ರಾಯಚೂರು | ಸಾರಿಗೆ ಬಸ್ ಪಲ್ಟಿ : ಕಂಡಕ್ಟರ್ ಮೃತ್ಯು, 20 ಪ್ರಯಾಣಿಕರಿಗೆ ಗಾಯ

ರಾಯಚೂರು: ಸಾರಿಗೆ ಬಸ್ ಪಲ್ಟಿಯಾಗಿ ಕಂಡಕ್ಟರ್ ಮೃತಪಟ್ಟು, 20 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಅಂಚೇಸುಗೂರು ಬಳಿ ನಡೆದಿದೆ.
ಮೃತರನ್ನು ಲಿಂಗಸುಗೂರು ತಾಲೂಕಿನ ಬಸವರಾಜ್ ( 36 ) ಎಂದು ಗುರುತಿಸಲಾಗಿದೆ.
ಅಂಜಳ ಗ್ರಾಮದಿಂದ ಅಂಚೇಸುಗೂರಿನ ಕೆನಾಲ್ ಸೇತುವೆ ದಾಟುವ ವೇಳೆ ಬಸ್ ಪಲ್ಟಿಯಾಗಿದೆ. ಬಸ್ ನಲ್ಲಿ 39 ಜನ ಪ್ರಯಾಣಿಕರಿದ್ದು, 20 ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬಸ್ ಚಾಲಕ ಗಂಭೀರ ಗಾಯಗೊಂಡಿದ್ದು, ರಾಯಚೂರಿನ ರಿಮ್ಸ್ ಗೆ ರವಾನೆ ಮಾಡಲಾಗಿದೆ. ಬಸ್ ಪಲ್ಟಿಯಾಗಿ ಕೆಲ ಹೊತ್ತಾದರೂ ಆಂಬ್ಯುಲೆನ್ಸ್ ಬಾರದ ಕಾರಣ ಟಂಟಂ, ಬೈಕ್ ಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ದೇವದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Next Story





