Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಜಗತ್ತಿನಲ್ಲಿ...

ಜಗತ್ತಿನಲ್ಲಿ ‘ಪ್ರಜಾಪ್ರಭುತ್ವ’ಕೊನೆಗೊಳ್ಳಲಿದೆಯೇ?

ಡಾ. ಅರುಣ್ ಜೋಳದಕೂಡ್ಲಿಗಿಡಾ. ಅರುಣ್ ಜೋಳದಕೂಡ್ಲಿಗಿ9 Jun 2026 10:43 AM IST
share
ಜಗತ್ತಿನಲ್ಲಿ ‘ಪ್ರಜಾಪ್ರಭುತ್ವ’ಕೊನೆಗೊಳ್ಳಲಿದೆಯೇ?

ಅಕ್ಷರಶಃ ಪ್ರಜಾಪ್ರಭುತ್ವ ಇಂದು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಬಹು ಅಂಗಾಂಗಗಳ ವೈಫಲ್ಯದಿಂದಾಗಿ ಗಂಭೀರ ಶಸ್ತ್ರಚಿಕಿತ್ಸೆಗಾಗಿ ಕಾದಿರುವಂತಿದೆ. ಪ್ರಸ್ತುತ ಇಂದಿನ ಪ್ರಜಾಪ್ರಭುತ್ವದ ಸ್ಥಿತಿಯು ಜಗತ್ತಿನಲ್ಲಿ ಅತಿ ಹೆಚ್ಚು ಸರ್ವಾಧಿಕಾರಿ ದೇಶಗಳಿದ್ದ 1978ರ ಕಾಲಘಟ್ಟಕ್ಕೆ ಮರಳಿದೆ. ಹೀಗಾಗಿ ಪ್ರಜಾಪ್ರಭುತ್ವದ ಸ್ಥಿತಿ ಅರ್ಧ ಶತಮಾನದಷ್ಟು ಹಿಂದಕ್ಕೆ ಸರಿದಿದೆ. ಅಂದರೆ ಜಗತ್ತಿನಲ್ಲಿ ಸರ್ವಾಧಿಕಾರ ಬಲಗೊಳ್ಳುತ್ತಿರುವುದು ಜಾಗತಿಕ ಸಮುದಾಯದ ಆತಂಕಕಾರಿ ಸಂಗತಿಯಾಗಿದೆ. ಸರ್ವಾಧಿಕಾರ ಎನ್ನುವ ಗುರುತ್ವಾಕರ್ಷಣೆಯೆಡೆಗೆ ಜಗತ್ತಿನ ದೇಶಗಳು ಹೆಚ್ಚು ಹೆಚ್ಚು ಆಕರ್ಷಿತವಾಗುತ್ತಿವೆ.

ಈಚೆಗೆ ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಬೆಂಬಲಿತ ಯುವಜನರು ದೊಡ್ಡ ದನಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ಧನಿ ಎತ್ತಿದರು. ಕೇಂದ್ರ ಸರಕಾರದ ಶಿಕ್ಷಣಮಂತ್ರಿ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕೆಂದು ಗಡುವು ನೀಡಿದ್ದಾರೆ. ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮಹಾರಾಷ್ಟ್ರದ ಸಂಭಾಜಿನಗರ್ ಜಿಲ್ಲೆಯ ತಮ್ಮ ಹುಟ್ಟೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ್ದಾರೆ. ಜಂತರ್‌ಮಂತರ್‌ನಲ್ಲಿ ಕನಿಷ್ಠ ಏಳು ಸಾವಿರ ವಿದ್ಯಾರ್ಥಿಗಳು ಸ್ವಪ್ರೇರಣೆಯಿಂದ ಸೇರಿದ್ದರು. ‘‘ಈ ಸರಕಾರ ಏಕೆ ಬೇಕು? ಯುವಜನರಿಗೆ ಉದ್ಯೋಗವಿಲ್ಲ, ಕ್ರಮಬದ್ಧವಾದ ಪರೀಕ್ಷೆಗಳನ್ನು ನಡೆಸಲಿಕ್ಕೆ ಆಗುವುದಿಲ್ಲ, ಹಾಗಾಗಿ ಇನ್ನು ದೇಶದ ಯುವಜನರು ಸರಕಾರಕ್ಕೆ ಹೆದರುವುದಿಲ್ಲ’’ ಎಂದಿದ್ದಾರೆ.

