ ರಾಜ್ಯದಲ್ಲಿ ಮೀಸಲಾತಿ ಬಗೆಗಿನ ಆಡಳಿತಾತ್ಮಕ ತೀರ್ಮಾನಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮೂಲಕ ಜಾರಿಯಾಗುತ್ತಾ ಬಂದಿವೆ. ಈ ಇಲಾಖೆಯು ಇನ್ನುಳಿದ ಇಲಾಖೆಗಳ ಆತ್ಮದಂತೆ ಕಾರ್ಯನಿರ್ವಹಿಸುತ್ತಾ ಬಂದಿತ್ತು. ಆದರೆ, ಒಳ ಮೀಸಲಾತಿಯ ಸಂಚಿನ ಗುಮ್ಮ ಅದರ ಎಲ್ಲಾ ಅಧಿಕಾರವನ್ನು ಸಮಾಜ ಕಲ್ಯಾಣ ಇಲಾಖೆ ಚಲಾಯಿಸುವಂತೆ ಮಾಡಿರುವುದು ಸಹ ಅನೇಕ ಸಂಶಯಗಳಿಗೆ ಎಡೆಮಾಡಿದೆ. ರಾಜ್ಯಾಡಳಿತವಿಂದು ಮುಖ್ಯಮಂತ್ರಿಗಳ ಆಡಳಿತಾತ್ಮಕ ಪರಮಾಧಿಕಾರವನ್ನು ಈ ಇಲಾಖೆಯೇ ಚಲಾಯಿಸುವ ದುಃಸ್ಥಿತಿಗೆ ಬಂದಂತಾಗಿದೆ. ಶ್ರೇಣಿ ನಿಯಂತ್ರಣ ಆಡಳಿತದ (Scalar Administration) ನಿಯಮಗಳು ಇಲ್ಲಿ ನುಚ್ಚುನೂರಾಗಿವೆ. ಇದಕ್ಕೆ ಪೂರಕವಾಗಿ ದಿ: 08-05-2026 ಮತ್ತು 13-05-2026 ಆದೇಶಗಳೇ ಸಾಕ್ಷಿಯಂತಿವೆ.

ಈ ಆದೇಶಗಳಲ್ಲಿ ಒಂದು ಪ್ರಧಾನ ಅಂಶವಿದೆ: ಅಧಿಸೂಚನೆ ಆಧಾರದ ಮೇಲೆ ಒಳ ಮೀಸಲಾತಿ ನಿರ್ಧರಮಾಡುವುದೆಂಬ ಪ್ರಸ್ತಾವನೆಯಿದೆ. ಈ ವಿಚಾರದಲ್ಲಿ ಕೆಲವು ಆಡಳಿತಾತ್ಮಕ ವಿಚಾರಗಳು ಬರುತ್ತವೆ. ಇಲಾಖೆಯೊಂದು ಮೀಸಲಾತಿ ಅನುಸಾರ ಅಖೈರು ಮಾಡಿದ ಒಟ್ಟು ಹುದ್ದೆಗಳಿಗೆ ನಿಗದಿಪಡಿಸಿದ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಅಧಿಸೂಚನೆಗೊಳ್ಳುತ್ತವೆ. ಈ ಜಿಜ್ಞಾಸೆಯು ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬ ತರ್ಕದಂತಿದೆ. ಅಧಿಸೂಚನೆ ಕೇವಲ ಸಾರ್ವಜನಿಕ ಪ್ರಕಟಣೆಯೇ ಹೊರತು ಅದು ಮೀಸಲಾತಿ ನಿರ್ಧಾರ ಮಾಡುವ ಆಡಳಿತಾತ್ಮಕ ಮಾನದಂಡವಾಗುವುದಿಲ್ಲ. ಸಾರ್ವಜನಿಕ ಅಧಿಸೂಚನೆ (ಮಾಹಿತಿ) ಮೀಸಲಾತಿ ನಿರ್ಧಾರಕ ಅಂಶವಲ್ಲ. ಮೀಸಲಾತಿ ಬಿಂದು ಕ್ರಮಾಂಕದಲ್ಲಿ ಸೃಜಿಸುವ ಪ್ರಮಾಣನುಸಾರ ಸಂವಿಧಾನದ ಅನುಚ್ಛೇದ 15(4) ಅಥವಾ 16(4) ಅಡಿ ನಿರ್ಧಾರವಾಗುತ್ತವೆ ಹೊರತು ಅಧಿಸೂಚನೆ ಮೂಲಕವಲ್ಲ. ಹಾಗೆಯೇ ಸಂವಿಧಾನದ ಯಾವುದೇ ಅನುಚ್ಛೇದಗಳಲ್ಲಿ ಮೀಸಲಾತಿ ಮೊತ್ತವನ್ನು ಬಿಡಿಸಿ ಹೇಳಿಲ್ಲ. ಅವುಗಳಲ್ಲಿ ಪ್ರಜಾಸಂಖ್ಯೆಗೆ ಅನುಸಾರವಾಗಿ ನಿಗದಿಮಾಡುವುದೆಂದು ಹೇಳಿದೆ. ಅದರ ಆಧಾರದಡಿ ಕಾಲದಿಂದ ಕಾಲಕ್ಕೆ ಆಡಳಿತಾತ್ಮಕವಾಗಿ ಹೇರಿಕೆಯಾದ ಮೀಸಲಾತಿ ಸಮುದಾಯಗಳ ಪ್ರಜಾಸಂಖ್ಯೆಗೆ ಅನುಸಾರವಾಗಿ ಮೀಸಲಾತಿ ಅನುಪಾತ ಬದಲಾಗಿದೆ.

