Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನಮ್ಮ ನಡುವಣ ಸಾಮಾಜಿಕ ಕಹಿಯ ಹೂರಣ...

ನಮ್ಮ ನಡುವಣ ಸಾಮಾಜಿಕ ಕಹಿಯ ಹೂರಣ ‘ವರ್ಣಪಲ್ಲಟ’

ಪ್ರೊ.ಶಿವರಾಮಯ್ಯಬೆಂಗಳೂರುಪ್ರೊ.ಶಿವರಾಮಯ್ಯಬೆಂಗಳೂರು7 Dec 2025 1:30 PM IST
share
ನಮ್ಮ ನಡುವಣ ಸಾಮಾಜಿಕ ಕಹಿಯ ಹೂರಣ ‘ವರ್ಣಪಲ್ಲಟ’

ಕೆ.ವೈ.ಎನ್. ಅವರ ನಾಟಕ ‘ವರ್ಣಪಲ್ಲಟ’ವು ವಿನೋದ ವಿಷಾದ ಪ್ರಹಸನ. ಈ ಕತೆಯ ಈ ಪಾತ್ರಗಳು ಭಾರತದ ಯಾವ ಊರಿನಲ್ಲೂ ಯಾವ ಕಾಲದಲ್ಲೂ ಕಂಡುಬರಬಹುದು. ಭಾರತೀಯ ಸಮಾಜದಲ್ಲಿ ನೆಲೆಗೊಂಡಿರುವ ಎಲ್ಲ ಬಗೆಯ ಅಸಮಾನತೆಗಳ ಬೇರು ಜಾತಿ ಪದ್ಧತಿಯಾಗಿದೆ. ಮನುಷ್ಯ ಸಹಜವಾದ ಪ್ರೀತಿ ಮತ್ತು ನಡವಳಿಕೆಗಳು ಕೂಡ ಅಪರಾಧವಾಗಿಸುವ ವ್ಯವಸ್ಥೆಯ ಕುರಿತು ಯೋಚಿಸುವಂತೆ ಮಾಡುವ ಉದ್ದೇಶದಿಂದ ಈ ನಾಟಕವನ್ನು ರಚಿಸಲಾಗಿದೆ. ಶಿಕ್ಷಣ-ರಾಜಕಾರಣ-ನ್ಯಾಯದಾನ-ಸಾಮಾಜಿಕ ಜೀವನಗಳು ಇಂದು ತಲುಪಿರುವ ಅಸೂಕ್ಷ್ಮತೆಯ ಸ್ವರೂಪವನ್ನು ಅನಾವರಣ ಮಾಡುವ ಪ್ರಯತ್ನವನ್ನು ಈ ರಂಗ ಪ್ರಯೋಗದಲ್ಲಿ ಮಾಡಲಾಗಿದೆ. ಸ್ವಾತಂತ್ರ್ಯ-ಸಮಾನತೆ ಮತ್ತು ಭ್ರಾತೃತ್ವಗಳನ್ನು ಸಾರುತ್ತಿರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕನಸಿನ ಭಾರತದ ಮೂಲೆಮೂಲೆಗಳಿಂದ ಪ್ರತಿನಿತ್ಯ ವರದಿಯಾಗುತ್ತಿರುವ ಜಾತಿ ಆಧಾರಿತ ಹಿಂಸೆ ಮತ್ತು ಅನ್ಯಾಯಗಳಿಗೆ ಕುರುಡು ಕಿವುಡು ಆಗಿರುವ ಪರಿಸ್ಥಿತಿಯನ್ನು ಅರ್ಥೈಸಲು ಹಾಗೂ ಸಂವಿಧಾನದ ಆಧಾರದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಾರ್ವಜನಿಕ ಸಂಸ್ಥೆಗಳೇ ಜಾತಿ ಮತ್ತು ಪ್ರಸರಣ ಕೇಂದ್ರಗಳಾಗಿ ಪರಿವರ್ತನೆಯಾಗಿರುವುದನ್ನು ವಿಡಂಬಿಸುವ ಮೂಲಕ ಪ್ರೇಕ್ಷಕರ ಮನಸ್ಸನ್ನು ಮೊನಚುಗೊಳಿಸುವ ಆಸೆಯಿಂದ ಈ ಪ್ರಯೋಗವನ್ನು ಸಿದ್ಧಪಡಿಸಲಾಗಿದೆ.