ವಿಶೇಷವೆಂದರೆ ಡಾ.ಬಾಬಾ ಸಾಹೇಬ ಅಂಬೇಡ್ಕರ್ ನಡೆದಾಡಿದ ಮಹಾರಾಷ್ಟ್ರದ ಮಣ್ಣಿನಲ್ಲಿ ದಲಿತ ಯುವಕನೊಬ್ಬ ಇಂತಹ ಹೋರಾಟಕ್ಕೆ ನಾಯಕತ್ವ ವಹಿಸಿರುವುದು, ಝೆನ್-ಜಿ ಯುವಜನರು ಜಾತ್ಯತೀತವಾಗಿ ಈತನ ನಾಯಕತ್ವ ಬೆಂಬಲಿಸಿರುವುದು ಈ ದೇಶದ ಯುವಜನರ ಬಗ್ಗೆ ಹೊಸ ಭರವಸೆ ಮೂಡಿಸಿದೆ. ವಿ-ಡೆಮ್ ಡೆಮಾಕ್ರಸಿ ವರದಿ 2026ರ ಪ್ರಕಾರ ಭಾರತ ಚುನಾಯಿತ ಸರ್ವಾಧಿಕಾರಿ ದೇಶಗಳ ಪಟ್ಟಿಯಲ್ಲಿದೆ. ಇಂತಹ ಸಂದರ್ಭದಲ್ಲಿ ಭಾರತದಲ್ಲಿನ ಯುವಜನರ ಈ ಚಳವಳಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಮೇಲೆತ್ತುವ ಕನಸಿನಂತೆ ಕಾಣುತ್ತಿದೆ. ಇದು ಕೇವಲ ಭಾರತದ ವಿದ್ಯಮಾನ ಮಾತ್ರವಲ್ಲ ಜಗತ್ತಿನಲ್ಲಿ ಪ್ರಜಾಪ್ರಭುತ್ವ ಕೊನೆಗೊಳ್ಳಲಿದೆಯೇ ಎನ್ನುವ ಆತಂಕ ಮನೆಮಾಡಿದೆ. ಈ ಸಂದರ್ಭದಲ್ಲಿ ಭಾರತವನ್ನೂ ಒಳಗೊಂಡಂತೆ ಇಡೀ ಜಗತ್ತಿನ ಪ್ರಜಾಪ್ರಭುತ್ವ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿರುವುದನ್ನು ಸ್ವೀಡನ್‌ನ ವಿ-ಡೆಮ್ ಸಂಸ್ಥೆಯ 2026ರ ಪ್ರಜಾಪ್ರಭುತ್ವದ ವರದಿ ಬಯಲುಗೊಳಿಸುತ್ತಿದೆ.

