ನವೆಂಬರ್ನಲ್ಲಿ ಟಿ20 ಸರಣಿ | ದಕ್ಷಿಣ ಆಫ್ರಿಕಾಕ್ಕೆ ಟೀಮ್ ಇಂಡಿಯಾ ಪ್ರವಾಸ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡ ನಾಲ್ಕು ಪಂದ್ಯಗಳ ಟಿ20 ಸರಣಿಯನ್ನು ಆಡಲು ನವೆಂಬರ್ನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಕೈಗೊಳ್ಳಲಿದೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಹಾಗೂ ಬಿಸಿಸಿಐ ಪ್ರಕಟಿಸಿವೆ.
ಸರಣಿಯು ನವೆಂಬರ್ 8ರಂದು ಡರ್ಬನ್ನ ಕಿಂಗ್ಸ್ಮೀಡ್ ಕ್ರೀಡಾಂಗಣದಲ್ಲಿ ಅರಂಭವಾಗಲಿದೆ. ಆ ನಂತರ ನ.10(ಪೋರ್ಟ್ ಎಲಿಝಬೆತ್), ನ.13(ಸೆಂಚೂರಿಯನ್) ಹಾಗೂ ನ.15(ಜೋಹಾನ್ಸ್ಬರ್ಗ್)ರಂದು ನಡೆಯಲಿದೆ.
ಸಿಎಸ್ಎ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿ ಈ ಪಂದ್ಯಗಳ ಕುರಿತು ವಿವರ ನೀಡಿದೆ. ನ್ಯೂಝಿಲ್ಯಾಂಡ್ ವಿರುದ್ಧ ಭಾರತದ ಸ್ವದೇಶಿ ಟೆಸ್ಟ್ ಸರಣಿ ಹಾಗೂ ಬಾರ್ಡರ್-ಗವಾಸ್ಕರ್ ಸರಣಿಗಾಗಿ ಮುಂಬರುವ ಭಾರತದ ಆಸ್ಟ್ರೇಲಿಯ ಪ್ರವಾಸದ ನಡುವೆ ಈ ಸರಣಿಯನ್ನು ಆಯೋಜಿಸಲಾಗಿದೆ.
Next Story





