ಆರ್ ಮಾನಸಯ್ಯ ಬಹಿರಂಗ ಚರ್ಚೆಗೆ ಬರಲಿ: ನಾಗಲಿಂಗಸ್ವಾಮಿ

ರಾಯಚೂರು: ತುಂಗಭದ್ರ ನೀರಾವರಿ ಕಾರ್ಮಿಕ ಸಂಘದ ಬಗ್ಗೆ ಅಪಪ್ರಚಾರ ಮಾಡಿದ ಆರ್ ಮಾನಸಯ್ಯ ಹಾಗೂ ಅಮೀರ್ ಅಲಿ ಅವರು ಸುಳ್ಳು ಹೇಳಿ ದಿಕ್ಕು ತಪ್ಪಿಸುವ ಬದಲು ಬಹಿರಂಗ ಚರ್ಚೆಗೆ ಬರಲಿ ಎಂದು ಸಂಘದ ಅಧ್ಯಕ್ಷ ಕೆ.ನಾಗಲಿಂಗಸ್ವಾಮಿ ಸವಾಲು ಹಾಕಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಇತ್ತೀಚಿಗೆ ಹೋರಾಟದಲ್ಲಿ ಆರ್ ಮಾನಸಯ್ಯ ಮಾತನಾಡುತ್ತಾ ನಮ್ಮ ಜೊತೆ 50 ಜನ ಕಾರ್ಮಿಕರಿಲ್ಲ ಎಂದು ಗೇಳಿ ಮಾಡಿದ್ದರು, ತುಂಗಭದ್ರ ಕಾರ್ಮಿಕ ಸಂಘದ ಅಧ್ಯಕ್ಷರಾದ ನನ್ನ ಬಗ್ಗೆ ತುಚ್ಛವಾಗಿ ಮಾತನಾಡಿದ್ದಲ್ಲದೇ ಸಾಮಾಜಿಕ ಜಾಲ ತಾಣದಲ್ಲಿ ಟೀಕೆ ಮಾಡಿದ್ದರು. ಆದರೆ ಸಿರವಾರ ಬಹಿರಂಗ ಸಭೆಯಲ್ಲಿ ಏಕವಚನದಲ್ಲಿ ನಿಂದಿಸಿದ್ದರಿಂದ ಹೇಳಿಕೆ ನೀಡಲಾಗಿದೆ. ನ್ಯಾವಾರು ಯಾರ ದಲ್ಲಾಳಿಗಳಲ್ಲ. ದಲ್ಲಾಳಿಗಳು ಯಾರು ಎಂಬದನ್ನು ಸಾಬೀತುಪಡಿಸಲು ಸಿದ್ದವೆಂದರು. ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದು ದಿನಾಂಕ ನಿಗದಿಪಡಿಸಿ ಚರ್ಚೆಗೆ ಸಿದ್ದವಿರುವದಾಗಿ ಹೇಳಿದರು.
ಆರ್.ಮಾನಸಯ್ಯನವರ ಹೇಳಿಕೆಯನ್ನು ತಿರುಚಲಾಗಿದೆ ಎಂದು ರವಿವಾರ ಅಮೀರ ಅಲಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ. ಅವರ ಹೇಳಿಕೆ ತಿರುಚುವ ಪ್ರಯಮೇ ಇಲ್ಲ. ಕಾರ್ಮಿಕರಿಗೆ ಯಾರು ಮೋಸ ಮಾಡಿದ್ದಾರೆ ಎಂದು ಕಾರ್ಮಿಕರಿಗೆ ಗೊತ್ತಿದೆ. ಮಕ್ಕಳಾಗದ ಮಹಿಳೆಯನ್ನು ಬಂಜೆ ಎಂದು ಕರೆದಿರುವ ವಿಡಿಯೋಗಳು ನಮ್ಮಲ್ಲಿವೆ. ಮಹಿಳೆಯನ್ನು ನಿಂದಿಸಿ ಮಾತನಾಡಿದ್ದಾರೆ. ಮಾನಸಯ್ಯನವರು ಮಹಿಳೆಯರಿಗೆ ಅಪಮಾನಿಸಿದ್ದಾರೆ ಎಂದು ಅವರು ಪುನರುಚ್ಚಿರಿಸಿದರು.
ಮಾನವಿ ಉಪ ವಿಭಾಗ ಒಂದರಲ್ಲಿಯೇ 50 ಕಾರ್ಮಿಕರು ನಮ್ಮ ಸಂಘದಲಿದ್ದಾರೆ. 748 ಜನ ಕಾರ್ಮಿಕರಲ್ಲಿ 50 ಬಿಟ್ಟು ಉಳಿದ 698 ಜನ ಕಾರ್ಮಿಕರನ್ನು ಹಾಜರಪಡಿಸಬೇಕು. ಕಾರ್ಮಿಕರಿಗೆ ನಾವು ಮಾಡಿದ್ದೇನು, ನೀವು ಮಾಡಿದ್ದೇನು ಎಂಬದನ್ನು ಚರ್ಚೆಗೆ ಸಿದ್ದವಿರುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಬಸವರಾಜ, ರಾಜಮಹ್ಮದ್, ಜಲಾಲ ಪಾಷಾ, ಮಾನವಿ ಉಪ ವಿಭಾಗದ ಅಧ್ಯಕ್ಷ ಬಸವಲಿಂಗಪ್ಪ, ಈಶಪ್ಪಗೌಡ, ಯಲ್ಲಪ್ಪ, ರವಿಚಂದ್ರ, ಜಗದೀಶ ಸೇರಿದಂತೆ ಅನೇಕರಿದ್ದರು.