ಸ್ವೀಡನ್ ದೇಶದ ರಾಜಕೀಯ ವಿಜ್ಞಾನಿ ಸ್ಟ್ಯಾಫನ್ ಐ ಲಿಂಡ್‌ಬರ್ಗ್ ನಿರ್ದೇಶಕರಾಗಿರುವ ವೆರೈಟೀಸ್ ಆಫ್ ಡೆಮಾಕ್ರಸಿ (ವಿ-ಡೆಮ್) ಸಂಸ್ಥೆಯ ಪ್ರಜಾಪ್ರಭುತ್ವ ವರದಿಗಳು ಜಾಗತಿಕವಾಗಿ ವಿಶ್ವಸನೀಯ ಚರ್ಚೆ, ಸಂವಾದಗಳಿಗೆ ಕಾರಣವಾಗಿವೆ. ಜಾಗತಿಕ ವಿಶ್ವವಿದ್ಯಾನಿಲಯಗಳಲ್ಲಿ ವಿದ್ವತ್ಪೂರ್ಣ ಸಂಶೋಧನೆ ಮತ್ತು ಅಧ್ಯಯನಗಳ ಗುಣಮಟ್ಟ ಕುಸಿಯುತ್ತಿರುವ ಹೊತ್ತಿನಲ್ಲಿ ಸ್ವೀಡನ್‌ನನ ಗೊಥೆನ್‌ಬರ್ಗ್ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ಬದ್ಧತೆಯ ಸಂಶೋಧನಾ ತಂಡ ಜಗತ್ತಿನ ಗಮನಸೆಳೆದಿದೆ. ಈ ವರದಿಯಲ್ಲಿ 1789ರಿಂದ 2025ರ ತನಕದ 202 ದೇಶಗಳನ್ನು ಒಳಗೊಂಡಂತೆ ಜಾಗತಿಕವಾಗಿ 4,200ಕ್ಕೂ ಹೆಚ್ಚಿನ ವಿದ್ವಾಂಸರು ಪ್ರಜಾಪ್ರಭುತ್ವದ 600ಕ್ಕೂ ಹೆಚ್ಚಿನ ಗುಣಲಕ್ಷಣಗಳನ್ನು ಅಳೆಯಲಾಗುತ್ತದೆ. ಇಂತಹ ಹಿನ್ನೆಲೆಯ ವಿ-ಡೆಮ್ ಸಂಸ್ಥೆ ಬಿಡುಗಡೆಮಾಡಿದ 2026ರ ಪ್ರಜಾಪ್ರಭುತ್ವದ ವರದಿಯು ಹಲವು ಕಾರಣಗಳಿಗೆ ಮುಖ್ಯವಾಗಿದೆ. 52 ಪುಟದ ಈ ವರದಿಯು ಜಗತ್ತಿನ ಪ್ರಜಾಪ್ರಭುತ್ವದ ಬಿಕ್ಕಟ್ಟನ್ನು ಎಳೆಎಳೆಯಾಗಿ ತೆರೆದಿಟ್ಟಿದೆ. ‘ಪ್ರಜಾಪ್ರಭುತ್ವ ಯುಗ ಕೊನೆಗೊಳ್ಳುತ್ತಿದೆಯೇ?’ ಎನ್ನುವ ಪ್ರಶ್ನೆಯನ್ನು ಹಾಕಿಕೊಂಡು ಚಾರಿತ್ರಿಕ ಹೋರಾಟಗಳಿಂದ ನೇಯ್ದ ಪ್ರಜಾಪ್ರಭುತ್ವದ ಬಟ್ಟೆಯೊಂದು ಹೇಗೆ ಎಳೆ ಎಳೆ ಬಿಚ್ಚಿಕೊಳ್ಳುತ್ತಾ ಸಡಿಲಗೊಳ್ಳುತ್ತಿದೆ ಎನ್ನುವುದನ್ನು ವಿವರಿಸುತ್ತಾ ಹೋಗುತ್ತದೆ.