ಜಾತಿ, ಮೌಢ್ಯಗಳಿಂದ ತುಂಬಿರುವ ಸಿಡ್ಲುಪಟ್ಟಣ ಎಂಬ ಸಣ್ಣ ಪಟ್ಟಣ ಪ್ರದೇಶದಲ್ಲಿ ಈ ಘಟನೆಗಳು ನಡೆಯುತ್ತವೆ. ತಳ ಸಮುದಾಯದಿಂದ ಬಂದ ಸಹಜ ಪ್ರತಿಭಾವಂತ ಮಾಧವನಂತಹ ಹುಡುಗರು, ಮೇಲ್ಜಾತಿಗೆ ಸೇರಿದ್ದರೂ ಪ್ರೀತಿಗಾಗಿ ಜಾತಿ ಕಂದಕವನ್ನು ದಾಟಲು ಪ್ರಯತ್ನಿಸುವ ಕಾವ್ಯಪ್ರೇಮಿ ರಾಧಾಳಂತಹ ಹುಡುಗಿಯರು, ಶಿಕ್ಷಣದ ಮೂಲಕ ಮಾನವೀಯ ಸಂವೇದನೆಯನ್ನು ಜಾಗೃತಗೊಳಿಸುವ ಹಂಬಲದ ಮೇಷ್ಟ್ರು ಇಂತಹವರ ಚೈತನ್ಯವನ್ನು ಬಲಿಗೊಳ್ಳುವ, ದುರ್ಬಲಗೊಳಿಸುವ ಸ್ವಾರ್ಥ ಪೂರಿತ ಸಮಾಜೋರಾಜಕೀಯ ವ್ಯವಸ್ಥೆಗಳು ಬೀಸುವ ಬಲೆಗಳನ್ನು ಈ ಪ್ರಹಸನ ತೋರಿಸುವ ಗುರಿಯನ್ನು ಹೊಂದಿದೆ. ನಾಟಕ ರಂಜನೆಯಂತೆ ಕಂಡರೂ ನಮ್ಮ ನಡುವಣ ಸಾಮಾಜಿಕ ಕಹಿಯನ್ನು ಹೂರಣವಾಗಿ ಹೊಂದಿದೆ. ‘‘ಹದಿಹರೆಯದ ಅಮಾಯಕ ರಾಧಾ-ಮಾಧವರ ಕಣ್ಮರೆಯು ಪರಾರಿಯೋ? ಮರ್ಯಾದೆ ಹತ್ಯೆಯೋ? ಎಂಬ ಸಂಗತಿ ಸ್ವತಃ ನಾಟಕಕಾರನಿಗಾಗಲಿ, ರಂಗ ನಿರ್ದೇಶಕರಿಗಾಗಲಿ ಗೊತ್ತಿಲ್ಲದಿರುವುದರಿಂದ ಈ ಸತ್ಯವನ್ನು ಬಯಲಿಗೆಳೆಯುವ ಹೊಣೆಯನ್ನು ಪ್ರೇಕ್ಷಕರಿಗೆ ಬಿಟ್ಟಿದ್ದೇವೆ. ಪೊಲೀಸರಿಗೆ, ನ್ಯಾಯಾಧೀಶರಿಗೆ ಹೊಳೆಯದ ಸತ್ಯ ತಮಗೆ ಹೊಳೆದರೆ ದಯಮಾಡಿ ಮೇಷ್ಟ್ರನ್ನು ಸೆರೆಯಿಂದ ಬಿಡಿಸಲು ನೆರವಾಗಿ ಎಂದು ತಮ್ಮಲ್ಲಿ ವಿನಂತಿಸುತ್ತೇವೆ. ‘ಅನಾವರಣ’ ರಂಗ ತಂಡ ತಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿದೆ’’ ಎಂಬುದಾಗಿ ರಂಗತಂಡದ ಕರಪತ್ರ ವಿನಂತಿಸುತ್ತಿದೆ. ನಿಜ. ಆದರೆ ಊರಿಗೆಲ್ಲಾ ಗೊತ್ತಿರುವ ವಿಚಾರವನ್ನು ನಿನ್ನ ಕಿವಿಯಲ್ಲಿ ಹೇಳ್ತಿನಿ ಬಾ ಎಂಬಂತಿದೆ ಈ ವಿನಂತಿ. ಯಾಕೆಂದರೆ ‘ವರ್ಣಪಲ್ಲಟ’ ನಾಟಕದ ತೆರೆ ಇಳಿಯುವ ಮುನ್ನವೇ ಇಂಥದೊಂದು ಘಟನೆ ಜರುಗಿರುವ ಸುದ್ದಿ ಪತ್ರಿಕೆಗಳಲ್ಲಿ ವರದಿಯಾಗಿದೆ:

ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಪ್ರೇಮ ಕಥೆಯೊಂದು ಅತ್ಯಂತ ದುರಂತ ಅಂತ್ಯವನ್ನು ಕಂಡಿದೆ. ಜಾತಿ ವಿವಾದದಿಂದಾಗಿ ತನ್ನ ತಂದೆ ಮತ್ತು ಸೋದರರಿಂದ ಬರ್ಬರವಾಗಿ ಹತ್ಯೆಗೀಡಾದ ಪ್ರಿಯಕರ ಸಕ್ಷಮ್ ತಾಟೆ(25) ಎಂಬಾತನನ್ನು ಅಂತ್ಯ ಸಂಸ್ಕಾರಕ್ಕೆ ಮುನ್ನ ಆತನ ಮೃತದೇಹದೊಂದಿಗೆ ಆಂಚಲ್ ಮಾಮಿದ್ವಾರ್(21) ಎಂಬಾಕೆ ಮದುವೆ ಮಾಡಿಕೊಂಡಿದ್ದಾಳೆ. ‘‘ಸಕ್ಷಮ್‌ನ ಸಾವಿನಲ್ಲಿಯೂ ನಮ್ಮ ಪ್ರೀತಿ ಗೆದ್ದಿದೆ ಮತ್ತು ನನ್ನ ತಂದೆ ಹಾಗೂ ಸೋದರರು ಸೋತಿದ್ದಾರೆ’’ ಎಂದು ಆಂಚಲ್ ಹೇಳಿದ್ದಾಳೆ. ಆಕೆ ತನ್ನ ಜೀವನವಿಡೀ ಕುಟುಂಬದ ಸೊಸೆಯಾಗಿ ಸಕ್ಷಮ್‌ನ ಮನೆಯಲ್ಲಿ ವಾಸವಾಗಿರಲು ನಿರ್ಧರಿಸಿದ್ದಾಳೆ. ವಿವಾಹದ ಈ ಪವಿತ್ರ ಸಮಾರಂಭವು ತಮ್ಮ ಪ್ರೇಮವನ್ನು ಅಮರಗೊಳಿಸುತ್ತದೆ ಎಂದು ಆಂಚಲ್ ಘೋಷಿಸಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಹೃದಯವಿದ್ರಾವಕ ಘಟನೆಯನ್ನು ಸೆರೆ ಹಿಡಿದಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಸುದ್ದಿಗಾರರೊಂದಿಗೆ ಮಾತನಾಡಿದ ಆಂಚಲ್, ಈ ಕ್ರೂರ ಹತ್ಯೆಗಾಗಿ ತನ್ನ ತಂದೆ ಮತ್ತು ಸೋದರರನ್ನು ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದಾಳೆ.

