ರಾಯಚೂರಿನಲ್ಲಿ ದಸರಾ ಸಂಭ್ರಮ : ಮಹಾನಗರ ಪಾಲಿಕೆಯಿಂದ ನಾಡದೇವಿ ಮೆರವಣಿಗೆ

ರಾಯಚೂರು : ನಾಡ ಹಬ್ಬ ದಸರಾ ಅಂಗವಾಗಿ ರಾಯಚೂರು ಮಹಾನಗರ ಪಾಲಿಕೆಯಿಂದ ಆಯೋಜಿಸಿದ ನಾಡದೇವಿಯ ಮೆರವಣಿಗೆ ಅ.ರಂದು ನಗರದಲ್ಲಿ ವೈಭವದಿಂದ ಜರುಗಿತು.
ಮಹಾನಗರ ಪಾಲಿಕೆಯ ಜೋನಲ್ ಕಚೇರಿ ಆವರಣದಲ್ಲಿ ಮೆರವಣಿಗೆಗೆ ಚಾಲನೆ ದೊರೆತು, ಶಾಸಕರಾದ ಡಾ. ಎಸ್. ಶಿವರಾಜ್ ಪಾಟೀಲ, ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಉಪಾಧ್ಯಕ್ಷ ಜೆ. ಸಾಜಿದ್ ಸಮೀರ್, ಆಯುಕ್ತ ಜುಬಿನ್ ಮೊಹಪಾತ್ರ ಹಾಗೂ ಹಲವಾರು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಲೆಗೆ ಪೇಟೆ ಕಟ್ಟಿಕೊಂಡು ದಸರಾ ಸಂಭ್ರಮಕ್ಕೆ ಸಾಕ್ಷಿಯಾದರು.
ಮೆರವಣಿಗೆಯಲ್ಲಿ ಮಹಿಳೆಯರು ಕುಂಭ ಹೊತ್ತು ಸಾಗಿದರು. ಹಲಗೆ-ಡೊಳ್ಳಿನ ಮೇಳ, ಕೋಲಾಟ, ಹುಲಿಕುಣಿತ ಹಾಗೂ ವಿವಿಧ ವೇಷಧಾರಿಗಳ ಕಲಾ ತಂಡಗಳು ಮೆರವಣಿಗೆಯ ಕಳೆ ಹೆಚ್ಚಿಸಿದವು. ಜೋನಲ್ ಕಚೇರಿಯಿಂದ ಪ್ರಾರಂಭವಾದ ಮೆರವಣಿಗೆ ಮಾಣಿಕಪ್ರಭು ಬನ್ನಿ ಮಂಟಪದವರೆಗೆ ಸಾಗಿತು.
ಮೆರವಣಿಗೆಯಲ್ಲಿ ಪಾಲಿಕೆಯ ಸದಸ್ಯರಾದ ಲಕ್ಷ್ಮೀ, ಡಿ.ಎ ಸಿಮನ್, ಜಯಣ್ಣ, ವಿ.ನಾಗರಾಟ, ಬಿ.ರಮೇಶ, ಶರಣಬಸಪ್ಪ ಬಲ್ಲಟಗಿ, ಬುಜ್ಜಮ್ಮ ಶಂಕರಪ್ಪ, ಅನಿತಾ ಜಿ.ತಿಮ್ಮಾರೆಡ್ಡಿ, ನಿಮಿತ್ ಸಲ್ಯಾ ಮಹ್ಮದ್ ಶಾಲಂ, ಖುರ್ಷಿದಾ ಬಾನು ಅಬ್ದುಲ್ ವಾಹಿದ್, ದರೂರ ಬಸವರಾಜ ಪಾಟೀಲ್, ರತ್ನ ಪ್ರಶಾಂತಿ, ಎಂ ಪವನ್ ಕುಮಾರ ಎಂ.ಈರಣ್ಣ, ಉಮಾ ರವೀಂದ್ರ ಜಲ್ದಾರ, ನೂರ ಪಾಷಾ ಎಸ್, ಗಾಯತ್ರಿ ಹರೀಶ ನಾಡಗೌಡ, ಈ ಶಶಿರಾಜ, ಲಂತಾ ಕಡಗೋಲ್ ಅಂಜಿನಯ್ಯ, ಹೇಮಲತಾ ಪಿ.ಬೂದೆಪ್ಪ, ಎನ್.ಕೆ.ನಾಗರಾಜ, ಜಿಂದಪ್ಪ, ಸರೋಜಮ್ಮ ದೊಡ್ಡ ಮಲ್ಲೇಶಪ್ಪ, ಎನ್. ಶ್ರೀನಿವಾಸರೆಡ್ಡಿ, ರೇಖಾ ಮಹೀಂದ್ರರೆಡ್ಡಿ, ಶೈನಾಜ್ ಬೇಗಂ ಜಿ.ಹೆಚ್.ಪಾಜಿಬಾಬು, ಪಿ.ನವನೀತಾ ಪಿ. ಶ್ರೀನಿವಾಸ ರೆಡ್ಡಿ, ಕವಿತಾ ಜಿ. ತಿಮ್ಮಾರೆಡ್ಡಿ, ಸುನೀಲ್ ಕುಮಾರ್, ವೆಂಕಟಮ್ಮ ಎನ್. ಶ್ರೀನಿವಾಸರೆಡ್ಡಿ, ಅಂಜನಮ್ಮ ಶ್ಯಾಮಸುಂದರ್, ಸಮೀನಾ ಮುಕ್ರಂ, ಸಣ್ಣ ನರಸರೆಡ್ಡಿ, ತಿಮ್ಮಪ್ಪ ನಾಗೇಂದ್ರಪ್ಪ, ಸ್ವಾತಿ ಹರಿಬಾಬು, ನಾಮ ನಿರ್ದೇಶಿತ ಸದಸ್ಯರಾದ ಮಹ್ಮದ್ ಫೆರೋಜ್, ವೆಂಕಟೇಶ, ಅಮಿತ್ ಕುಮಾರ ಲೋಧ, ಮಣಿಕಂಠ, ಮುನಿಸ್ವಾಮಿ ಹಾಗೂ ಮುಖಂಡರಾದ ರವಿ ಬೋಸರಾಜು, ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತರಾದ ಶರಣಬಸಪ್ಪ ಕೋಟೆಪ್ಪಗೋಳ, ಆಡಳಿತ ವಿಭಾಗದ ಉಪ ಆಯುಕ್ತರಾದ ಸಂತೋಷರಾಣಿ ಎಂ., ಅಭಿವೃದ್ಧಿ ವಿಭಾಗದ ಉಪ ಆಯುಕ್ತರಾದ ಮೇನಕಾ ಪಟೇಲ್ ಹಾಗೂ ಇನ್ನೀತರರು ಭಾಗಿಯಾಗಿದ್ದರು.







