ಶಿವಮೊಗ್ಗ | ಮಾರಕಾಸ್ತ್ರಗಳಿಂದ ಸಹೋದರರ ಮೇಲೆ ದಾಳಿ

ಸಾಂದರ್ಭಿಕ ಚಿತ್ರ
ಶಿವಮೊಗ್ಗ : ಯುವಕರ ಗುಂಪೊಂದು ಮಾರಕಾಸ್ತ್ರಗಳಿಂದ ಸಹೋದರರ ಮೇಲೆ ದಾಳಿ ನಡೆಸಿದ ಘಟನೆ ಟಿಪ್ಪುನಗರದ 5ನೇ ತಿರುವಿನಲ್ಲಿ ನಡೆದಿರುವುದು ವರದಿಯಾಗಿದೆ.
ಕಾರ್ ಡೀಲರ್ ರಹಮತ್ ಉಲ್ಲಾ ಮತ್ತು ಅವರ ಸಹೋದರ ನ್ಯಾಮತ್ ಉಲ್ಲಾ ಹಲ್ಲೆಗೊಳಗಾದವರು.
ರಹಮತ್ ಉಲ್ಲಾ ಅವರ ಬಲ ಭುಜದ ಬಳಿ ಮಾರಕಾಸ್ತ್ರದಿಂದ ಇರಿಯಲಾಗಿದೆ. ನ್ಯಾಮತ್ ಉಲ್ಲಾ ಅವರ ಎಡಗೈಗೆ ಗಾಯವಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ತುಂಗಾ ನಗರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಮ್ಮ ಮನೆ ಬಳಿ ಕೆಲವರು ಗಲಾಟೆ ಮಾಡುತ್ತಿದ್ದಾರೆಂದು ಮಗಳು ಫೋನ್ ಮಾಡಿ ತಿಳಿಸಿದಳು. ತಕ್ಷಣ ಸಹೋದರನ ಜೊತೆಗೆ ಮನೆ ಬಳಿ ಹೋದೆ. ತಮ್ಮ ಮನೆ ಬಳಿ ಯಾಕೆ ಗಲಾಟೆ ಮಾಡುತ್ತಿದ್ದೀರ ಎಂದು ಪ್ರಶ್ನಿಸುತ್ತಿದ್ದಂತೆ ಸುಮಾರ 8 ರಿಂದ 9 ಯುವಕರ ಗುಂಪು ಏಕಾಏಕಿ ತಮ್ಮ ಮೇಲೆ ಹಲ್ಲೆ ನಡೆಸಿದೆ. ಯುವಕರ ಗುಂಪಿನಲ್ಲಿದ್ದವರು ಟಿಪ್ಪು ನಗರದವರು.
- ರಹಮತ್ ಉಲ್ಲಾ. ಹಲ್ಲೆಗೊಳಗಾದ ವ್ಯಕ್ತಿ.
Next Story






