ರಾಯಚೂರು | ಅರ್ಜಿಗಳ ವೇಗವರ್ಧನೆಗಾಗಿ ಜಿಲ್ಲಾಧಿಕಾರಿ ನಿತೀಶ್ ಕೆ. ಅವರಿಗೆ ರಾಜ್ಯಮಟ್ಟದ ಪ್ರಶಂಸೆ

ರಾಯಚೂರು : ಅಟಲ್‌ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ ರಾಜ್ಯದ ಸಾರ್ವಜನಿಕರಿಗೆ ವಿವಿಧ ಪ್ರಮಾಣ ಪತ್ರಗಳ ಸೇವೆಗಳನ್ನು ವೇಗವಾಗಿ ಒದಗಿಸಿರುವ ಸಾಧನೆಗಾಗಿ ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ. ಅವರನ್ನು ಕಂದಾಯ ಇಲಾಖೆಯ ಆಯುಕ್ತ ಮುಲ್ಲೈ ಮುಹಿಲನ್ ಅಭಿನಂದಿಸಿದ್ದಾರೆ.
ಆಗಸ್ಟ್ 2025ರ ಮಾಹೆಗಳಲ್ಲಿ ರಾಯಚೂರು ಜಿಲ್ಲೆಯ ನಾಡ ಕಚೇರಿಗಳಲ್ಲಿ ಸ್ವೀಕರಿಸಲಾದ 33,870 ಅರ್ಜಿಗಳನ್ನು ನಿಗದಿತ ಅವಧಿಗಿಂತ ಮೊದಲು ಶೇ. 99.90 ರಷ್ಟು ವಿಲೇವರಿ ಮಾಡಿ 6.18 ಸಿಗ್ಮಾ ಮೌಲ್ಯ ಪಡೆದಿದ್ದಾರೆ. 10.04 ವಿಲೇವರಿ ಸೂಚ್ಯಂಕದ ಪ್ರಕಾರ ತಮ್ಮ ಜಿಲ್ಲೆಯಲ್ಲಿ 11.04 ಪಟ್ಟು ನಿಗದಿತ ಅವಧಿಗಿಂತ ಅರ್ಜಿಗಳನ್ನು ಶೀಘ್ರವಾಗಿ ವಿಲೇವರಿ ಮಾಡಿ, ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಶ್ಲಾಘನೀಯವಾಗಿದೆ.
ನಿಮ್ಮ ಜಿಲ್ಲೆಯಲ್ಲಿನ ಈ ಕಾರ್ಯ ಸಾಧನೆಗೆ ನಿಮ್ಮ ಹಾಗೂ ನಿಮ್ಮ ನಾಡ ಕಚೇರಿ/ಅಟಲ್‌ಜೀ ಜನಸ್ನೇಹಿ ಕೇಂದ್ರದ ಸಿಬ್ಬಂದಿಯ ಸಹಕಾರ, ಕಾರ್ಯತತ್ಪರತೆ ಕಾರಣವಾಗಿರುತ್ತದೆ. ಆದ್ದರಿಂದ, ಅಟಲ್‌ಜೀ ಜನಸ್ನೇಹಿ ನಿರ್ದೇಶನಾಲಯದ ಪರವಾಗಿ ನಿಮ್ಮ ತಂಡಕ್ಕೆ ನನ್ನ ಅಭಿನಂದನೆಯನ್ನು ವ್ಯಕ್ತಪಡಿಸಲು ಇಚ್ಛಿಸುತ್ತೇನೆ. ಇನ್ನು ಮುಂದಿನ ದಿನಗಳಲ್ಲಿಯೂ ಸಹ ನಿಮ್ಮಿಂದ ಇದೇ ರೀತಿಯ ಸಹಕಾರ ಹಾಗೂ ಕಾರ್ಯಕ್ಷಮತೆಯನ್ನು ನಿರೀಕ್ಷಿಸುತ್ತೇನೆ ಎಂದು ಕಂದಾಯ ಇಲಾಖೆಯ ಆಯುಕ್ತರಾದ ಮುಲ್ಲೈ ಮುಹಿಲನ್ ಅವರು ರಾಯಚೂರು ಜಿಲ್ಲಾಧಿಕಾರಿಗಳಾದ ನಿತೀಶ್ ಕೆ ಅವರಿಗೆ ಅಭಿನಂದನಾ ಪತ್ರ ನೀಡಿದ್ದಾರೆ.