ಷೇಕ್ಸ್‌ಪಿಯರ್‌ನ ವಿಶ್ವವಿಖ್ಯಾತ ನಾಟಕ ರೋಮಿಯೋ-ಜೂಲಿಯಟ್ ಮೊದಲುಗೊಂಡು (ಅದಕ್ಕೂ ಪೂರ್ವದಿಂದಲೂ ಇರಬಹುದು) ಕೆ.ವೈ.ಎನ್.ರವರ ವರ್ಣಪಲ್ಲಟದವರೆಗೆ, ಇಂಥ ದುರಂತ ಪ್ರೇಮಕತೆಗಳು ಸಂಭವಿಸುತ್ತಲೇ ಇವೆ. ಇವುಗಳಿಗೆ ಮೊದಲಾಗಲೀ ಕೊನೆಯಾಗಲೀ ಇಲ್ಲ. ಈ ದುರಂತಗಳಿಗೆ ಕಾರಣ ಪೋಷಕರು, ಪೊಲೀಸರು, ನ್ಯಾಯಾಧೀಶರು, ರಾಜಕಾರಣಿಗಳು ಹಾಗೂ ನಾವು-ನೀವು ಒಳಗೊಂಡು ಅಂದಂದಿನ ಸಮಾಜವೇ ಕಾರಣ. ಈ ಎಲ್ಲರ ಹಿಪೋಕ್ರಸಿಗೆ ತುತ್ತಾಗಿ ಹದಿಹರೆಯದ ಅಮಾಯಕ ಹುಡುಗ ಹುಡುಗಿಯರು ನಿತ್ಯ ಹತ್ಯೆಗೆ ಒಳಗಾಗುತ್ತಲೇ ಇದ್ದಾರೆ. ಕಾವ್ಯ, ಕಥೆ, ಕಾದಂಬರಿ ರಚಿಸುವ ಸಾಹಿತಿಗಳಿಗೆ ವಸ್ತುವಾಗುತ್ತಾ!

ಇದನ್ನು ತಪ್ಪಿಸಲು ಇನ್ನೆಷ್ಟು ನೂರು ವರ್ಷಗಳು ಬೇಕೋ? 21ನೇ ಶತಮಾದಲ್ಲೂ ರಾಷ್ಟ್ರವ್ಯಾಪಿ, ಅಮೆರಿಕವೂ ಸೇರಿದಂತೆ ವಿಶ್ವವ್ಯಾಪಿ ಜಾತಿ ತಾರತಮ್ಯ, ದಲಿತರ ಮೇಲಿನ ದೌರ್ಜನ್ಯ ಅಸ್ತಿತ್ವದಲ್ಲಿರುವುದು ಸಮೀಕ್ಷೆಗಳಿಂದ ಬೆಳಕಿಗೆ ಬಂದಿದೆ. ಭಾರತದ ಮಟ್ಟಿಗೆ ಹೇಳುವುದಾದರೆ ನಮ್ಮ ಸಂವಿಧಾನದ ಪ್ರಕಾರ ಜಾತಿವಿನಾಶ ಆಗಲೇಬೇಕು. ಆಗ ಮಾತ್ರ ಇಂಥ ಪ್ರಕರಣಗಳ ಪ್ರಮಾಣ ಕೊಂಚ ತಗ್ಗಬಹುದು. ಜೊತೆಗೆ ವರ್ಗ ಸಮಾನತೆಯೂ ಸೇರಿದರೆ ಉತ್ತಮ ಸಮಾಜ ಉದಯ ಆದೀತು. ಈ ನಿಟ್ಟಿನಲ್ಲಿ ಡಾ. ಅಂಬೇಡ್ಕರ್ ವಿರಚಿತ ಸಂವಿಧಾನವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು.

share
ಪ್ರೊ.ಶಿವರಾಮಯ್ಯಬೆಂಗಳೂರು
ಪ್ರೊ.ಶಿವರಾಮಯ್ಯಬೆಂಗಳೂರು
Next Story
X