ಪ್ಯಾರಿಸ್ ಒಲಿಂಪಿಕ್ಸ್: ನೀರಜ್ ಚೋಪ್ರಾ ಸಹಿತ 28 ಸದಸ್ಯರ ಅತ್ಲೆಟಿಕ್ಸ್ ತಂಡ ಪ್ರಕಟಿಸಿದ ಎಎಫ್ಐ

ನೀರಜ್ ಚೋಪ್ರಾ | PC : olympics.com
ಹೊಸದಿಲ್ಲಿ: ಪ್ಯಾರಿಸ್ ಒಲಿಂಪಿಕ್ಸ್ಗೆ ಭಾರತದ ಅತ್ಲೆಟಿಕ್ಸ್ ಒಕ್ಕೂಟದ(ಎಎಫ್ಐ)ಆಯ್ಕೆ ಸಮಿತಿಯು ಪುರುಷರ ಜಾವೆಲಿನ್ ಎಸೆತದಲ್ಲಿ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ಆಗಿರುವ ಭಾರತದ ನೀರಜ್ ಚೋಪ್ರಾ ಸಹಿತ 28 ಸದಸ್ಯರನ್ನು ಒಳಗೊಂಡ ಟ್ರ್ಯಾಕ್ ಆ್ಯಂಡ್ ಫೀಲ್ಡ್ ತಂಡದ ಕಿರುಪಟ್ಟಿಯನ್ನು ಪ್ರಕಟಿಸಿದೆ.
ಶಾರ್ಟ್ಲಿಸ್ಟ್ ಮಾಡಲಾಗಿರುವ 28 ಸದಸ್ಯರ ಭಾರತೀಯ ಅಥ್ಲೆಟಿಕ್ಸ್ ತಂಡದಲ್ಲಿ 11 ಮಹಿಳಾ ಕ್ರೀಡಾಪಟುಗಳಿದ್ದಾರೆ. ಟ್ರ್ಯಾಕ್ ಆ್ಯಂಡ್ ಫೀಲ್ಡ್ ಸ್ಪರ್ಧಾವಳಿಯು ಆಗಸ್ಟ್ 1ರಿಂದ 11ರ ತನಕ ಪ್ಯಾರಿಸ್ ನಲ್ಲಿ ನಡೆಯಲಿದೆ.
ವಿಶ್ವ ಅಥ್ಲೆಟಿಕ್ಸ್ ಪ್ಯಾರಿಸ್ ಗೇಮ್ಸ್ ನಲ್ಲಿ ಮ್ಯಾರಥಾನ್ ರೇಸ್ ವಾಕ್ ಮಿಕ್ಸೆಡ್ ರಿಲೇ ಸ್ಪರ್ಧೆಯನ್ನು ಪರಿಚಯಿಸಿದೆ. ಒಲಿಂಪಿಕ್ಸ್ ಕಾರ್ಯಕ್ರಮದಿಂದ ಪುರುಷರ 50 ಮೀ. ರೇಸ್ ವಾಕ್ ಅನ್ನು ಹೊರಗಿಡಲಾಗಿದೆ.
ತಂಡ
ಪುರುಷರ ವಿಭಾಗ: ಅವಿನಾಶ್ ಸಾಬ್ಳೆ(3,000 ಮೀ. ಸ್ಟೀಪಲ್ಚೇಸ್), ನೀರಜ್ ಚೋಪ್ರಾ, ಕಿಶೋರ್ ಕುಮಾರ್ ಜೆನಾ(ಜಾವೆಲಿನ್ ಎಸೆತ), ತಜಿಂದರ್ಪಾಲ್ ಸಿಂಗ್ ತೂರ್(ಶಾಟ್ಪುಟ್), ಪ್ರವೀಣ್ ಚಿತ್ರವೆಲ್, ಅಬ್ದುಲ್ಲ ಅಬೂಬಕರ್(ಟ್ರಿಪಲ್ ಜಂಪ್), ಸರ್ವೇಶ್ ಕುಶಾರೆ(ಹೈಜಂಪ್), ಆಕಾಶ್ದೀಪ್ ಸಿಂಗ್, ವಿಕಾಶ್ ಸಿಂಗ್, ಪರಂಜೀತ್ ಸಿಂಗ್ ಬಿಶ್ತ್(20 ಕಿಮೀ ರೇಸ್ ವಾಕ್), ಮುಹಮ್ಮದ್ ಅನಸ್, ಮುಹಮ್ಮದ್ ಅಜ್ಮಲ್, ಅಮೋಜ್ ಜೇಕಬ್, ಸಂತೋಷ್ ತಮಿಳರಸನ್, ರಾಜೇಶ್ ರಮೇಶ್, ಮಿಜೊ ಚಾಕೊ ಕುರಿಯನ್(4-400 ಮೀ.ರಿಲೇ), ಸೂರಜ್ ಪಾನ್ವರ್(ರೇಸ್ ವಾಕ್ ಮಿಕ್ಸೆಡ್ ಮ್ಯಾರಥಾನ್)
ಮಹಿಳೆಯರ ವಿಭಾಗ: ಕಿರಣ್ ಪಹಾಲ್(400 ಮೀ.), ಪಾರುಲ್ ಚೌಧರಿ(3,000 ಮೀ.ಸ್ಟೀಪಲ್ಚೇಸ್ ಹಾಗೂ 5000 ಮೀ.), ಜ್ಯೋತಿ ಯರ್ರಾಜಿ(100 ಮೀ.ಹರ್ಡಲ್ಸ್), ಅನ್ನು ರಾಣಿ(ಜಾವೆಲಿನ್ ಎಸೆತ), ಅಭಾ ಕಥುವಾ(ಶಾಟ್ಪುಟ್), ಜ್ಯೋತಿಕಾ ಶ್ರೀದಾಂಡಿ, ಸುಭಾ ವೆಂಕಟೇಶನ್, ವಿದ್ಯಾ ರಾಮರಾಜ್, ಪೂವಮ್ಮ ಎಂ.ಆರ್., ಪ್ರಾಚಿ(4-400 ಮೀ.ರಿಲೇ), ಪ್ರಿಯಾಂಕಾ ಗೋಸ್ವಾಮಿ(20ಕಿಮಿ ರೇಸ್ ವಾಕ್/ರೇಸ್ ವಾಕ್ ಮಿಕ್ಸೆಡ್ ಮ್ಯಾರಥಾನ್).