ವಿಶ್ವದ ಜನಸಂಖ್ಯೆಯ ಸುಮಾರು ಮುಕ್ಕಾಲು ಭಾಗ ಜನರು ನಿರಂಕುಶ (ಸರ್ವಾಧಿಕಾರಿ) ಪ್ರಭುತ್ವದಡಿ ವಾಸಿಸುತ್ತಿದ್ದಾರೆ. ಅಂದರೆ ಜಗತ್ತಿನ ಪ್ರತೀ ನಾಲ್ಕು ಜನರಲ್ಲಿ ಮೂವರು ನಿರಂಕುಶ ಪ್ರಭುತ್ವದಡಿ ಬದುಕುತ್ತಿದ್ದಾರೆ. ಶೇ. 28ರಷ್ಟು ಅರೆ ಸರ್ವಾಧಿಕಾರಿ ದೇಶಗಳಲ್ಲಿದ್ದಾರೆ. ಶೇ. 7ರಷ್ಟು ಜನರು ಮಾತ್ರ ಉದಾರವಾದಿ ಪ್ರಜಾಪ್ರಭುತ್ವದಡಿಯಲ್ಲಿದ್ದಾರೆ. 2025ರ ಅಂತ್ಯದ ವೇಳೆಗೆ ಪ್ರಪಂಚದಲ್ಲಿ 92 ಸಂಪೂರ್ಣ ಸರ್ವಾಧಿಕಾರಿ ದೇಶಗಳಾಗಿ ರೂಪಾಂತರಗೊಂಡಿವೆ. ಈಗ 87 ಚುನಾಯಿತ ಸರ್ವಾಧಿಕಾರವಿರುವ ಪ್ರಜಾಪ್ರಭುತ್ವ ದೇಶಗಳಿವೆ. 2025ರಲ್ಲಿ 10 ಹೊಸ ಸರ್ವಾಧಿಕಾರಿ ದೇಶಗಳನ್ನು ಗುರುತಿಸಲಾಗಿದೆ. ಸರ್ವಾಧಿಕಾರ ಇರುವ 33 ದೇಶಗಳಲ್ಲಿ ಶೇ. 73ರಷ್ಟು ಮಾಧ್ಯಮಗಳು ಸರಕಾರಗಳ ಕಣ್ಗಾವಲಿನಲ್ಲಿ ನಿಯಂತ್ರಣಕ್ಕೊಳಪಟ್ಟಿವೆ. 30 ಸರ್ವಾಧಿಕಾರಿ ದೇಶಗಳಲ್ಲಿ ನಾಗರಿಕ ಸಮಾಜದ ಮೇಲಿನ ದಮನಕಾರಿ ನಡವಳಿಕೆಗಳು ಶೇ. 68ರಷ್ಟು ಹೆಚ್ಚಾಗಿವೆ. 2025ರಲ್ಲಿ 33 ದೇಶಗಳು ರಾಜಕೀಯ ವಿರೋಧವನ್ನು ಹತ್ತಿಕ್ಕಲು ಚಿತ್ರಹಿಂಸೆ ಕೊಡುವ ಪ್ರಮಾಣವನ್ನು ಹೆಚ್ಚಿಸಿವೆ. ಕಳೆದ 25 ವರ್ಷಗಳಲ್ಲಿ ಪ್ರಜಾಪ್ರಭುತ್ವವನ್ನು ಅಳೆಯಬಹುದಾದ ಎಲ್ಲಾ ಸಂಗತಿಗಳ ಕ್ರಮಾಂಕದಲ್ಲಿ ತೀವ್ರವಾದ ಕುಸಿತ ಕಂಡಿದೆೆ. ಸದ್ಯಕ್ಕೆ ನಡೆಯುತ್ತಿರುವ ಸರ್ವಾಧಿಕಾರ ಬಲಗೊಳ್ಳುತ್ತಿರುವ ಮೂರನೇ ಅಲೆಯಲ್ಲಿ ಚಾರಿತ್ರಿಕವಾಗಿ ಇಷ್ಟು ವೇಗದಲ್ಲಿ ಬೆಳೆಯುತ್ತಿರುವ ಸರ್ವಾಧಿಕಾರಿ ದೇಶಗಳನ್ನು ಜಗತ್ತು ಈವರೆಗೂ ಕಂಡಿರಲಿಲ್ಲ.

