ವಿಂಬಲ್ಡನ್ ಚಾಂಪಿಯನ್ಶಿಪ್: ಮೂರನೇ ಸುತ್ತಿಗೇರಿದ ಅಲೆಕ್ಸಾಂಡರ್ ಝ್ವೆರೆವ್

ಅಲೆಕ್ಸಾಂಡರ್ ಝ್ವೆರೆವ್ | PC : indiatoday̤in
ಲಂಡನ್ : ಅಮೆರಿಕದ ಆಟಗಾರ ಮಾರ್ಕೊಸ್ ಗಿರೊನ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿ ವಿಂಬಲ್ಡನ್ ಚಾಂಪಿಯನ್ಶಿಪ್ ನಲ್ಲಿ ಮೂರನೇ ಸುತ್ತಿಗೇರಿದ ಅಲೆಕ್ಸಾಂಡರ್ ಝ್ವೆರೆವ್ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಗೆಲುವಿನತ್ತ ಹೆಜ್ಜೆ ಇಟ್ಟಿದ್ದಾರೆ.
ಗುರುವಾರ ನಡೆದ ಪುರುಷರ ಸಿಂಗಲ್ಸ್ನ ಎರಡನೇ ಸುತ್ತಿನ ಪಂದ್ಯದಲ್ಲಿ ಝ್ವೆರೆವ್ 6-2, 6-1,6-4 ಸೆಟ್ಗಳ ಅಂತರದಿಂದ ಜಯ ಸಾಧಿಸಿದರು. ಇದರೊಂದಿಗೆ ಮೂರನೇ ಸುತ್ತಿನಲ್ಲಿ ತನ್ನ ಸ್ಥಾನ ಗಿಟ್ಟಿಸಿಕೊಂಡರು. ಝ್ವೆರೆವ್ ಮುಂದಿನ ಸುತ್ತಿನಲ್ಲಿ ಬ್ರಿಟನ್ ಆಟಗಾರ ಕ್ಯಾಮರೊನ್ ನೊರ್ರೆ ಅವರನ್ನು ಎದುರಿಸಲಿದ್ದಾರೆ.
ಈ ಗೆಲುವಿನ ಮೂಲಕ ಝ್ವೆರೆವ್ ಅವರು ಬೊರಿಸ್ ಬೆಕೆರ್ ಹಾಗೂ ಮೈಕಲ್ ಸ್ಟಿಚ್ ಅವರ ದಾಖಲೆಯನ್ನು ಸರಿಗಟ್ಟುವ ಹಾದಿಯಲ್ಲಿದ್ದಾರೆ. ವೃತ್ತಿಪರ ಯುಗದಲ್ಲಿ ಪ್ರಶಸ್ತಿ ಜಯಿಸಿದ ಜರ್ಮನಿಯ ಏಕೈಕ ಆಟಗಾರ ಎನಿಸಿಕೊಂಡು ಐತಿಹಾಸಿಕ ಮೈಲಿಗಲ್ಲು ತಲುಪುವ ವಿಶ್ವಾಸದಲ್ಲಿದ್ದಾರೆ.
ಝ್ವೆರೆವ್ 2022ರ ಯುಎಸ್ ಓಪನ್ ಹಾಗೂ ಕಳೆದ ತಿಂಗಳು ಫ್ರೆಂಚ್ ಓಪನ್ನಲ್ಲಿ ಫೈನಲ್ಗೆ ತಲುಪಿದ್ದರು. ಆದರೆ ಅವರು ಇನ್ನಷ್ಟೇ ಪ್ರಮುಖ ಪ್ರಶಸ್ತಿ ಗೆಲ್ಲಬೇಕಾಗಿದೆ.





