ರಾಯಚೂರು| ಏಮ್ಸ್ ಗಾಗಿ ಬೃಹತ್ ಪ್ರತಿಭಟನೆ; ಸಿರವಾರ ಬಂದ್, ವ್ಯಾಪಾರ ಸ್ತಬ್ಧ

ರಾಯಚೂರು: ಏಮ್ಸ್ ಆರೋಗ್ಯ ಸಂಸ್ಥೆ ಮಂಜೂರಾತಿಗಾಗಿ ರಾಯಚೂರಿನಲ್ಲಿ ಕಳೆದ ಸಾವಿರ ದಿನಗಳ ನಿರಂತರ ಹೋರಾಟದ ಭಾಗವಾಗಿ ಬುಧವಾರ ಬೆಳಿಗ್ಗೆಯಿಂದಲೇ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ, ಸಿರವಾರ ಬಂದ್ ಅಕ್ರೊಶ ವ್ಯಕ್ತವಾಯಿತು.
ಸಿರವಾರದ ಪ್ರಮುಖ ರಸ್ತೆಯಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿ ವ್ಯಾಪಾರಸ್ಥರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಶಾಸಕ ಜಿ.ಹಂಪಯ್ಯ ನಾಯಕ ಮಾತನಾಡಿ, ರಾಜ್ಯದಲ್ಲಿನ ಕೇಂದ್ರದ ಮಂತ್ರಿಗಳಿಗೆ ಜಿಲ್ಲೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ರಾಜ್ಯದ ಸಂಸದರಿಗೆ ಏಮ್ಸ್ ನ ಕುರಿತಾಗಿ ಆಸಕ್ತಿ ಇಲ್ಲ. ಏಮ್ಸ್ ಗಾಗಿ ಉಗ್ರ ಹೋರಾಟದ ಅವಶ್ಯಕತೆ ಇದೆ. ಕೇಂದ್ರ ಸರ್ಕಾರದ ಆದಾಯ ಮೂಲದ ಎಲ್ಲ ಕಚೇರಿಗಳನ್ನು, ರೈಲ್ವೆ ಗಳನ್ನು ಬಂದ್ ಮಾಡಬೇಕಿದೆ. ಈ ಭಾಗದ ಎಲ್ಲ ನೈಸರ್ಗಿಕ ಸಂಪನ್ಮೂಲಗಳ ವಿನಿಯೋಗ ಪಡೆಯುತ್ತಿರುವ ಕೇಂದ್ರ 'ಏಮ್ಸ್' ಅನ್ನು ನೀಡಲು ನಿರಾಸಕ್ತಿ ತೋರುತ್ತಿರುವುದು ಈ ಭಾಗಕ್ಕೆ ಮಾಡುತ್ತಿರುವ ಅಪಮಾನ ಎಂದರು.
ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ರಾಜ್ಯಕ್ಕೆ ಉಪಕಾರ ಮಾಡುತ್ತಿರುವ ಜಿಲ್ಲೆಯ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಅನ್ನ, ಬೆಳಕು, ಬಂಗಾರ ನೀಡುತ್ತಿರುವ ಜನರಿಗೆ ಉತ್ತಮ ವಾದ ಆರೋಗ್ಯದ ಸೇವೆಗಳು ಲಭ್ಯವಿಲ್ಲ ಎಂಬುದು ದುರದೃಷ್ಟಕರ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ವೈ ಭೂಪನಗೌಡ, ಸದಸ್ಯರಾದ ಸಂದೀಪ್ ಪಾಟೀಲ, ಕೃಷ್ಣ ನಾಯಕ, ಸೂರಿ ದುರುಗಣ್ಣ ನಾಯಕ, ಗಡ್ಲ ಅಮರೇಶ, ಗಡ್ಲ ಚನ್ನಪ್ಪ, ಎಚ್ ಮಾರ್ಕಪ್ಪ, ಹಾಜಿ ಚೌದ್ರಿ, ಮೌಲಸಾಬ್ ವರ್ಚಸ್,ಖಾಸಗಿ ಶಾಲೆಗಳ ಮುಖ್ಯಸ್ಥರು, ಖಾಸಗಿ ವೈದ್ಯರ ಬಳಗ, ಖಾಸಗಿ ಕಾಲೇಜಿನ ಆಡಳಿತ ಮಂಡಳಿ, ಕರವೇ, ವರ್ತಕರ ಸಂಘ, ವಿವಿಧ ಸಹಕಾರಿ ಸಂಘಗಳ ಮುಖ್ಯಸ್ಥರು, ರೈತ ಸಂಘ, ವಿವಿಧ ಸಂಘಟನೆಯ ಮುಖಂಡರು ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಚುಕ್ಕಿ ಸೂಗಪ್ಪ ಸಾಹುಕಾರ, ಅಯ್ಯನಗೌಡ ಜಂಬಲದಿನ್ನಿ, ಅರಿಕೇರಿ ಮಲ್ಲಿಕಾರ್ಜುನ ಸಾಹುಕಾರ, ರಮೇಶ ದರ್ಶನಕರ್, ಅರಿಕೇರಿ ಶಿವಶರಣ ಸಾಹುಕಾರ, ನಿರ್ಮಲಾ ಬೆಣ್ಣಿ, ಎನ್ ರೇಣುಕಾ, ಅನಿತಾ ನವಲಕಲ್, ವಿಜಯಲಕ್ಷ್ಮಿ ಆದೆಪ್ಪ ಸಾಹುಕಾರ,ಅಕ್ಕಮಹಾದೇವಿ ಎಂ ನಿಂಬೆಯ್ಯ, ಪ್ರಕಾಶ ಪಾಟೀಲ,ಎಂ ನಿಂಬೆಯ್ಯ ಸ್ವಾಮಿ, ಚಂದ್ರಶೇಖರಯ್ಯ ಸ್ವಾಮಿ,ಕಲ್ಲೂರು ಬಸವರಾಜ ನಾಯಕ, ಸಿದ್ದರಾಮಯ್ಯ ಸ್ವಾಮಿ, ನರಸಿಂಹರಾವ್ ಕುಲಕರ್ಣಿ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಮೌಲಸಾಬ್ ಗಣದಿನ್ನಿ, ಕಾಶೀನಾಥ್ ಸರೋದೆ, ಗುಂಡಪ್ಪ ಸಜ್ಜನ, ಅರಳಪ್ಪ ಯದ್ದಲದಿನ್ನಿ, ಎಂ.ಪ್ರಕಾಶ, ಎಲ್ ವಿ ಸುರೇಶ, ಅಬ್ರಾಹಂ ಹೊನ್ನುಟಗಿ, ಜಯಪ್ಪ ಕೆಂಪು, ಎಂ ಮನೋಹರ, ಮೆಶಾಕ್ ದೊಡ್ಮನಿ, ಚನ್ನಬಸವ ಗಡ್ಲ, ಭರತ ನಾಯಕ, ನಾಗೇಶ ನಾಯಕ, ಮಹ್ಮದ್ ವಲಿ ಗುತ್ತೇದಾರ, ಸೇರಿದಂತೆ ವಿದ್ಯಾರ್ಥಿಗಳು, ಯುವಜನರು ಹಾಗು ಸಾವಿರಾರು ಜನರು ಭಾಗವಹಿಸಿದ್ದರು.