ಅಕ್ಷರಶಃ ಪ್ರಜಾಪ್ರಭುತ್ವ ಇಂದು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಬಹು ಅಂಗಾಂಗಗಳ ವೈಫಲ್ಯದಿಂದಾಗಿ ಗಂಭೀರ ಶಸ್ತ್ರಚಿಕಿತ್ಸೆಗಾಗಿ ಕಾದಿರುವಂತಿದೆ. ಪ್ರಸ್ತುತ ಇಂದಿನ ಪ್ರಜಾಪ್ರಭುತ್ವದ ಸ್ಥಿತಿಯು ಜಗತ್ತಿನಲ್ಲಿ ಅತಿ ಹೆಚ್ಚು ಸರ್ವಾಧಿಕಾರಿ ದೇಶಗಳಿದ್ದ 1978ರ ಕಾಲಘಟ್ಟಕ್ಕೆ ಮರಳಿದೆ. ಹೀಗಾಗಿ ಪ್ರಜಾಪ್ರಭುತ್ವದ ಸ್ಥಿತಿ ಅರ್ಧ ಶತಮಾನದಷ್ಟು ಹಿಂದಕ್ಕೆ ಸರಿದಿದೆ. ಅಂದರೆ ಜಗತ್ತಿನಲ್ಲಿ ಸರ್ವಾಧಿಕಾರ ಬಲಗೊಳ್ಳುತ್ತಿರುವುದು ಜಾಗತಿಕ ಸಮುದಾಯದ ಆತಂಕಕಾರಿ ಸಂಗತಿಯಾಗಿದೆ. ಸರ್ವಾಧಿಕಾರ ಎನ್ನುವ ಗುರುತ್ವಾಕರ್ಷಣೆಯೆಡೆಗೆ ಜಗತ್ತಿನ ದೇಶಗಳು ಹೆಚ್ಚು ಹೆಚ್ಚು ಆಕರ್ಷಿತವಾಗುತ್ತಿವೆ.

ಪ್ರಜಾಪ್ರಭುತ್ವದ ಉಸಿರಿನಂತಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊದಲ ಆದ್ಯತೆಯಾಗಿ ಸರ್ವಾಧಿಕಾರಿ ದೇಶಗಳು ದಮನಿಸುತ್ತಿವೆ. ಅರ್ಜೆಂಟೀನಾ, ಸ್ಲೋವಾಕಿಯಾ, ಯುಕೆ ಮತ್ತು ಯುಎಸ್‌ಎ ಸೇರಿದಂತೆ 28 ಸರ್ವಾಧಿಕಾರಿ ದೇಶಗಳಲ್ಲಿ ಶೇ. 64ರಷ್ಟು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿ ಸ್ವಾತಂತ್ರ್ಯ ಕ್ಷೀಣಿಸುತ್ತಿದೆ. ಶೇ. 75ರಷ್ಟು ನಿರಂಕುಶಾಧಿಕಾರಿ ದೇಶಗಳು ಸ್ವತಂತ್ರ ಮಾಧ್ಯಮವನ್ನು ಕೊಲ್ಲುತ್ತಿವೆ. ಕಾಂಬೋಡಿಯಾ, ಇಟಲಿ, ಪಾಕಿಸ್ತಾನ, ರೊಮೇನಿಯಾ ಮತ್ತು ಯುಕೆ ಸೇರಿದಂತೆ 26 ದೇಶಗಳಲ್ಲಿ ಮಾಧ್ಯಮಗಳು ಕಡ್ಡಾಯವಾಗಿ ಸರಕಾರಗಳ ಸೆನ್ಸರ್‌ಶಿಪ್‌ಗೆ ಒಳಗಾಗಬೇಕಾಗಿದೆ. ಸರಕಾರಗಳ ಕಣ್ತಪ್ಪಿಸಿ ಯಾವ ಸುದ್ದಿಯೂ ಸಾರ್ವಜನಿಕವಾಗದಷ್ಟು ಬಿಗಿಯಾಗಿದೆ. ಇನ್ನು ಚುನಾಯಿತ ಸರ್ವಾಧಿಕಾರ (ಅಟೋಕ್ರಸಿ) ಬಲಗೊಳ್ಳುತ್ತಿರುವ ದೇಶಗಳಲ್ಲಿ ಮಾಧ್ಯಮಗಳನ್ನು ಎಡಮುರಿಗೆ ಕಟ್ಟಿ ಸರಕಾರದ ಮುಖವಾಣಿಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಹಂಗೇರಿ, ಭಾರತ, ಯುಎಸ್‌ಎ ಒಳಗೊಂಡಂತೆ 22 ದೇಶಗಳಲ್ಲಿ ಮಾಧ್ಯಮಗಳು ಆಳುವ ಸರಕಾರದ ಏಜಂಟರಂತೆ ವರ್ತಿಸುತ್ತಿವೆ.

