ಒಲಿವರ್ ರಾಲೆಂಡ್ ಗೆ ಫಾರ್ಮುಲಾ ಇ ವಿಶ್ವಚಾಂಪಿಯನ್ ಶಿಪ್ ಪ್ರಶಸ್ತಿ

PC: x.com/SoyMotor
ಬರ್ಲಿನ್: ಜಾಗ್ವರ್ ಟಿಸಿಎಸ್ ರೇಸಿಂಗ್ ತಂಡ ಈ ಸೀಸಸ್ ನ ಬರ್ಲಿನ್ ಇ-ಪ್ರಿಕ್ಸ್ ನಲ್ಲಿ ಗೆಲುವು ಸಾಧಿಸಿದೆ. ಶನಿವಾರ ಮಿಚ್ ಇವಾನ್ಸ್ 13ನೇ ಸುತ್ತಿನಲ್ಲಿ ಗೆದ್ದರೆ, ಅವರ ಸಹ ರೇಸರ್ ನಿಕ್ ಕ್ಯಾಸ್ಸಿಡಿ ಭಾನುವಾರ 14ನೇ ಸುತ್ತಿನಲ್ಲಿ ಗೆಲುವು ಸಾಧಿಸಿದರು. ಅಂಡ್ರೆಟ್ಟಿಯ ಜಾಕ್ ಡೆನ್ನಿಸ್ ದ್ವಿತೀಯ ಹಾಗೂ ಡಿ.ಎಸ್. ಪೆನ್ಸ್ಕ್ ನ ಜೀನ್ ಎರಿಕ್ ಮೂರನೇ ಸ್ಥಾನ ಗಳಿಸಿದರು. ಆದರೆ ನಾಲ್ಕನೇ ಸ್ಥಾನ ಗಳಿಸಿದ ನಿಸಾನ್ ತಂಡದ ಒಲಿವರ್ ರಾಲೆಂಡ್, ಅಂತಿಮವಾಗಿ ಫಾರ್ಮುಲಾ ಇ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿ ಪಡೆಯಲು ಅಗತ್ಯವಾದ ಅಂಕ ಸಂಪಾದಿಸುವಲ್ಲಿ ಯಶಸ್ವಿಯಾದರು.
ಒಲಿವರ್ ಅವರ ಚಾಂಪಿಯನ್ಶಿಪ್ ಗೆಲುವಿನಿಂದಾಗಿ ಭಾನುವಾರ ಬರ್ಲಿನ್ ನ ಟೆಂಪೆಲೋಫ್ ಏರ್ಪೋರ್ಟ್ ಸರ್ಕ್ಯೂಟ್ ನಲ್ಲಿನ ವಿಜಯದ ಸಂಭ್ರಮಾಚರಣೆ ಹೆಚ್ಚಿನ ಮಹತ್ವ ಪಡೆಯಲಿಲ್ಲ. ನಿಸಾನ್ ವ್ಯವಸ್ಥಾಪಕ ನಿರ್ದೇಶಕ ಟೊಮ್ಮಾಸೊ ವೋಲ್ಪ್ ಅವರು ರೋಲ್ಯಾಂಡ್ ಅವರನ್ನು ಅಭಿನಂದಿಸಿ, "ಡ್ಯಾಡಿ, ಯೂ ಆರ್ ದ ವರ್ಲ್ಡ್ ಚಾಂಪಿಯನ್" ಎಂಬ ರೊಲ್ಯಾಂಡ್ ಪುತ್ರಿಯ ಧ್ವನಿಸಂದೇಶವನ್ನು ಬಿತ್ತರಿಸಿದರು.
ಏತನ್ಮಧ್ಯೆ ಬರ್ಲಿನ್ ಇ-ಪ್ರಿಕ್ಸ್ ನ ಎರಡನೇ ರೇಸ್ ನಲ್ಲಿ ನಿಕ್ ಕ್ಯಾಸಿಡಿ ಗೆಲುವು ಸಾಧಿಸಿದರು. ಗ್ರಿಡ್ ನಲ್ಲಿ 20ನೆಯವರಾಗಿ ರೇಸ್ ಆರಂಭಿಸಿದ ಅವರು, ಎರಡನೇ ಸೀಸನ್ ಗೆಲುವಿಗಾಗಿ ತೀವ್ರ ಹೋರಾಟ ನಡೆಸಿದರು. ಇದಕ್ಕೂ ಮುನ್ನ ಶಾಂಘೈ ಇ-ಪ್ರಿಕ್ಸ್ ನಲ್ಲೂ ಅವರು ಗೆಲುವು ಸಾಧಿಸಿದ್ದರು.