ಸುಪ್ರೀಂ ಕೋರ್ಟ್ ಸಬರ್ವಾಲ್ ಪ್ರಕರಣ ತೀರ್ಪಿನಲ್ಲಿ ಮೀಸಲಾತಿ ಗರಿಷ್ಠ 200 ಬಿಂದುಗಳ ಸೃಜನೆ ಮತ್ತು ಅವುಗಳ ಅನುಪಾಲನೆ ಬಗ್ಗೆ ಉಲ್ಲೇಖಿಸಿದೆ. ವಿರಳ ಸ್ವರೂಪದ ಸಮಾನ ವೇತನ ಶ್ರೇಣಿ ಹುದ್ದೆಗಳ ಕ್ರೋಡೀಕರಣ ಬಗ್ಗೆ ಕೇಂದ್ರ ಸರಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ವಿಧಿಸಿರುವ ಮಾರ್ಗಸೂಚಿಗಳನ್ನು ಒಳ ಮೀಸಲಾತಿಯಲ್ಲಿ ಅನುಸರಿಸಿದ್ದರೆ ಈ ಬಗೆಗಿನ ಸಮಸ್ಯೆ ಬಗೆಹರಿಯುತ್ತಿತ್ತು. ಇದನ್ನು ಮೀರಿ 3 ಹುದ್ದೆಗಳಿಗಿಂತ ಕಡಿಮೆಯಿದ್ದರೆ ಅವುಗಳನ್ನು ‘ಸಾಮಾನ್ಯ ವರ್ಗ’ ಎಂಬ ಮಾಯಾಮೃಗದ ಚಿಂತನೆಯು ಒಳ ಮೀಸಲಾತಿ ನೀತಿಯನ್ನು ಬಗ್ಗುಬಡಿದಿದೆ. ಈಗಾಗಲೇ ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಒಳ ಮೀಸಲಾತಿಯಲ್ಲಿ ಶೇ. 32ರಷ್ಟು ಮೀಸಲಾತಿಗೆ ಪ್ರತ್ಯೇಕವಾಗಿ ‘ಸಾಮಾನ್ಯ ವರ್ಗ’ ಎಂಬ ಪರಿಕಲ್ಪನೆಯಿಲ್ಲ. ಆದರೆ ವರ್ಗೀಕೃತ ಪ್ರತಿ ಪ್ರವರ್ಗದಲ್ಲಿ ಸೃಜಿಸುವ ಒಟ್ಟು ಹುದ್ದೆಗಳಲ್ಲಿ ಪ್ರತ್ಯೇಕವಾಗಿ ಸಮತಳ ಮೀಸಲಾತಿ ಬಿಂದುಗಳಲ್ಲಿ ಸಾಮಾನ್ಯ ಮತ್ತು ಮಹಿಳೆ, ಅಂಗವಿಕಲ, ಗ್ರಾಮೀಣ, ಕನ್ನಡ ಮಾಧ್ಯಮ, ಯೋಜನೆ ನಿರಾಶ್ರಿತರು ಇತ್ಯಾದಿ ಗುರುತಿಸಲಾಗುತ್ತದೆ. ಇದೇ ಮಾದರಿಯಲ್ಲಿ ಶೇ. 15 ಮತ್ತು 3 ಮೀಸಲಾತಿಯಲ್ಲಿಯೂ ಪಾಲನೆ ಆಗುತ್ತಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕರ್ನಾಟಕ ರಾಜ್ಯ ಸರಕಾರ ಇಲ್ಲಿಯತನಕ ಅನುಸರಿಸಿರುವ ಆಡಳಿತಾತ್ಮಕ ನೀತಿಯನ್ನು ಗಾಳಿಗೆ ತೂರಿದೆ. ಒಳ ಮೀಸಲಾತಿಯಲ್ಲಿ ಸಾಮಾನ್ಯ ವರ್ಗವೆಂಬ ಬಿಂಕದ ವರ್ಗೀಕರಣವು ಸುಪ್ರೀಂ ಕೋರ್ಟ್ ವಿಧಿಸಿರುವ ಮಾನದಂಡವಾಗಿಲ್ಲ. ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ನಿಯಮಗಳಿಲ್ಲ. ಆದರೆ, ಕರ್ನಾಟಕ ರಾಜ್ಯ ಮಾತ್ರ ‘ರಾಜಕೀಯ’ ತೀರ್ಮಾನದಡಿ ಸಲ್ಲದ ಅವಾಸ್ತವಿಕ ವಿಚಾರಗಳನ್ನು ತೀರ್ಮಾನಿಸಿದೆ. ಇದು ನೇರವಾಗಿ ಒಳ ಮೀಸಲಾತಿ ಕೋರುವವರನ್ನು ಮೂಲೆಗುಂಪು ಮಾಡುವ ಹುನ್ನಾರಗಳು ಎಂಬ ಆರೋಪಗಳಿವೆ.

ಸರಕಾರದ ದಿ: 13-05-2026ರ ಆದೇಶದಲ್ಲಿರುವ ಮೀಸಲಾತಿ ಬಿಂದುಗಳ ಬಗ್ಗೆ ಈ ಆದೇಶ ಪೂರ್ವದಲ್ಲಿ ರಘೋತ್ತಮ ಅವರ ಅಭಿಮತಗಳಂತೆ ಕಾಣುತ್ತಿವೆ. ಅನೇಕ ಸಂದರ್ಭಗಳಲ್ಲಿ ಮುಖ್ಯಮಂತ್ರಿಗಳು ಹೋರಾಟಗಾರರಿಗೆ ನೀಡಿದ ಆಶ್ವಾಸನೆಗಳೆಲ್ಲವೂ ಮಂಗರಮಾಯವಾಗಿವೆ. ಮೀಸಲಾತಿ ಬಿಂದುಗಳ ಅದಲು-ಬದಲು ವಿಧಾನವನ್ನು ಸಮಾಜ ಕಲ್ಯಾಣ ಇಲಾಖೆ ಯಾವುದೇ ಸಾರ್ವಜನಿಕ ಚರ್ಚೆಗಳಿಲ್ಲದೆ ನಿರ್ಣಯಿಸಿದೆ. ಹಾಗಾದರೆ, ಈ ವಿಧಾನವನ್ನು ಶೇ. 32 ಮೀಸಲಾತಿ ಬಿಂದುಗಳಿಗೆ ಅಳವಡಿಸದೆ ಕೇವಲ ಪರಿಶಿಷ್ಟ ಜಾತಿಗಳಿಗೆ ಮಾತ್ರ ಅನ್ವಯಿಸಿರುವುದು ಪಾರ್ಶ್ವ ನೀತಿಯಂತಿದೆ. 400 ಬಿಂದುಗಳಲ್ಲಿ 93 ತನಕ ಅಂದರೆ 15 ಹುದ್ದೆಗಳಿಗೆ ಯಾವುದೇ ಅಂತರ ಬದಲಾವಣೆಗಳನ್ನು ಸೂಚಿಸಿಲ್ಲ. ಆದರೆ, ಬಿಂದು 101ರಿಂದ 393 ತನಕ ಆವರ್ತನಾ ವಿಧಾನ ಸಂಪೂರ್ಣ ಬದಲಾಗಿದೆ. ಈ ನಿಲುವಿಗೆ ಯಾವುದೇ ವೈಜ್ಞಾನಿಕ ಕಾರಣಗಳನ್ನು ದಿ: 13-05-2026 ಆದೇಶದಲ್ಲಿ ವಿವರಿಸಿಲ್ಲ. ಸರಕಾರ 15 ಹುದ್ದೆಗಳಿಗೆ ಒಂದು ನೀತಿ, ತದನಂತರ ಸೃಜಿಸುವ ಹುದ್ದೆಗಳಿಗೆ ಮತ್ತೊಂದು ನಿಯಮಗಳೆನ್ನುವುದು