ಜಗತ್ತಿನಲ್ಲಿ ಸರ್ವಾಧಿಕಾರ ಹೆಚ್ಚುತ್ತಿದ್ದಂತೆ ಆಯಾ ದೇಶಗಳಲ್ಲಿ ಸಾಮಾಜಿಕ ಸಾಂಸ್ಕೃತಿಕ ಸಂಘಟನೆಗಳನ್ನು ನಿಯಂತ್ರಿಸಲಾಗುತ್ತಿದೆ. 2024ರಲ್ಲಿ 45 ನಿರಂಕುಶ ದೇಶಗಳಲ್ಲಿ 22 ದೇಶಗಳಲ್ಲಿ ಈ ನಿಯಂತ್ರಣ ತೀವ್ರವಾಗಿತ್ತು. 2025 ರಲ್ಲಿ ಈ ಸಂಖ್ಯೆ 30ಕ್ಕೇರಿದೆ. ಅಂದರೆ ಶೇ. 68ರಷ್ಟು ಸಂಘಟನೆಗಳನ್ನು ನಿರ್ನಾಮಮಾಡಲಾಗುತ್ತಿದೆ. ಬೆಲಾರುಸ್, ಎಲ್ ಸಾಲ್ವಡಾರ್, ಜಾರ್ಜಿಯಾ, ಗಿನಿಯಾ ಮತ್ತು ಮೆಕ್ಸಿಕೋವನ್ನು ಒಳಗೊಂಡಂತೆ ಎಲ್ಲಾ ಸರ್ವಾಧಿಕಾರಿ ದೇಶಗಳಲ್ಲಿ ಮೂರನೇ ಎರಡರಷ್ಟು ದೇಶಗಳು ಸಾರ್ವಜನಿಕ ಸಂಘಟನೆಗಳನ್ನು ಸಂಪೂರ್ಣ ನಿಯಂತ್ರಣಕ್ಕೊಳಪಡಿಸಿವೆ. ಇದು ಸರಕಾರದ ವಿರುದ್ಧ ಜನರನ್ನು ಒಟ್ಟಾಗದಂತೆ ಜಾಗೃತಗೊಳಿಸದಂತೆ ತಡೆಯುವ ವ್ಯವಸ್ಥಿತ ಕಾರ್ಯಯೋಜನೆಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಮಮತಾ ಬ್ಯಾನರ್ಜಿ ತಾನು ರಾಜೀನಾಮೆ ಕೊಡುವುದಿಲ್ಲ, ಇದು ಚುನಾವಣಾ ಆಯೋಗದ ಕುತಂತ್ರದ ಗೆಲುವು ಎಂದಿದ್ದರು. ಇಡೀ ದೇಶದಲ್ಲಿ ಚುನಾವಣೆಗಳು ನಡೆಯುತ್ತಿರುವ ರಾಜ್ಯಗಳಲ್ಲಿ ಎಸ್‌ಆರ್‌ಐ (ವಿಶೇಷ ತೀವ್ರ ಪರಿಷ್ಕರಣೆ) ಮೂಲಕ ವ್ಯಾಪಕವಾಗಿ ಬಡ ದಲಿತ, ದಮನಿತ, ಕೃಷಿಕ, ಅಲ್ಪಸಂಖ್ಯಾತ ಮತದಾರರ ಹೆಸರುಗಳನ್ನು ಕಿತ್ತುಹಾಕಲಾಗಿದೆ. ಈ ಮೂಲಕ ಕೇಂದ್ರ ಸರಕಾರವು ಚುನಾವಣಾ ಆಯೋಗವನ್ನು ನಿಯಂತ್ರಿಸುತ್ತಿರುವುದು ಗುಟ್ಟಾಗಿಲ್ಲ. ಜಗತ್ತಿನಲ್ಲಿ ಸರ್ವಾಧಿಕಾರ ಹೆಚ್ಚುತ್ತಿರುವ ಬಹುಪಾಲು ದೇಶಗಳು ಅಲ್ಲಿನ ಚುನಾವಣಾ ಸಂಸ್ಥೆಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿವೆ. ಜಾರ್ಜಿಯಾ, ಗಿನಿಯಾ-ಬಿಸೌ, ಹಂಗೇರಿ, ಇಂಡೋನೇಶ್ಯ, ರೊಮೇನಿಯಾ ಸೇರಿದಂತೆ 25 