ವಿಶ್ವಕಪ್ ವಿಜೇತ ಭಾರತ ತಂಡವನ್ನು ಹೊತ್ತಿರುವ ವಿಮಾನಕ್ಕೆ ವಾಟರ್ ಸೆಲ್ಯೂಟ್!

PC : X \ @sahiljoshii
ಹೊಸದಿಲ್ಲಿ: ಚಾಂಪಿಯನ್ ಭಾರತೀಯ ಕ್ರಿಕೆಟ್ ತಂಡವನ್ನು ಹೊತ್ತ ವಿಮಾನವು ಗುರುವಾರ ಸಂಜೆ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಜಲಫಿರಂಗಿಯ ಸ್ವಾಗತ ನೀಡಲಾಯಿತು.
ಗುರುವಾರ ಬೆಳಗ್ಗೆ ಬಾರ್ಬಡೋಸ್ ನಿಂದ ದಿಲ್ಲಿಗೆ ಆಗಮಿಸಿದ ಭಾರತ ಕ್ರಿಕೆಟ್ ತಂಡವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು. ಆ ನಂತರ ಮುಂಬೈಗೆ ವಿಜಯೋತ್ಸವದಲ್ಲಿ ಭಾಗವಹಿಸಲು ಆಗಮಿಸಿದೆ.
ಟೀಮ್ ಇಂಡಿಯಾದ ವಿಜಯೋತ್ಸವ ಮೆರವಣಿಗೆಯು ಸಂಜೆ 5 ಗಂಟೆಗೆ ಮುಂಬೈನ ಮರೀನ್ ಡ್ರೈವ್ ನಲ್ಲಿ ನಿಗದಿಪಡಿಸಲಾಗಿದೆ. ಆದರೆ, ತಂಡವು ನಗರಕ್ಕೆ ಸ್ವಲ್ಪ ತಡವಾಗಿ ಆಗಮಿಸಿದ ಕಾರಣ ಮೆರವಣಿಗೆಯು ವಿಳಂಬವಾಗಿ ಆರಂಭವಾಗಿದೆ.
Water canon salute to team india flight at Mumbai airport . pic.twitter.com/uzOvyZzxyx
— Sahil Joshi (@sahiljoshii) July 4, 2024
ಭಾರತೀಯ ಕ್ರಿಕೆಟ್ ತಂಡವನ್ನು ಹೊತ್ತ ವಿಮಾನವು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಹೃದಯಸ್ಪರ್ಶಿಯ ಸಂಕೇತವಾಗಿ ಜಲಫಿರಂಗಿಯ ಮೂಲಕ ಸೆಲ್ಯೂಟ್ ನೀಡಲಾಗಿದೆ.
ಟಿ 20 ವಿಶ್ವಕಪ್ ವಿಜೇತ ತಂಡವನ್ನು ನಾರಿಮನ್ ಪಾಯಿಂಟ್ನ ಎನ್ಸಿಪಿಎನಿಂದ ವಾಂಖೆಡೆ ಕ್ರೀಡಾಂಗಣದ ತನಕ ಎರಡು ಗಂಟೆಗಳ ಕಾಲ ತೆರೆದ ಬಸ್ ಮೆರವಣಿಗೆಯಲ್ಲಿ ಕರೆದೊಯ್ಯಲು ಯೋಜಿಸಲಾಗಿದೆ.







