ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

ರಾಯಚೂರು : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
ನೂತನವಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶ ಹೊರಡಿಸಲಾಗಿದೆ. ತಾಲೂಕಾಧ್ಯಕ್ಷರಾಗಿ ಡಾ.ಬಿ.ವಿಜಯ ರಾಜೇಂದ್ರ, ಗೌರವ ಕಾರ್ಯದರ್ಶಿಗಳಾಗಿ ರಾವುತರಾವ್ ಬರೂರು, ಪ್ರತಿಭಾ ಗೋನಾಳ, ಗೌರವ ಕೋಶಾಧ್ಯಕ್ಷರಾಗಿ ಸೈಯದ್ ಹಫೀಜುಲ್ಲಾ ಖಾದ್ರಿ, ಸಂಘಟನಾ ಕಾರ್ಯದರ್ಶಿಗಳಾಗಿ ಡಾ. ಶರಣಪ್ಪ ಚಲುವಾದಿ, ಡಾ.ರೇಖಾ ಪಾಟೀಲ್ ಇವರನ್ನು ಆಯ್ಕೆ ಮಾಡಲಾಗಿದೆ.
ಮಹಿಳಾ ಪ್ರತಿನಿಧಿಗಳಾಗಿ ದೇವೇಂದ್ರಮ್ಮ, ವೈಶಾಲಿ ಪಾಟೀಲ್, ಪರಿಶಿಷ್ಟ ಜಾತಿ ಪ್ರತಿನಿಧಿಗಳಾಗಿ ಅಮರೇಶ ಆಶಿಹಾಳ, ಮಹಾಂತೇಶ ರಮೇಶ ಹೀರಾ, ಪರಿಶಿಷ್ಟ ಪಂಗಡದ ಪ್ರತಿನಿಧಿಗಳಾಗಿ ಡಾ. ವಿರುಪಾಕ್ಷಿ ಮೇಟಿ ಪಾಟೀಲ್, ಹಿಂದುಳಿದ ವರ್ಗಗಳ ಪ್ರತಿನಿಧಿ ವೆಂಕಟೆರಶ್ ಹೂಗಾರ್, ಅಲ್ಪಸಂಖ್ಯಾತರ ಪ್ರತಿನಿಧಿಗಳಾಗಿ ಖಾನ್ ಸಾಬ್ ಮೂಮೀನ್, ಸಂಘ ಸಂಸ್ಥೆಗಳ ಪ್ರತಿನಿಧಿಗಳಾಗಿ ಅಶೋಕ ಕುಮಾರ್ ಜೈನ್ ಆಯ್ಕೆ ಮಾಡಲಾಗಿದೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಂಜುನಾಥ್ ಪಾಟೀಲ್, ವಿಜಯಾ ಕುಮಾರಿ, ತಾಲೂಕು ಶಿಕ್ಷಣಾಧಿಕಾರಿಗಳು, ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರನ್ನು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ತಾಲೂಕು ಘಟಕದ ನಿಕಟ ಪೂರ್ವ ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಇವರನ್ನು ತಾಲೂಕು ಸಮಿತಿಯ ಸದಸ್ಯರುಗಳಾಗಿದ್ದಾರೆ.