ಸರ್ವಾಧಿಕಾರಿ ದೇಶಗಳಲ್ಲಿ ಚುನಾವಣಾ ಸಂಸ್ಥೆಗಳ ಸ್ವಾಯತ್ತತೆಯನ್ನು ಕಿತ್ತುಕೊಳ್ಳಲಾಗಿದೆ. ಹೀಗಾಗಿ ಜಗತ್ತಿನಲ್ಲಿ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ಗಣನೀಯವಾಗಿ ಕ್ಷೀಣಿಸುತ್ತಿವೆ. ಸರ್ವಾಧಿಕಾರಿ ದೇಶಗಳಲ್ಲಿ ಸಾರ್ವಜನಿಕ ಆಡಳಿತವೂ ಗರಿಷ್ಠ ಪ್ರಮಾಣದಲ್ಲಿ ಭ್ರಷ್ಟಗೊಂಡು ಅಕ್ರಮದಲ್ಲಿ ತೊಡಗಿದೆ. ಈ ದೇಶಗಳಲ್ಲಿ ಶಾಸಕಾಂಗ ಅನಿಯಂತ್ರಿತ ಅಧಿಕಾರವನ್ನು ಚಲಾಯಿಸುತ್ತಾ ನ್ಯಾಯಾಂಗವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿವೆ.

ಈ ವರದಿಯು ಜಗತ್ತಿನಲ್ಲಿ ಯಾವ ಯಾವ ದೇಶಗಳಲ್ಲಿ ಸರ್ವಾಧಿಕಾರ ಹಂತ ಹಂತವಾಗಿ ಹೇಗೆ ಬೆಳೆಯಿತು ಎಂದು ವಿವರಿಸುವ ಭಾಗದಲ್ಲಿ ಭಾರತದಲ್ಲಿ ಹೇಗೆ ಪ್ರಜಾಪ್ರಭುತ್ವ ಕುಸಿಯುತ್ತಿದೆ ಎನ್ನುವುದರ ವಿವರವಿದೆ. ‘ಭಾರತದಲ್ಲಿ ಸರ್ವಾಧಿಕಾರತ್ವ 2019ರಿಂದ ಪ್ರಾರಂಭವಾಯಿತು. ನಿಧಾನಕ್ಕೆ ಪ್ರಜಾಪ್ರಭುತ್ವೀಯ ಸಂಸ್ಥೆಗಳನ್ನು ದುರ್ಬಲಗೊಳಿಸಲು ಆರಂಭಿಸಿತು. ಆಡಳಿತಾರೂಢ ಬಹುತ್ವ ವಿರೋಧಿ, ಹಿಂದೂ ರಾಷ್ಟ್ರೀಯತಾವಾದಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಪ್ರಧಾನಿ ಮೋದಿಯವರು ಪ್ರಜಾಪ್ರಭುತ್ವದ ಹಳಿ ತಪ್ಪಿಸಲು ಆರಂಭಿಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯವನ್ನು ತೀವ್ರವಾಗಿ ಹತ್ತಿಕ್ಕಲಾಯಿತು. ಸರಕಾರವನ್ನು ಟೀಕಿಸುವ ಪತ್ರಕರ್ತರ ಮೇಲಿನ ಕಿರುಕುಳ ಮತ್ತು ನಾಗರಿಕ ಸಮಾಜ ಮತ್ತು ವಿರೋಧ ಪಕ್ಷಗಳ ಮೇಲಿನ ದಾಳಿ ಹೆಚ್ಚಾಯಿತು. ಹೀಗಾಗಿ 2017ರಿಂದಲೂ ಭಾರತವನ್ನು ಚುನಾಯಿತ ಸರ್ವಾಧಿಕಾರಿ ದೇಶವೆಂದು ಗುರುತಿಸಲಾಗಿದೆ’ (ಪುಟ:24) ಎಂದು ವಿಶ್ಲೇಷಿಸಲಾಗಿದೆ.

