ರಾಯಚೂರು | ಹಟ್ಟಿ ಘಟಕದ ಅಧ್ಯಕ್ಷರಾಗಿ ಲಾಲ್ ಪೀರ್, ಕಾರ್ಯದರ್ಶಿಯಾಗಿ ಸುನಿಲ್ ನೇಮಕ

ರಾಯಚೂರು : ಹಟ್ಟಿ ಘಟಕದ ಕಾಂಗ್ರೆಸ್ ಪಕ್ಷದ ನೂತನ ಯುವ ಅಧ್ಯಕ್ಷರಾಗಿ ಯುವ ಹೋರಾಟಗಾರರಾದ ಲಾಲ್ ಪೀರ್, ಘಟಕ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್ ಅವರನ್ನು ನೇಮಕಾತಿ ಮಾಡಲಾಗಿದೆ.
ಮಾಜಿ ಶಾಸಕ ಹಾಗೂ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಡಿ.ಎಸ್ ಹುಲಿಗೇರಿ ಹಾಗೂ ಲಿಂಗಸುಗುರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದನಾಯಕ ಅವರ ಆದೇಶದ ಮೇರೆಗೆ ಈ ನೇಮಕಾತಿ ಮಾಡಿದ್ದು, ಸಂಸದ ಜಿ.ಕುಮಾರ ನಾಯಕ ಅವರು ಇಂದು ಹಟ್ಟಿ ಚಿನ್ನದ ಗಣಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಮಕಾತಿ ಪತ್ರ ನೀಡಿ ಸನ್ಮಾನಿಸಿದರು.
Next Story