ಹಾಸ್ಯಾಸ್ಪದವಾಗಿದೆ. ಇದರೊಳಗೆ ಸಂಶಯಗಳು ತುಂಬಿರುವುದು ಎದ್ದು ಕಾಣುತ್ತಿವೆ. ಬಹುಶಃ ಸಮತೂಕದ ಒಳ ಮೀಸಲಾತಿ ಪರಿಕಲ್ಚನೆ ಇದೇ ಇರಬೇಕೆನಿಸುತ್ತದೆ ಅಥವಾ ಒಳ ಮೀಸಲಾತಿ ಪರಿಕಲ್ಪನೆ ಬೀಸಾಕು ಎಂಬಂತಿದೆ ರಾಜ್ಯ ಸರಕಾರದ ಆಡಳಿತಾತ್ಮಕ ನಿಲುವುಗಳು.

ಒಳ ಮೀಸಲಾತಿ ಪರಿಕಲ್ಪನೆ ಬಲಿಷ್ಠ ಸಮುದಾಯಗಳ ಮತ್ತು ಒತ್ತಡ ಗುಂಪುಗಳಿಗೆ ತಕ್ಕಂತೆ ನಿರ್ಧಾರವಾಗುವುದಾದರೆ, ಪರಿಪೂರ್ಣ ಹಿಂದುಳಿದಿರುವಿಕೆ (Absolute Backwardness) ಮತ್ತು ಸಾಪೇಕ್ಷ ಹಿಂದುಳಿದಿರುವಿಕೆ (Relative Backwardness) ಹಾಗೂ ಅಂಚಿನ/ಸೀಮಂತ ಹಿಂದುಳಿದಿರುವಿಕೆಯ (Marginal Backwardness) ವ್ಯಾಖ್ಯಾನಗಳು ಕರ್ನಾಟಕ ರಾಜ್ಯದ ಮಟ್ಟಿಗೆ ಬುಡಮೇಲಾದಂತಿದೆ. ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಮುಂಜಾನೆ-ಸಂಜೆಗೊಂದು ಆದೇಶಗಳನ್ನು ಬಿಡುಗಡೆ ಮಾಡದೆ ಒಂದೇ ಆದೇಶದಲ್ಲಿ ಸಮಗ್ರವಾದ ಆಡಳಿತಾತ್ಮಕ ವಿಧಾನಗಳನ್ನು ಅಳವಡಿಸಿರುವುದು ಶ್ಲಾಘನೀಯವಾಗಿವೆ. ಈ ಮಾದರಿಗಳನ್ನು ಅನುಸರಿಸಬೇಕಿಲ್ಲ, ಆದರೆ ಸರಕಾರದಿಂದ ಹೊರಡುವ ಆಡಳಿತಾತ್ಮಕ ನಿರ್ಧಾರಗಳು ಅನುಮಾನ, ಸಂಶಯ ಮತ್ತು ಅಪಾರ್ಥಗಳಿಗೆ ಅವಕಾಶವನ್ನು ನೀಡಿದರೆ ಒಳ ಮೀಸಲಾತಿ ಸಮಸ್ಯೆ ಎಲ್ಲಿಲ್ಲದ ಜಟಿಲತೆಯನ್ನು ಮೈಗೂಡಿಸಿಕೊಳ್ಳುತ್ತದೆ. ಒಳ ಮೀಸಲಾತಿ ಅತ್ಯಂತ ಹಳೆಯ ಸಮಾನ ಹಂಚಿಕೆ ವಿಧಾನ ಮತ್ತು ನೀತಿಯುತ ಅಳವಡಿಕೆಯಾಗಿದೆ.

Tags

New crisesinternal reservation
share
ದಾಸನೂರು ಕೂಸಣ್ಣ
ದಾಸನೂರು ಕೂಸಣ್ಣ
Next Story
X