ವಿ-ಡೆಮ್‌ನ ಹಿಂದಿನ ವರದಿಗಳಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಗೊಂಡಿರುವ ಜಗತ್ತಿನ ಕೆಲವು ದೇಶಗಳು ಮರಳಿ ಸರ್ವಾಧಿಕಾರಕ್ಕೆ ಜಾರುತ್ತಿರುವ ದೇಶಗಳ ಕಾರಣಶೋಧ ಮಾಡಲಾಗಿದೆ. ಅಂತೆಯೇ ಒಮ್ಮೆ ಸರ್ವಾಧಿಕಾರಕ್ಕೆ ಒಳಪಟ್ಟ ಕೆಲವು ದೇಶಗಳು ಈ ಸರ್ವಾಧಿಕಾರದ ಅಪಾಯಗಳನ್ನು ಬೇಗನೆ ಅರಿತು ಅಲ್ಲಿನ ರಾಜಕೀಯದಲ್ಲಿ ಕ್ಷಿಪ್ರ ಬದಲಾವಣೆಗಳು ಸಂಭವಿಸಿ, ಅಲ್ಲಿನ ಜನರ ಹಕ್ಕೊತ್ತಾಯಗಳು ಮರಳಿ ‘ಪ್ರಜಾಪ್ರಭುತ್ವ’ ವನ್ನು ಸ್ಥಾಪಿಸಿಕೊಂಡಿರುವ ದೇಶಗಳ ಉದಾಹರಣೆಯನ್ನೂ ಚರ್ಚಿಸಲಾಗಿದೆ. ಡೊಮಿನಿಕನ್ ಗಣರಾಜ್ಯ, ಫಿಜಿ, ಶ್ರೀಲಂಕಾ, ಗ್ಯಾಂಬಿಯಾ, ಮಾಂಟೆನೆಗ್ರೋ, ಸೀಶೆಲ್ಸ್, ಟಿಮೋರ್ ಲೆಸ್ಟೆ ಮತ್ತು ಸೋಲೋಮನ್ ದ್ವೀಪಗಳು ಮರಳಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಿಕೊಂಡಿವೆ. ಇವುಗಳನ್ನೆಲ್ಲಾ ಒಟ್ಟಾಗಿಸಿದರೆ 40 ಮಿಲಿಯನ್ ಜನರನ್ನು ಹೊಂದಿರುವ ವಿಶ್ವದ ಜನಸಂಖ್ಯೆಯ ಕೇವಲ 0.005ರಷ್ಟಿರುವ ಅತ್ಯಂತ ಸಣ್ಣ ದೇಶಗಳಾಗಿವೆ. ಸದ್ಯಕ್ಕೆ ಈ ಪುಟ್ಟ ಪುಟ್ಟ ದೇಶಗಳೇ ಸರ್ವಾಧಿಕಾರದತ್ತ ವೇಗವಾಗಿ ಮರಳುತ್ತಿರುವ ವಿಶ್ವಕ್ಕೆ ಸಣ್ಣ ಬ್ರೇಕರ್‌ಗಳಾಗಿ ಕಾಣುತ್ತಿವೆ. ಸರ್ವಾಧಿಕಾರದ ಭಯ, ಆತಂಕದಲ್ಲಿರುವ ಜನರಿಗೆ ಈ ಪುಟ್ಟ ದೇಶಗಳು ಕಗ್ಗತ್ತಲಿನಲ್ಲಿ ಬಹುದೂರದಿಂದ ಕಾಣುತ್ತಿರುವ ಮಿಣುಕು ದೀಪಗಳಂತೆ ಕಾಣುತ್ತಿವೆ.

Tags

DemocracyWorld
share
ಡಾ. ಅರುಣ್ ಜೋಳದಕೂಡ್ಲಿಗಿ
ಡಾ. ಅರುಣ್ ಜೋಳದಕೂಡ್ಲಿಗಿ
Next Story
X